ತುಮಕೂರು: ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾನು ರಾಜಣ್ಣನವರಿಗೆ ಅಭಾರಿ ಆಗಿದ್ದಾನೆ, ಆ ಅದೃಷ್ಟ ಕೂಡಿ ಬರಲಿ ಅಂತ ನಾನು ಆಸೆ ಪಡ್ತೀನಿ, ಆ ಅದೃಷ್ಟ ಯಾವಾಗ ಕೂಡಿ ಬರುತ್ತೆ ಅಂತ ಹೇಳೋಕೆ ಆಗಲ್ಲ, ತುಮಕೂರಿನವರು ಅಲ್ವಾ ನೀವು, ನಮಗೆ ಒಳ್ಳೆದಾಗಬೇಕು ಅಂದ್ರೆ ನನಗೆ ಸಪೊರ್ಟ್ ಮಾಡಿ ಎಂದು ಮಾಧ್ಯಮದವರನ್ನು ಕೇಳಿದರು.
ಪೊಲೀಸ್ ಇಲಾಖೆಯಲ್ಲಿ ಕನಿಷ್ಠ ಶೇ.70 ಸಿಬ್ಬಂದಿಗೆ ವಸತಿ ಒದಗಿಸಲು ತೀರ್ಮಾನ ಮಾಡಿದ್ದೇವೆ, ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಪೊಲೀಸರ ಕುಟುಂಬಗಳು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ಈ ತಿರ್ಮಾನ ಮಾಡಿದ್ದೇವೆ, ಹಣಕಾಸಿನ ಸಚಿವರು ಸಿಎಂ ಸಿದ್ದರಾಮಯ್ಯ ಇದಕ್ಕೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದಾರೆ, ಹಾಗಾಗಿ ತುಮಕೂರಿನಲ್ಲಿ 72 ವಸತಿಗಳನ್ನ ಉದ್ಘಾಟನೆ ಮಾಡಿದ್ದೇವೆ ಎಂದರು.
ಪ್ರೀಯಾಂಕ ಖರ್ಗೆ ಗೆ ಹಾಗೂ ಪರಮೇಶ್ವರ್ ಗೆ ನಾಚಿಕೆ ಆಗ್ಬೇಕು ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿಎಂ ಸಿದ್ದರಾಮಯ್ಯ ಅವರು ಹೇಳುವ ಹಾಗೆ ಈಶ್ವರಪ್ಪಗೆ ಮೆದುಳು ಹಾಗೆ ನಾಲಿಗೆಗೆ ಲಿಂಕ್ ತಪ್ಪಿದೆ, ನಾನು ಅದನ್ನೆ ಹೇಳ್ತೀನಿ ಎಂದರು.
ನಾನು ಸಿಎಂ ಆಗಲು ಆಸೆ ಪಡ್ತೀನಿ: ಪರಂ
Get real time updates directly on you device, subscribe now.
Next Post
Comments are closed.