ಕುಣಿಗಲ್: ಕೆಲಸಕ್ಕೆಂದು ಹೋದವನು ಏಳು ವರ್ಷವಾದರೂ ವಾಪಸ್ ಬಾರದೆ ಇದ್ದಾಗ ಆತಂಕ್ಕೆ ಒಳಗಾದ ತಾಯಿ ಮಗನನ್ನು ಹುಡುಕಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಕಾಣೆಯಾದ ಮಗನನ್ನು ಪತ್ತೆ ಹಚ್ಚಿ ತಾಯಿ ವಶಕ್ಕೆ ನೀಡಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸೊಬಗಾನಹಳ್ಳಿ ಗ್ರಾಮದ ಬಾಲಕೃಷ್ಣ (35) ಏಳು ವರ್ಷಗಳ ಹಿಂದೆ ಅಂದರೆ 2017ರಲ್ಲಿ ತಿರುಪತಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದ, ಬಾಲಕೃಷ್ಣ ತಾಯಿ ಭಾಗ್ಯಮ್ಮ ಮಗ ಕಾಣೆಯಾಗಿರುವ ಬಗ್ಗೆ ಕುಣಿಗಲ್ ಪೊಲೀಸರಿಗೆ 2023ರ ಅಕ್ಟೋಬರ್ 10 ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಾಯಿತು. ಡಿವೈಎಸ್ಪಿ ಲಕ್ಷ್ಮಿಕಾಂತ್ ಸೇರಿದಂತೆ ಇಲಾಖೆಯ ಹಿರಿಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಣಿಗಲ್ ಸಿಪಿಐ ನವೀನ್ ಗೌಡ ನೇತೃತ್ವದಲ್ಲಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಟೆಕ್ನಿಕಲ್ ಸೆಕ್ಷನ್ಸ್ ಸಿಬ್ಬಂದಿ ಸಹಕಾರದಿಂದಾಗಿ ಕಾಣೆಯಾದವ ತೆಲಂಗಾಣ ರಾಜ್ಯದ ಸೈಬರಾಬಾದ್ ನ ಮೆಡ್ ಚಲ್ ಸಿಟಿಯಲ್ಲಿರುವುದು ಪತ್ತೆ ಹಚ್ಚಿದ ಕುಣಿಗಲ್ ಠಾಣೆಯ ಸಿಬ್ಬಂದಿ ಹೇರೂರು ರವಿ ಮತ್ತು ಬೇಗೂರು ನಟರಾಜ, ಬಾಲಕೃಷ್ಣನನ್ನು ತಾಯಿ ಭಾಗ್ಯಮ್ಮ ವಶಕ್ಕೆ ಒಪ್ಪಿಸಿದ್ದಾರೆ.
Get real time updates directly on you device, subscribe now.
Prev Post
Comments are closed.