ಅರ್ಹರನ್ನು ವಸತಿ ಯೋಜನೆಗೆ ಗುರ್ತಿಸಿ

575

Get real time updates directly on you device, subscribe now.

ಕುಣಿಗಲ್: ವಸತಿ ಯೋಜನೆಯ ಫಲಾನುಭವಿಗಳನ್ನು ಗುರುತಿಸುವಾಗ ನಿರ್ಗತಿಕರು, ಅರ್ಹರನ್ನು ಗುರುತಿಸಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರದ ಯೋಜನೆ ಸದ್ಬಳಕೆಯಾಗುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಶಾಸಕ ಡಾ.ರಂಗನಾಥ್ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದರು.
ಗುರುವಾರ ತಾಲೂಕಿನ ನಿಡಸಾಲೆ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಮಾತನಾಡಿ, ಸಂಸದ ಡಿ.ಕೆ.ಸುರೇಶ್ ಹಾಗೂ ತಾವು ಸರ್ಕಾರದ ಮೇಲೆ ಸತತ ಒತ್ತಡ ಹೇರುವ ಮೂಲಕ ತಾಲೂಕಿಗೆ 2,000 ಮನೆ ಮಂಜೂರು ಮಾಡಿಸಲಾಗಿದ್ದು, ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 60 ಮನೆ ಹಂಚಿಕೆ ಮಾಡಲಾಗಿದೆ. ವಸತಿ ಯೋಜನೆ ನೀಡುವಾಗ ಅನರ್ಹರ ಗುರುತಿಸದೆ ಅರ್ಹರನ್ನು ಗುರುತಿಸಿ ಯೋಜನೆ ಸದುಪಯೋಗವಾಗುವಂತೆ ಮಾಡಬೇಕೆಂದರು.
ಬೇಸಿಗೆ ಮುಂದಿನ ದಿನಗಳಲ್ಲಿ ತೀವ್ರವಾಗುತ್ತಿದೆ, ಇರುವ ಕುಡಿಯುವ ನೀರು ಪೋಲಾಗದೆ ಸದ್ಬಳಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ತಾಲೂಕಿಗೆ ನಿಗದಿತ ಪ್ರಮಾಣದ ಹೇಮಾವತಿ ನೀರು ಹರಿಯದೆ ತಾಲೂಕಿನಾದ್ಯಂತ ನೀರಿನ ಕೊರತೆ ಕಾಣುವಂತಾಗಿದೆ. ಸದಸ್ಯೆ ಲಕ್ಷ್ಮೀ ಪಾರ್ಥಸಾರಥಿ, ಇತರೆ ಸದಸ್ಯರು, ನಿಡಸಾಲೆ ಗ್ರಾಮದಲ್ಲಿನ ಬೋರ್ನಲ್ಲಿ ನೀರಿನ ಕೊರತೆ ಇದೆ, ಬೀಸೆಗೌಡನ ದೊಡ್ಡಿಯಲ್ಲಿ ಈಗ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ, ಹೊಸದಾಗಿ ಬೋರ್ ಕೊರೆಸುವಂತೆ ಮನವಿ ಮಾಡಿದರು. ಶಾಸಕರು ಈ ನಿಟ್ಟಿನಲ್ಲಿ ಸೂಕ್ತವಾದ ಕಡೆ ಬೋರ್ ಹಾಕಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಉಪಾಧ್ಯಕ್ಷ ವೆಂಕಟೇಶ, ಪಿಡಿಒ ಪ್ರಪುಲ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!