ಹುಳಿಯಾರು: ತನ್ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆಯೇ ದೈಹಿಕ ಶಿಕ್ಷಣ ಶಿಕ್ಷಕ ಅತ್ಯಾಚಾರ ಎಸಗಿ ನ್ಯಾಯಂಗ ಬಂಧನಕ್ಕೆ ಒಳಪಟ್ಟಿರುವ ಘಟನೆ ಹುಳಿಯಾರು ಹೋಬಳಿಯ ಬೆಳ್ಳಾರದಲ್ಲಿ ನಡೆದಿದೆ.
ಬೆಳ್ಳಾರದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದುರ್ಗಪ್ಪ ತುಮರಿಕೊಪ್ಪ ವಿದ್ಯಾರ್ಥಿನಿಯ ಮೇಲೆ ಅತ್ಯಚಾರ ಎಸಗಿ ಬಂಧಿತರಾಗಿರುವ ದುಷ್ಟ ಶಿಕ್ಷಕನಾಗಿದ್ದಾನೆ, ಈತ ತನ್ನ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ 15 ವರ್ಷದ ಬಾಲಕಿಗೆ ನಿತ್ಯವೂ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ, ಅಲ್ಲದೆ ಬಾಲಕಿಯ ಮೊಬೈಲ್ ನಂಬರ್ ಗೆ ಅಶ್ಲೀಲ ಮೆಸೇಜ್ ಗಳನ್ನೂ ಕಳುಹಿಸಿ ಲೈಂಗಿಕ ಹಿಂಸೆ ನೀಡುತ್ತಿದ್ದ, ಪೋಷಕರಿಗೆ ಹೇಳದಂತೆ ಬೆದರಿಕೆ ಸಹ ಹಾಕಿದ್ದ, ಪ್ರತ್ಯೇಕ ಕೊಠಡಿಗೆ ಕರೆಸಿ ಮಾತನಾಡುವುದು, ಹೀಗೆ ನಿತ್ಯ ಪೀಡಿಸುತ್ತಿದ್ದ ಶಿಕ್ಷಕ ಇತ್ತೀಚೆಗೆ ಮಧ್ಯರಾತ್ರಿ 1 ಗಂಟೆಗೆ ಮನೆಯ ಬಳಿ ಕಾರಿನಲ್ಲಿ ಬಂದು ಮೊಬೈಲ್ ಕರೆ ಮಾಡಿ ಬಲವಂತದಿಂದ ಹೊರಬರಲು ತಿಳಿಸಿ ನಂತರ ಪ್ರೌಢಶಾಲೆಯ ಮುಂದೆ ಇರುವ ಕಾಡಿಗೆ ಕರೆದುಕೊಂಡು ಹೋಗಿ ಬಲವಂತದಿಂದ ಲೈಂಗಿಕ ಕ್ರಿಯೆ ನಡೆಸಿ ಮನೆಗೆ ಬಿಟ್ಟು ಹೋಗಿದ್ದ.
ವಿದ್ಯಾರ್ಥಿನಿಯ ತಂದೆ ರಾತ್ರಿ ಶೌಚಕ್ಕೆ ಎದ್ದಾಗ ಮಗಳು ಮನೆಯಲ್ಲಿದ್ದನ್ನು ಕಂಡು ಗಾಬರಿಯಾಗಿ ಹುಡುಕಾಟ ಆರಂಭಿಸಿದ್ದಾರೆ, ಅಷ್ಟರಲ್ಲಿ ಮಗಳು ಮನೆಗೆ ಬಂದಾಗ ತಡ ರಾತ್ರಿಯಲ್ಲಿ ಎಲ್ಲಿಹೋಗಿದ್ದೆ ಎಂದು ಪ್ರಶ್ನಿಸಿದಾಗ ಶಿಕ್ಷಕನ ಲೈಂಗಿಕ ಆಟದ ಬಗ್ಗೆ ತಿಳಿಸಿದ್ದಾಳೆ, ಮುಂಜಾನೆಯೇ ವಿಚಾರಿಸಲು ಶಾಲೆಗೆ ಹೋದಾರೆ ಶಿಕ್ಷಕ ದುರ್ಗಪ್ಪ ನಾಪತ್ತೆಯಾಗಿದ್ದ, ಬಂಧು ಬಳಗದವರಿಗೆ ವಿಷಯ ಮುಟ್ಟಿಸಿ ನಂತರ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಿ ಎಸ್ ಐ ಧರ್ಮಾಂಜಿ ಅವರು ಪ್ರಕರಣ ದಾಖಲಿಸಿ ಅತ್ಯಚಾರ ಎಸಗಿದ ಶಿಕ್ಷಕನನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
Comments are closed.