ಕೊರಟಗೆರೆ: ಎಸ್ಸಿ ಮೀಸಲು ಕ್ಷೇತ್ರದಲ್ಲಿ ಪಂಚಾಯತ್ ರಾಜ್ ಇಲಾಖೆಯ ಗುತ್ತಿಗೆ ಟೆಂಡರ್ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನೇ ಕೈಬಿಟ್ಟು ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಆರೋಪಿಸಿ ಎಸ್ ಸಿ, ಎಸ್ ಟಿ ಗುತ್ತಿಗೆದಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಕೊರಟಗೆರೆ ಪಟ್ಟಣದ ಪಂಚಾಯತ್ ರಾಜ್ ಇಲಾಖೆಯ 60 ಲಕ್ಷ ಮೌಲ್ಯದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ನಡೆಸುವ ವೇಳೆ ಕೊರಟಗೆರೆ ಎಇಇ ನೀಡಿರುವ ಮೀಸಲಾತಿ ಅಂಕಿ ಅಂಶದ ವರಜಿಯನ್ನೇ ಮಧುಗಿರಿ ಇಇ ಮತ್ತು ಕೊರಟಗೆರೆ ಎಇ ತಿರಸ್ಕರಿಸಿ ಸರಕಾರದ ಆದೇಶವನ್ನೇ ಉಲ್ಲಂಸಿ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಎಸ್ ಸಿ, ಎಸ್ ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀನರಸಯ್ಯ ಮಾತನಾಡಿ, ಎಸ್ ಸಿ, ಎಸ್ ಟಿ ಗುತ್ತಿಗೆ ಮೀಸಲಾತಿಯನ್ನೇ ಕೈಬಿಟ್ಟು 60 ಲಕ್ಷ ಅನುಅನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ, ನಾವು ಎಇ ಮುಷೀರ್ ಗೆ ಟೆಂಡರ್ ಪ್ರತಿ ಕೇಳಿದ್ರೆ ಉಡಾಫೆ ಉತ್ತರ ನೀಡ್ತಾರೆ, ಮಧುಗಿರಿ ಇಇ ದಯಾನಂದ್ ಮತ್ತು ಕೊರಟಗೆರೆ ಎಇ ಮುಷೀರ್ ಕರ್ತವ್ಯ ಲೋಪ ಪರಿಗಣಿಸಿ ಜಿಪಂ ಸಿಇಓ ಅಮಾನತು ಮಾಡಬೇಕಿದೆ ಎಂದು ಆಗ್ರಹಿಸಿದರು.
ಕೊರಟಗೆರೆ ಎಸ್ ಸಿ, ಎಸ್ ಟಿ ಗುತ್ತಿಗೆದಾರ ಲಕ್ಷ್ಮೀನಾರಾಯಣ್ ಮಾತನಾಡಿ, ಕೊರಟಗೆರೆ ಪಿ ಆರ್ ಇ ಡಿ ಇಲಾಖೆಯಲ್ಲಿ ಎಸ್ ಸಿ, ಎಸ್ ಟಿ ಗುತ್ತಿಗೆದಾರರಿಗೆ ಅನ್ಯಾಯ ಆಗಿದೆ, ಕೊರಟಗೆರೆ ಎಇಇ ರವಿ ಕುಮಾರ್ ನೀಡಿರುವ ಮೀಸಲಾತಿ ಅನುಅನದ ಅಂಕಿ ಅಂಶದ ಆದೇಶವನ್ನೇ ಬದಿಗಿಟ್ಟು ಕೊರಟಗೆರೆ ಎಇ ಮತ್ತು ಮಧುಗಿರಿ ಇಇ ಕರ್ತವ್ಯಲೋಪ ಮಾಡಿದ್ದಾರೆ, ತಪ್ಪಾದ ನಂತರ ತಿದ್ದಿ ಮರು ಟೆಂಡರ್ ಮಾಡ್ತೀವಿ ಎಂಬ ಜಾಣ ತಾಳ್ಮೆ ತೋರಿಸ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರ ಬಸವರಾಜು, ನಾಗೇಶ್, ಅಶ್ವತ್ಥಪ್ಪ, ಗೋವಿಂದರಾಜು, ದಾಡಿ ವೆಂಕಟೇಶ್, ಪ್ರಸನ್ನ ಕುಮಾರ್, ಪ್ರಶಾಂತ್, ಕದರಪ್ಪ, ಹನುಮಂತರಾಜು, ಕಾಮರಾಜು, ನಂದನಕುಮಾರ್, ಗೋಪಿನಾಥ್ ಇತರರು ಇದ್ದರು.
ಸರಕಾರದ ಆದೇಶ ಉಲ್ಲಂಘನೆ..
ಪಿಆರ್ಇಡಿ ಇಲಾಖೆಯ ಕಾಮಗಾರಿಯಲ್ಲಿ ಎಸ್ ಸಿ, ಎಸ್ ಟಿ ಗುತ್ತಿಗೆದಾರರಿಗೆ ಮೀಸಲಾತಿ ನೀಡುವಂತೆ 2007 ರಲ್ಲಿ ಆದೇಶ ಮಾಡಿದೆ, ಕೊರಟಗೆರೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಸ್ತುತ ವರ್ಷ 60 ಲಕ್ಷ ಅನುದಾನದ 7 ಕಾಮಗಾರಿಗಳಿವೆ, 7 ಕಾಮಗಾರಿಯಲ್ಲಿ 2ಎಸ್ ಸಿ, 1 ಎಸ್ ಟಿ ಮತ್ತು 4 ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಕೊರಟಗೆರೆ ಎಇಇ ರವಿಕುಮಾರ್ ಸರಕಾರದ ಆದೇಶದಂತೆ ಮಧುಗಿರಿ ಇಇ ಕಚೇರಿಗೆ ಅ.17 ರಂದೇ ಕಳುಹಿಸಿರುವ ಪ್ರತಿಗಳಿವೆ, ಕೊರಟಗೆರೆ ಎಇ ಮುಷೀರ್ ಅಹಮ್ಮದ್ ಮತ್ತು ಮಧುಗಿರಿ ಇಇ ದಯಾನಂದ್ ಸರಕಾರದ ಆದೇಶ ಉಲ್ಲಂಸಿ 7 ಕಾಮಗಾರಿಯನ್ನೇ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಟೆಂಡರ್ ಮುಗಿಸಿರುವುದೇ ಗುತ್ತಿಗೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
60 ಲಕ್ಷ ಅನುದಾನದ 7 ಕಾಮಗಾರಿಯ ಟೆಂಡರ್ ಪ್ರಕ್ರಿಯೆಗೆ ಈಗಾಗಲೇ ತಡೆ ನೀಡಲಾಗಿದೆ, ಕಂಪ್ಯೂಟರ್ ಟೆಕ್ನಿಕಲ್ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪವಾಗಿದೆ, ಮಧುಗಿರಿ ಮತ್ತು ಕೊರಟಗೆರೆ ಕಚೇರಿಯಲ್ಲಿ ಅಧಿಕಾರಿಗಳ ಕೊರತೆ ಸಾಕಾಷ್ಟಿದೆ, ಗುತ್ತಿಗೆ ಮೀಸಲಾತಿ ನೀಡೋದು ನಮ್ಮ ಪ್ರಮುಖ ಕರ್ತವ್ಯ, ಕೆಲಸದ ಒತ್ತಡದಿಂದ ಇಂತಹ ಲೋಪವಾಗಿದ್ದು ಮತ್ತೆ ಇಂತಹ ಘಟನೆ ನಡಿಯೋದಿಲ್ಲ.
-ದಯಾನಂದ್, ಇಇ, ಪಿಆರ್ಇಡಿ ಇಲಾಖೆ, ಮಧುಗಿರಿ.
Comments are closed.