ರೈತರ ಸಂಕಷ್ಟ ಆಲಿಸಿದ ಜೆಡಿಎಸ್ ನಾಯಕರು

101

Get real time updates directly on you device, subscribe now.


ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅರಳಕಟ್ಟೆ ಗ್ರಾಮಕ್ಕೆ ರೈತರ ಜಮೀನಿಗೆ ತೆರಳಿ ಬರ ಅಧ್ಯಯಾನ ಮಾಡಿದ ಜೆಡಿಎಸ್ ತಂಡ.
ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸರಕಾರ ಆರು ತಿಂಗಳಲ್ಲೇ ಸತ್ತು ಹೋಗಿದೆ, ನಾನು ಒಬ್ಬ ಶಾಸಕನಾಗಿ ಒಂದೇ ಒಂದು ರೂಪಾಯಿ ಅನುದಾನ ನೀಡದಷ್ಟು ಬರಗಾಲ ಇವರು ನೀಡಿರುವ ಯೋಜನೆಗಳಿಂದ ಬಂದಿದೆ, ಮಳೆ ಇಲ್ಲದೆ ಬರಗಾಲ ಬಂದಿದ್ದರೂ ರೈತರ ಜಮೀನುಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಕಾಂಗ್ರೆಸ್ ಸರ್ಕಾರ ಇದುವರೆಗೂ ಕೇಳಿಲ್ಲ, ಹಾಗಾಗಿ ನಾವೇ ಖುದ್ದು ರೈತರ, ಜನರ ಬಳಿಗೆ ತೆರಳಿ ಇಲ್ಲಿನ ಸಮಸ್ಯೆಗಳನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡುತ್ತಿದ್ದು ಇಡೀ ಜಿಲ್ಲಾ ಜನತಾ ಪ್ರವಾಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಮುಖಂಡರಾದ ಬಿ.ಎಸ್.ನಾಗರಾಜು ಮಾತನಾಡಿ, ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗದ ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವುದೇ ಪ್ರಯೋಜನ ನೀಡಿಲ್ಲ, ಇನ್ನು ಗುಬ್ಬಿ ತಾಲೂಕಿನ ಶಾಸಕರು ಇದುವರೆಗೂ ಬರ ಪರಿಸ್ಥಿತಿ ಅವಲೋಕನವಾಗಲಿ ಅಥವಾ ರೈತರನ್ನು ಬಂದು ನೋಡುವುದಾಗಲಿ ಮಾಡಿಲ್ಲ, ಇದುವರೆಗೂ ನಾನು ಜೆಡಿಎಸ್ ನಲ್ಲಿದ್ದೇನೆ, ಯಾವುದೇ ಅನುದಾನ ಬರುವುದಿಲ್ಲ ಎಂದು ತಾಲೂಕಿನ ಜನರಿಗೆ ತಿಳಿಸುತ್ತಿದ್ದರು, ಈಗ ಕಾಂಗ್ರೆಸ್ ಸರ್ಕಾರದಲ್ಲೇ ಇದ್ದೀರಿ, ನಿಮ್ಮದೇ ಸರ್ಕಾರ ಬಂದಿದೆ, ಯಾವ ಅಭಿವೃದ್ಧಿ ಕೆಲ್ಸ ಮಾಡಿದ್ದೀರಾ ಎಂಬುದನ್ನು ಜನರಿಗೆ ತಿಳಿಸಿ ಎಂದು ಶಾಸಕರ ವಿರುದ್ಧ ಗುಡಿಗಿದರು.

ಬರ ಅಧ್ಯಯನ ತಂಡದಲ್ಲಿ ತಿಪಟೂರು ಶಾಂತಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕ ವೀರಯ್ಯ, ಕುಣಿಗಲ್ನ ಜಗದೀಶ್, ಕಳ್ಳಿಪಾಳ್ಯ ಲೋಕೇಶ್, ರೈತ ಮುಖಂಡರಾದ ಪಾಂಡುರಂಗಯ್ಯ, ಗೋವಿಂದರಾಜು, ಮಂಜುನಾಥ್, ಕೃಷ್ಣ, ಜಟ್ಟಿ ಲಿಂಗರಾಜು ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!