ಪಿ ಎಸ್ ಐ ವರ್ಗಾವಣೆ- ಮಸಾಲ ಜಯರಾಂ ಧರಣಿ ಅಂತ್ಯ

116

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಕೆ.ಮಾವಿನಹಳ್ಳಿ ಗ್ರಾಮದ ಕುಮಾರಾಚಾರ್ ಸಾವಿಗೆ ಕಾರಣರಾದ ಪೊಲೀಸರ ಅಮಾನತಿಗೆ ಆಗ್ರಹಿಸಿ ಮಾಜಿ ಶಾಸಕ ಮಸಾಲ ಜಯರಾಮ್ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಹೆಚ್ಚುವರಿ ಎಸ್.ಪಿ.ಮರಿಯಪ್ಪನವರ ಸಮನ್ವಯದ ಮಾತುಕತೆಯೊಂದಿಗೆ ತೆರೆ ಕಂಡಿದೆ.
ಪ್ರತಿಭಟನಾ ನಿರತ ಮಾಜಿ ಶಾಸಕ ಮಸಾಲ ಜಯರಾಂ ಅವರೊಂದಿಗೆ ಲಕ್ಷ್ಮೀಕಾಂತ್ ಮತ್ತು ಸಿಪಿಐ ಲೋಹಿತ್ ಪ್ರತಿಭಟನೆ ಹಿಂಪಡೆಯುವಂತೆ ನಡೆಸಿದ ಸಮನ್ವಯ ಫಲ ನೀಡಿರಲಿಲ್ಲ, ಮಸಾಲ ಜಯರಾಮ್ ಅವರು ಅಮಾಯಕ ಕುಮಾರಾಚಾರ್ ಸಾವಿಗೆ ಕಾರಣರಾದ ಪಿ ಎಸ್ ಐ ಗಣೇಶ್ ಹಾಗೂ ಮತ್ತಿತರನ್ನು ಅಮಾನತು ಮಾಡುವಂತೆ ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದರು, ಎಡೆಬಿಡದೇ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ತನ್ನ ಬೆಂಬಲಿಗರೊಂದಿಗೆ ಪ್ರತಿಭಟನಾ ನಿರತ ಸ್ಥಳ ಬಿಟ್ಟು ಕದಲದೇ ಅಮಾಯಕನ ಸಾವಿಗೆ ನ್ಯಾಯ ದೊರಕುವವರೆಗೂ ವಿರಮಿಸುವುದಿಲ್ಲ ಎಂಬ ನಿರ್ಧಾರ ಪೊಲೀಸ್ ಇಲಾಖೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಅಂತಿಮವಾಗಿ ಪ್ರತಿಭಟನಾ ನಿರತ ಮಸಾಲ ಜಯರಾಮ್ ಅವರ ಬಳಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಮಾತುಕತೆ ನಡೆಸಿದರು, ಕುಮಾರಾಚಾರ್ ಸಾವಿನ ಕುರಿತು ಈಗಾಗಲೇ ವಿಚಾರಣೆ ಆರಂಭಗೊಂಡಿದೆ, ಅಂತಿಮ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೊಪ್ಪದ ಮಸಾಲಾ ಜಯರಾಮ್ ಅವರು ಸಬ್ ಇನ್ಸ್ ಪೆಕ್ಟರ್ ಹಾಗೂ ಪೇದೆಗಳನ್ನು ಅಮಾನತು ಮಾಡಬೇಕೆಂಬ ಪಟ್ಟು ಸಡಿಲಿಸದೆ ಅಗತ್ಯ ಕ್ರಮ ಜರುಗಿಸುವ ವರೆಗೂ ಧರಣಿ ಮುಂದುವರೆಸುವುದಾಗಿ ಹೆಚ್ಚುವರಿ ಎಸ್ ಪಿ ಯವರಿಗೆ ತಿಳಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ್ದರು.
ಪಿ ಎಸ್ ಐ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸುವ ಬಿಗಿಪಟ್ಟನ್ನು ಬದಲಿಸದ ಮಾಜಿ ಶಾಸಕ ಮಸಾಲ ಜಯರಾಮ್ ಅವರ ಬೆಂಬಲಿಗರ ನಿರ್ಧಾರಕ್ಕೆ ಮಣಿದ ಮರಿಯಪ್ಪ ಅವರು ಅಂತಿಮವಾಗಿ ಸಬ್ ಇನ್ಸ್ ಪೆಕ್ಟರ್ ಗಣೇಶ್ ಅವರನ್ನು ಹಾಗೂ ಮೂವರು ಪೇದೆಗಳನ್ನೂ ಬೇರೆ ಕಡೆ ವರ್ಗಾವಣೆ ಮಾಡುವ ಭರವಸೆ ನೀಡುವ ಮೂಲಕ ಪ್ರತಿಭಟನೆಗೆ ವಿರಾಮ ಎಳೆದರು.

Get real time updates directly on you device, subscribe now.

Comments are closed.

error: Content is protected !!