ತುಮಕೂರು: ನರ ರೋಗ ಸಮಸ್ಯೆಗಳ ನಿಯಂತ್ರಣಕ್ಕಾಗಿ ಸಿದ್ಧಗಂಗಾ ಆಸ್ಪತ್ರೆ ಆಯೋಜಿಸಿರುವ 30 ದಿನಗಳ ಬೃಹತ್ ಉಚಿತ ನರರೋಗ ತಪಾಸಣಾ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ನವೆಂಬರ್ 30 ವರೆಗೆ ಆಯೋಜಿಸಲಾಗಿರುವ ಶಿಬಿರವನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಶಿಬಿರದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಸಂಗಮೇಶ್ ಮಾತನಾಡಿ, ನಿಶ್ಯಕ್ತಿ, ಪಾರ್ಶ್ವವಾಯು, ನಡೆಯಲು ಅಡ್ಡಿ, ಸಮತೋಲನ ತಪ್ಪುವುದು, ಸ್ಪರ್ಶದ ಕೊರತೆ, ತಲೆನೋವು, ಗೊಂದಲ ಸೇರಿದಂತೆ ಅನೇಕ ನರರೋಗ ಸಮಸ್ಯೆಗಳಿಗೆ ಉಚಿತ ವೈದ್ಯರ ಸಂದರ್ಶನ ನೀಡಲಾಗುತ್ತಿದೆ, ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆ ವರೆಗೆ ವೈದ್ಯರನ್ನು ಸಂಪರ್ಕಿಸಬಹುದಾಗಿದೆ ಎಂದರು.
ನರರೋಗ ತಜ್ಞ ಡಾ.ಅಮರ್ ಮಾತನಾಡಿ ಉಚಿತ ಸಂದರ್ಶನದ ಜೊತೆಗೆ ರಿಯಾಯಿತಿ ದರದ ಪ್ಯಾಕೇಜ್ ಗಳ ಜೊತೆಗೆ ವೈದ್ಯಕೀಯ ಪರೀಕ್ಷೆಗಳ ಮೇಲೆ ಶೇ.30 ರಷ್ಟು ರಿಯಾಯಿತಿ ಕೂಡ ಕಲ್ಪಿಸಲಾಗಿದೆ, ಈಗಾಗಲೇ ನೂರಾರು ಜನ ಈ ಸೌಲಭ್ಯ ಉಪಯೋಗಿಸಿಕೊಳ್ಳುತ್ತಿದ್ದು ಇನ್ನೂ 20 ದಿನಗಳ ಕಾಲ ಶಿಬಿರ ಆಯೋಜಿಸಿದ್ದು ನರರೋಗ ಸಮಸ್ಯೆಗಳಿಗೆ ದುಬಾರಿ ದರ ತೆರುವ ಸಾರ್ವಜನಿಕರು ಉಚಿತ ಸಂದರ್ಶನ ಪಡೆಯಬಹುದಾಗಿದೆ ಎಂದರು.
Comments are closed.