ಕೊಡಿಗೇನಹಳ್ಳಿ: ಖದೀಮರ ಗುಂಪೊಂದು ಪೊಲೀಸರ ಸೋಗಿನಲ್ಲಿ ಬಂದು ನಡೆದುಕೊಂಡು ಹೋಗುತಿದ್ದ ಮಹಿಳೆ ಯನ್ನು ಪೊಲೀಸರು ಎಂದು ನಂಬಿಸಿ ಸುಮಾರು 60 ಗ್ರಾಂ. ಚಿನ್ನದ ಚೈನ್ ಪಡೆದು ಪರಾರಿಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಪಂ ಮುಂಭಾಗ ದೊಡ್ಡ ಮಾಲೂರು ಗ್ರಾಮದ ವೃದ್ಧೆ ಸರೋಜಮ್ಮ (85) ಗುರುವಾರದ ಸಂತೆಗೆ ತರಕಾರಿ ಖರೀದಿಗೆ ತೆರಳುತ್ತಿದ್ದಾಗ ನಾವು ಪೊಲೀಸ್ ಸ್ಕ್ವಾಡ್, ವಂಚಕರನ್ನು ಪತ್ತೆ ಮಾಡಲು ಬಂದಿದ್ದೇವೆ ಎಂದು ಹೇಳಿ ನಿಮ್ಮ ಕತ್ತಿನಲ್ಲಿರುವ ಸರ ಬಿಚ್ಚಿಕೊಡಿ ಕವರ್ ಮಾಡಿ ಕೊಡುತ್ತೇವೆ ಎಂದು ಹೇಳಿ ಪೇಪರ್ ನಲ್ಲಿ ಕಲ್ಲು ಪ್ಯಾಕ್ ಮಾಡಿಕೊಟ್ಟು ಪರಾರಿಯಾಗಿದ್ದಾರೆ.
ವಂಚನೆ ಅರಿವಿಗೆ ಬಂದ ಬಳಿಕ ಮೋಸ ಹೋದ ವೃದ್ಧೆ ಸರೋಜಮ್ಮ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಸ್ಥಳಕ್ಕೆ ಪಿಎಸ್ ಐ ಶ್ರೀನಿವಾಸ್ ಪ್ರಸಾದ್, ಎ ಎಸ್ ಐ ಮೆಹಬೂಬ್ ಖಾನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಆಸುಪಾಸಿನ ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ಮಾಡುತಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.