ಕುಣಿಗಲ್: ತಾಲೂಕಿನ ಎಡೆಯೂರು ಕ್ಷೇತ್ರದಲ್ಲಿ ಕೊರೊನಾ ಕಾರಣದಿಂದ ಶ್ರೀಸ್ವಾಮಿಯವರ ಜಾತ್ರಾ ಮಹೋತ್ಸವ ಸಾಂಕೇತಿಕವಾಗಿ ಆಚರಣೆ ಮಾಡಲು ಜಿಲ್ಲಾಡಳಿತದ ಸೂಚನೆ ಮೇರೆಗೆ ತೀರ್ಮಾನ ಮಾಡಲಾಗಿದೆ.
ಇದರಂತೆ ಶ್ರೀಸ್ವಾಮಿಯವರ ರಥದ ದುರಸ್ತಿ ಕಾರ್ಯ ಗುರುವಾರ ದೇವಾಲಯ ಸಮಿತಿಯಿಂದ ಹಮ್ಮಿಕೊಳ್ಳಲಾಗಿತ್ತು, ಶಾಸಕ ಡಾ.ರಂಗನಾಥ್ ಈ ವೇಳೆ ಭೇಟಿ ನೀಡಿ ರಥದ ದುರಸ್ತಿ ಕಾರ್ಯ ಹಾಗೂ ರಥದ ಇತಿಹಾಸದ ಬಗ್ಗೆ ದೇವಾಲಯದ ಸಿಬ್ಬಂದಿಯಿಂದ ಮಾಹಿತಿ ಪಡೆದರು. ದೇವಾಲಯದ ಅಧೀಕ್ಷಕ ಮಂಜುನಾಥ, ಪಾರುಪತ್ತೆದಾರ ಸುರೇಶ್ ಇತರರು ಉಪಸ್ಥಿತರಿದ್ದರು. ಕೊರೊನ ಮಹಾಮಾರಿಯ ಕಾರಣ ಕಳೆದ ಸಾಲಿನಲ್ಲೂ ಶ್ರೀಸ್ವಾಮಿಯವರ ಜಾತ್ರೆ ನಡೆದಿರಲಿಲ್ಲ, ಆದರೆ ದೇವಾಲಯ ಸಮಿತಿ ವತಿಯಿಂದ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು, ಈ ಬಾರಿ ಸಾಂಕೇತಿಕವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಗ್ರಾಮಸ್ಥರನ್ನು ಹೊರತು ಪಡಿಸಿ ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಕ್ಷೇತ್ರದಲ್ಲಿ ಸೋಂಕು ನಿವಾರಣೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸರಳ ಜಾತ್ರಾ ಮಹೋತ್ಸವ ಆಚರಣೆಗೆ ನಿರ್ಧಾರ
Get real time updates directly on you device, subscribe now.
Next Post
Comments are closed.