ಮೃತಪಟ್ಟ ಷೇರುದಾರರಿಗೆ 5000 ರೂ. ಯೋಜನೆ

111

Get real time updates directly on you device, subscribe now.


ಕುಣಿಗಲ್: ಸಂಘದ ವತಿಯಿಂದ ಷೇರುದಾರರ ಕಲ್ಯಾಣ ನಿಧಿ ಅಡಿಯಲ್ಲಿ ಮೃತಪಟ್ಟ ಷೇರುದಾರರಿಗೆ 5000 ರೂ. ನೀಡುವ ಯೋಜನೆ ಆರಂಭಿಸಲಾಗಿದೆ ಎಂದು ಕುಣಿಗಲ್ ಟೌನ್ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳಿದರು. ಗುರುವಾರ ಸಂಘದ ಕಾರ್ಯಕಾರಿ ಸಮಿತಿ ಸಭೆಯ ನಂತರ ಕಳೆದ ಸಾಲಿನಲ್ಲಿ ಮೃತಪಟ್ಟ ಐದು ಜನ ಷೇರುದಾರರ ಕುಟುಂಬಗಳಿಗೆ ತಲಾ 5,000ರೂ. ಚೆಕ್ ವಿತರಿಸಿ ಮಾತನಾಡಿ, ತಾಲೂಕಿನಲ್ಲಿ ನಮ್ಮ ಸಂಘವು ಶತಮಾನ ಪೂರೈಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಲಾಭ ನಷ್ಟ ನೋಡದೆ ಪಡಿತರದಾರರಿಗೆ ಆಹಾರ ಧಾನ್ಯ ವಿತರಣೆ ನೆರವೇರಿಸಲಾಗುತ್ತಿದೆ, ಇದೀಗ ಸಂಘದ ಷೇರುದಾರ ಮೃತಪಟ್ಟಲ್ಲಿ ಅವರ ಹತ್ತಿರದ ಸಂಬಂಧಗಳಿಗೆ ರೂ.5000 ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ, ಸಂಘದ ವತಿಯಿಂದ ಮತ್ತಷ್ಟು ಜನಪ್ರಿಯ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಲು ಎಲ್ಲಾ ಅಗತ್ಯ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಕಡಿಮೆ ದರದಲ್ಲಿ ಚಿನ್ನಾಭರಣ ಅಡಮಾನ ಸಾಲ ಸೇರಿದಂತೆ ಇತರೆ ಯೋಜನೆ ಆರಂಭಿಸುವುದಾಗಿ ಸಹ ತಿಳಿಸಿದರು.

ಸಂಘದ ಉಪಾಧ್ಯಕ್ಷ ಅನೂಪ್ ಕುಮಾರ್, ನಿರ್ದೇಶಕರಾದ ವೆಂಕಟೇಶ್, ಇ.ಮಂಜು, ಎಲೇಗೌಡ, ಸಂಪತ್, ಆನಂದ್ ಸಿಂಗ್, ರಾಘವೇಂದ್ರ, ರೇವಮ್ಮ ಕಾರ್ಯದರ್ಶಿ ರಾಜು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!