ಗುಬ್ಬಿ: ಸುಮಾರು 42 ವರ್ಷಗಳ ಕಾಲ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಣೆ ಮಾಡಿ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸೋಮಶೇಖರ್ ಅವರಿಗೆ ಅರಣ್ಯ ಇಲಾಖೆ ಹಾಗೂ ಹಲವು ಸಂಘಟನೆಗಳಿಂದ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಅವರು ನನ್ನ 42 ವರ್ಷದ ಅವಧಿಯಲ್ಲಿ ಕಾಡನ್ನೇ ನನ್ನ ಉಸಿರನ್ನಾಗಿ ಮಾಡಿಕೊಂಡಿದ್ದೆ, ನಾನು ಕೆಲಸ ಮಾಡಿರುವಂತಹ ಎಲ್ಲಾ ಭಾಗದಲ್ಲಿಯೂ ಕೂಡ ಅರಣ್ಯ ಸಂರಕ್ಷಣೆ ಮಾಡುವುದು ನನ್ನ ಆದ್ಯ ಕರ್ತವ್ಯವಾಗಿತ್ತು, ಮಳೆ ಇಲ್ಲದಂತಹ ಸಂದರ್ಭದಲ್ಲಿಯೂ ಗಿಡಗಳನ್ನು ಉಳಿಸಲು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದೆ, ಅಂದು ಹಾಕಿದ್ದಂತಹ ಪುಟ್ಟ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ತಲೆಯೆತ್ತಿ ನೋಡಿದಾಗ ಸಿಗುವಷ್ಟು ಸಂತೋಷ ಎಲ್ಲಿಯೂ ಸಿಗುವುದಿಲ್ಲ ಎಂದು ತಿಳಿಸಿದರು.
ನಾನು ಕೆಲಸ ಮಾಡುವಂತಹ ಸಂದರ್ಭದಲ್ಲಿ ನನ್ನ ಮೇಲೆ ಅಧಿಕಾರಿಗಳು ಕೊಟ್ಟಂತಹ ಸಹಕಾರದಿಂದಲೇ ನನಗೆ ಹೆಚ್ಚಿನ ಶಕ್ತಿ ಬಂದಿತ್ತು, ಕಾಯ, ವಾಚ, ಮನಸ ಕೆಲಸ ಮಾಡಿದ್ದೇನೆ, ಅದು ನನಗೆ ತೃಪ್ತಿ ತಂದಿದೆ, ಇನ್ನೂ ಕೂಡ ನಾನು ಅರಣ್ಯ ಸಂರಕ್ಷಿಸುವ ಕೆಲಸ ಮುಂದುವರಿಸುತ್ತೇನೆ ಎಂದು ತಿಳಿಸಿದರು.
ಎಸಿಎಫ್ ಚಿಕ್ಕ ರಾಜೇಂದ್ರ ಮಾತನಾಡಿ ಇಲ್ಲಿಗೆ ಯಾರೇ ಅರಣ್ಯ ಅಧಿಕಾರಿಗಳು ಬಂದರೂ ಅವರಿಗೆ ಮಾರ್ಗದರ್ಶಕರಾಗಿ ಸೋಮಶೇಖರ್ ಕೆಲಸ ಮಾಡಿದ್ದಾರೆ, ಇಡೀ ತಾಲೂಕಿನ ಎಲ್ಲಾ ಭಾಗದಲ್ಲಿಯೂ ಅವರಿಗೆ ಹೆಚ್ಚಿನ ಪರಿಚಯ ಇದ್ದುದರಿಂದ ಇಂತಹ ಸರ್ವೇ ನಂಬರ್ ನಲ್ಲಿ ಇದೆ ಅರಣ್ಯ ಪ್ರದೇಶ ಇದೆ ಎಂದು ಹೇಳುವಷ್ಟು ಬುದ್ಧಿವಂತಿಕೆ ಅವರಲ್ಲಿದ್ದು ಮುಂದಿನ ದಿನಗಳಲ್ಲಿಯೂ ಅವರು ನಮ್ಮ ಇಲಾಖೆಯ ಜೊತೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ನಾಗರಾಜು, ಚಂದ್ರಪ್ಪ, ಸತೀಶ್ ಚಂದ್ರ, ರವಿ, ನಿವೃತ್ತ ಎಫ್ ಓ ರಾಜಣ್ಣ, ಸಿಬ್ಬಂದಿ ಹಾಗೂ ಅನೇಕ ಸಂಘಟನೆಯ ಮುಖಂಡರು, ಜನಪ್ರತಿನಿಧಿಗಳು ಹಾಜರಿದ್ದರು.
Comments are closed.