ಗುಬ್ಬಿ : ತಾಲೂಕಿನ ಕಡಬ ಹೋಬಳಿಯ ಮತಘಟ್ಟ ಕಾಲೋನಿಯಲ್ಲಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಸುಮಾರು 30 ವರ್ಷಗಳ ಶಾಲೆ ಇದ್ದು, ಶಾಲೆಗೆ ಶಿಕ್ಷಕರು ಇಲ್ಲದೆ, ಶಿಕ್ಷಕರಿದ್ದರು ಸರಿಯಾಗಿ ಪಾಠ ಮಾಡದೆ ಇರುವ ಕಾರಣ ಕೇವಲ ಇಂದು ಹದಿಮೂರು ವಿದ್ಯಾರ್ಥಿಗಳು ಮಾತ್ರ ಇದ್ದು, ಅವರು ಸಹ ಬೇರೆ ಕಡೆಗೆ ಹೋಗುವುದಕ್ಕೆ ನಿರ್ಧಾರ ಮಾಡಿದ್ದಾರೆ.
ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ಮಾಡಿ ನಮಗೆ ಹೊಸ ಶಿಕ್ಷಕರನ್ನು ಖಾಯಂ ಆಗಿ ನೇಮಕ ಮಾಡದೆ ಹೋದರೆ ನಮ್ಮ ಮಕ್ಕಳನ್ನ ಯಾವುದೇ ಕಾರಣಕ್ಕೂ ಇಲ್ಲಿಗೆ ನಾವು ಬಿಡುವುದಿಲ್ಲ, ಬೇರೆ ಶಾಲೆಗಳಿಗೆ ಸೇರಿಸಲು ತೀರ್ಮಾನ ಮಾಡಿದ್ದೇವೆ, ಹಿಂದೆ ಇದ್ದಂತಹ ಶಿಕ್ಷಕಿ ಯಾವುದೇ ರೀತಿಯಲ್ಲೂ ಪಾಠ ಮಾಡದೆ ಸರಿಯಾದ ಸಮಯಕ್ಕೆ ಹಾಜರು ಆಗದೆ ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟವನ್ನೇ ಹಾಳು ಮಾಡಿದ್ದಾರೆ, ಇನ್ನು ಎರಡು ದಿನಗಳಲ್ಲಿ ನಮಗೆ ಶಿಕ್ಷಕರನ್ನು ಕೊಡದೆ ಹೋದರೆ ಉಗ್ರ ಪ್ರತಿಭಟನೆಯನ್ನು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಮಾಡುತ್ತೇವೆ ಎಂದು ಪ್ರತಿಭಟನಾಕರರು ಎಚ್ಚರಿಸಿದರು.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಹಳೆಯ ಶಾಲೆ ಉಳಿಸಿ ಬೆಳೆಸಬೇಕು ಎಂಬ ನಮ್ಮ ಆಸೆಯನ್ನು ಇಲ್ಲಿನ ಶಿಕ್ಷಕರು ಹಾಳು ಮಾಡಿದ್ದಾರೆ, ಹಿಂದೆ ಇದ್ದ ಶಿಕ್ಷಕರು ನಮಗೆ ಬೇಡ, ಅದರ ಬದಲಿಗೆ ಬೇರೊಬ್ಬ ಖಾಯಂ ಶಿಕ್ಷಕರನ್ನು ನೇಮಕ ಮಾಡಲೇಬೇಕು ಎಂದು ಒತ್ತಾಯ ಮಾಡಿದರು.
ಸದಸ್ಯ ಮುನಿಯಪ್ಪ ಮಾತನಾಡಿ, ಈ ಊರಿನ ಶಾಲೆಯಲ್ಲಿ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಕಲಿಸಿಲ್ಲ, ಇಲ್ಲಿ ಓದಿರುವಂತಹ ಬಹುತೇಕ ಮಕ್ಕಳು ಅಭಿವೃದ್ಧಿ ಕಂಡಿಲ್ಲ, ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂದರೆ ಉತ್ತಮ ಶಿಕ್ಷಕರ ಅವಶ್ಯಕತೆ ಇದೆ, ಹಾಗಾಗಿ ಕೂಡಲೇ ಇನ್ನೊಬ್ಬ ಶಿಕ್ಷಕರನ್ನು ನೇಮಕ ಮಾಡದೆ ಹೋದರೆ ನಮ್ಮ ಮಕ್ಕಳನ್ನು ಈ ಶಾಲೆ ಬಿಡಿಸಿ ಬೇರೆ ಶಾಲೆಗೆ ಕಳುಹಿಸುವುದಂತು ಸತ್ಯ ಎಂದರು.
ದಲಿತ ಮುಖಂಡ ಕೃಷ್ಣಮೂರ್ತಿ ಮಾತನಾಡಿ ಇರುವಂತಹ ದಲಿತ ವಗರ್ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ, ಕಾರಣ ಅಧಿಕಾರಿಗಳು ನಮ್ಮ ಬಗ್ಗೆ ಅಸಡ್ಡೆ ತೋರಿದ್ದಾರೆ, ನಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಸರ್ಕಾರ ಮತ್ತು ಅಧಿಕಾರಿಗಳು ನೀದದೆ ಹೋದರೆ ಖಂಡಿತವಾಗಿಯೂ ಉಗ್ರ ಪ್ರತಿಭಟನೆಯನ್ನು ತಾಲೂಕು ಮಟ್ಟದಲ್ಲಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುನಿಯಪ್ಪ, ನಾಗರಾಜ, ಕೃಷ್ಣಮೂರ್ತಿ.ಡಿ.ಎಸ್, ಬಸವಯ್ಯ, ಚನ್ನೇ ಗೌಡ, ದೇವರಾಜು, ಮುನಿರಾಜು, ಧರ್ಮಣ್ಣ, ಲಕ್ಕಮ್ಮ, ದೇವಿರಮ್ಮ, ಲಾವಣ್ಯ ಇನ್ನಿತರು ಹಾಜರಿದ್ದರು.
Comments are closed.