ಇಂಜಿನಿಯರ್ ನಾಗೇಂದ್ರಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ

128

Get real time updates directly on you device, subscribe now.


ತುಮಕೂರು: ಅಕ್ರಮವಾಗಿ ತಮ್ಮ ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ನಾಗೇಂದ್ರಪ್ಪ ಮನೆ ಸೇರಿದಂತೆ ಐದು ಕಡೆ ಬೆಳ್ಳಂಬೆಳಿಗ್ಗೆ ತುಮಕೂರು, ಮೈಸೂರು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.

ಶಿರಾ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯ ಇಂಜಿನಿಯರ್ ನಾಗೇಂದ್ರಪ್ಪ ಎಂಬುವರು ತಮ್ಮ ಆದಾಯಕ್ಕಿಂತ ಮೀರಿ ಅಕ್ರಮವಾಗಿ ಆಸ್ತಿಪಾಸ್ತಿ ಸಂಪಾದಿಸಿದ್ದಾರೆ ಎಂಬ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸೋಮವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅವರಿಗೆ ಸಂಬಂಧಿಸಿದ ಕಚೇರಿ, ಮನೆ, ಫಾರಂ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದು, ಮಹತ್ವದ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ತುಮಕೂರಿನ ಬಟವಾಡಿ ಸಮೀಪದ ಮಹಾಲಕ್ಷ್ಮಿ ನಗರದ 3ನೇ ಕ್ರಾಸ್ ನಲ್ಲಿರುವ ಇಂಜಿನಿಯರ್ ನಾಗೇಂದ್ರಪ್ಪನವರ ನಿವಾಸ, ಶಿರಾ ಕಚೇರಿ ಹಾಗೂ ಶಿರಾ ತಾಲೂಕಿನ ಮದ್ದೇನಹಳ್ಳಿಯ ಮನೆ, ರಾಗಲಹಳ್ಳಿ ಮನೆ, ಫಾರಂ ಹೌಸ್ ಮೇಲೆ ಲೋಕಾ ಅಧಿಕಾರಿಗಳ ತಂಡ ದಾಳಿ ಮಾಡಿದ್ದಾರೆ.

ತುಮಕೂರಿನ ಮನೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಎರಡು ಬೈಕ್, ಎರಡು ಕಾರು ಇತರೆ ದಾಖಲೆ ದೊರೆತಿವೆ ಎನ್ನಲಾಗಿದೆ, ಮನೆಯಲ್ಲಿ ಅಧಿಕಾರಿಗಳ ತಂಡ ತಪಾಸಣೆ ಮುಂದುವರೆಸಿದ್ದು, ತಪಾಸಣೆ ಮುಗಿದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ತುಮಕೂರು ಲೋಕಾಯುಕ್ತ ಎಸ್ಪಿ ವಲಿಬಾಷಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್, ಇನ್ಸ್ಪೆಕ್ಟರ್ ಗಳಾದ ಶಿವರುದ್ರಪ್ಪ ಮೇಟಿ, ಸಲೀಂ, ರಾಮರೆಡ್ಡಿ, ಅನಿಲ್ಕುಮಾರ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!