ತುಮಕೂರು ವಿವಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

108

Get real time updates directly on you device, subscribe now.


ತುಮಕೂರು: ಜಾತಿ ಮೀರಿ ಕೆಲಸ ಮಾಡಿದವರು ಮಹಾ ಪುರುಷರಾದರು, ಮಹನೀಯರನ್ನು ಯಾವುದೇ ಜಾತಿ, ಧರ್ಮ, ಪಂಥಗಳಿಗೆ ಸೀಮಿತಗೊಳಿಸಬಾರದು, ಅವರ ಕಾರ್ಯಗಳನ್ನು ಎಲ್ಲರೂ ಅಳವಡಿಸಿಕೊಂಡು ಸಾಗಬೇಕು ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಗಿರಿಜನ ಉಪ ಯೋಜನೆ ಘಟಕವು ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿ, ಮಹನೀಯರ ಜಯಂತಿಗಳಿಂದ ನಮ್ಮ ವ್ಯಕ್ತಿತ್ವವು ರೂಪುಗೊಳ್ಳಬೇಕು, ಬದಲಾವಣೆಗಾಗಿ ಕೆಲಸ ಮಾಡಬೇಕು, ಸಾಧನೆಯು ಮಾಮೂಲಿ ವ್ಯಕ್ತಿಯನ್ನು ಮಹಾ ಪುರುಷನನ್ನಾಗಿಸುತ್ತದೆ ಎಂದರು.

ದಾವಣಗೆರೆ ವಿವಿಯ ಸಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಿ.ಪಿ.ಶಿವಲಿಂಗಪ್ಪ ಮಾತನಾಡಿ, 300ಕ್ಕೂ ಅಧಿಕ ಭಾಷೆಗಳಲ್ಲಿ ಇರುವ ರಾಮಾಯಣವೂ ಸಂಸ್ಕೃತಿ, ರಾಜಕೀಯ, ಸಾಮಾಜಿಕ ಚಿತ್ರಗಳನ್ನು ಚಿತ್ರಿಸಿದೆ, ಪಾತ್ರಗಳ ಮೂಲಕ ಬದುಕಿಗೆ ಬೇಕಾದ ಆದರ್ಶ, ಕೊಡುಗೆ, ಪರಿಪಾಲನೆ, ಆಧ್ಯಾತ್ಮಿಕ ದೃಷ್ಟಿಕೋನವನ್ನು ಪರಿಪಕ್ವಗೊಳಿಸುತ್ತದೆ, ಇಂತಹ ಮಹಾ ಕಾವ್ಯ ರಚಿಸಿದ ವಾಲ್ಮೀಕಿ ಮಹಾ ಪುರುಷ ಎಂದು ತಿಳಿಸಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ವ್ಯಕ್ತಿ ಶಕ್ತಿಯಾದಾಗ ಆತನ ಜಯಂತಿ ಆಚರಿಸುತ್ತೇವೆ, ರಾಮಾಯಣ ರಚಿಸಿದ ವಾಲ್ಮೀಕಿ ತತ್ವಾದರ್ಶಗಳ ಶಕ್ತಿ ಎಂದರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಶೇಟ್ ಎಂ. ಪ್ರಕಾಶ್, ಸಹಾಯಕ ಪ್ರಾಧ್ಯಾಪಕ ಡಾ.ದ್ವಾರಕನಾಥ್.ವಿ, ಡಾ.ಲಕ್ಷ್ಮೀರಂಗಯ್ಯ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!