ಕಳಪೆ ಕಾಮಗಾರಿ ಖಂಡಿಸಿ ರೈತರ ಪ್ರತಿಭಟನೆ

78

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಮೇಲಿನವಳಗೆರೆ ಹಳ್ಳಿ ಬಳಿ ನಡೆಯುತ್ತಿರುವ ಹೇಮಾವತಿ ನಾಲಾ ಕಾಮಗಾರಿ ಅತ್ಯಂತ ಕಳಪೆಯದ್ದಾಗಿದೆ ಎಂದು ಆರೋಪಿಸಿ ರೈತರು ಮಾಯಸಂದ್ರ ಹೇಮಾವತಿ ನಾಲಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನ ಮೇಲಿನವಳಗೆರೆ ಹಳ್ಳಿ ಗ್ರಾಮದಿಂದ ಹೇಮಾವತಿ ನಾಲೆಯ ಕಳೆ ಕಾಮಗಾರಿ ಬಗ್ಗೆ ದೂರು ನೀಡಲು ಬಂದ ರೈತರ ಅಹವಾಲು ಕೇಳುವುದೇ ಇಂಜಿನಿಯರ್ಗಳು ಬರಲಿಲ್ಲ, ಇದರಿಂದ ರೊಚ್ಚಿಗೆದ್ದ ರೈತರು ಇಂಜಿನಿಯರ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಹೇಮಾವತಿ ನಾಲಾ ಕಚೇರಿಯ ವ್ಯವಸ್ಥಾಪಕ ಪೆರುಮಾಳ್ ಅವರಿಂದ ಮೊಬೈಲ್ ನಂಬರ್ ಪಡೆದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚರಣ್ ಸಿಂಗ್ ಚೌಹಾಣ್ ಅವರಿಗೆ ರೈತರ ಪರವಾಗಿ ಅಣ್ಣಪ್ಪ ಕರೆ ಮಾಡಿದರು, ಆದರೆ ನಾನು ಬರುವುದಿಲ್ಲ, ನೀವು ಬೇಕಾದರೆ ಅಲ್ಲಿಯೇ ಮಲಗಿಕೊಳ್ಳಿ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಉದ್ಧಟತನದ ಉತ್ತರ ನೀಡಿದ ಎಇಇ ವರ್ತನೆಯಿಂದ ರೈತರು ಮತ್ತಷ್ಟು ಆಕ್ರೋಶ ಭರಿತರಾದರು.

ಎಇಇ ಚರಣ್ ಸಿಂಗ್ ಚೌಹಾಣ್ ನೀಡಿದ ಉದ್ಧಟತನದ ಉತ್ತರದಿಂದ ಆಕ್ರೋಶ ಭರಿತರಾದ ರೈತರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮುಂದುವರೆಸುವ ನಿರ್ಧಾರ ಕೈಗೊಂಡರು, ಹೇಮಾವತಿ ಮುಖ್ಯ ಇಂಜಿನಿಯರ್ ವರದಯ್ಯನವರಿಗೆ ದೂರವಾಣಿ ಮೂಲಕ ರೈತರು ತಮ್ಮ ಅಹವಾಲು ಹೇಳಿಕೊಂಡರು, ರೈತರ ಮನವಿಗೆ ಸ್ಪಂದಿಸಿ ಸಿಇ ಅವರು ಯಡಿಯೂರು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್ ಅವರನ್ನು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿರುವುದಾಗಿ ತಳಿಸುವ ಮೂಲಕ ರೈತರನ್ನು ಸಮಾಧಾನ ಪಡಿಸಿದರು.

ಸಮಸ್ಯೆ ಹೇಳಲು ಬಂದ ರೈತರೊಂದಿಗೆ ಉದ್ಧಟತನದ ಮಾತುಗಳನ್ನಾಡಿದ ಎಇಇ ಚರಣ್ ಸಿಂಗ್ ಚೌಹಾಣ್ ನಡೆಯ ಬಗ್ಗೆ ಎಇ ವರದಯ್ಯನವರು ಬೇಸರ ವ್ಯಕ್ತಪಡಿಸಿದರು, ಎಇಇಗೆ ಅಗತ್ಯ ಸೂಚನೆ ನೀಡುವುದಾಗಿ ಸೂಚನೆ ನೀಡುವ ಮೂಲಕ ರೈತರನ್ನು ಸಮಾಧಾನ ಪಡಿಸುವಲ್ಲಿಯಶ ಕಂಡರು.
ಕಾಮಗಾರಿ ನಡೆಯುವ ಸ್ಥಳಕ್ಕೆ ಕಾರ್ಯಪಾಲಕ ಇಂಜಿನಿಯರ್ ನ್ನು ಕಳುಹಿಸಿ ಕೊಡುವ ಮಾತಿಗೆ ಸಮ್ಮತಿಸಿದ ರೈತರು ಪ್ರತಿಭಟನೆಗೆ ಅಂತ್ಯ ಹಾಡಿ ಗ್ರಾಮದತ್ತ ಹೆಜ್ಜೆ ಹಾಕಿದರು.
ಪ್ರತಿಭಟನೆಯಲ್ಲಿ ರೈತರಾದ ಜಗದೀಶ್, ಪುಟ್ಟರಾಜ್, ಛಾಯೇಶ್, ನಾಗರಾಜ್, ಶರತ್, ಆನಂದ್, ನಟರಾಜ್, ಮೋಹನ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!