ವಿವೇಚನೆ ಮರೆತು ವರ್ತಿಸುವುದು ಬೇಡ: ವಿಜಯಲಕ್ಷ್ಮೀ

70

Get real time updates directly on you device, subscribe now.


ತುಮಕೂರು: ವಿವೇಚನೆ ಮರೆತು ನಾವು ವರ್ತಿಸುವುದು ಬೇಡ ನಮಗೆ ಸಂವಿಧಾನ ನೀಡಿರುವ ಸ್ವಾತಂತ್ರ್ಯ ಸ್ವೇಚ್ಛೆ ಆಗುವುದು ಬೇಡ ಎಂದು ತುಮಕೂರಿನ ಮಹಿಳಾ ಠಾಣೆ ಸಬ್ ಇನ್ಸ್ಪೆಕ್ಟರ್ ವಿಜಯಲಕ್ಷ್ಮೀ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಶ್ರೀಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ವತಿಯಿಂದ ಹಮ್ಮಿಕೊಂಡಿದ ಪ್ರಥಮ ವರ್ಷದ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಾಲ್ಯದ ಜೀವನ ನೆನಪಿಸಿಕೊಂಡರೆ ಇಂದು ಅದರ ನಿಜವಾದ ಮೌಲ್ಯ ತಿಳಿಯುತ್ತದೆ, ಪೋಷಕರ ಕನಸನ್ನು ನನಸು ಮಾಡಿ, ನಿಮ್ಮ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿ ಎಂದರು.

ಇಂದು ಅಂಗೈಯಲ್ಲಿ ಪ್ರಪಂಚ ತೋರಿಸುವ ಮೊಬೈಲ್ ಫೋನ್ ಗಳಿಂದ ಅನುಕೂಲ, ಅನಾನುಕೂಲತೆ ಎರಡು ಇದೆ, ಅದರಲ್ಲಿ ಉತ್ತಮವಾದದ್ದನ್ನು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಪೋಷಕರು ಅವರ ಕನಸುಗಳನ್ನು ನಿಮ್ಮ ಮೂಲಕ ಈಡೇರಿಸಿಕೊಳ್ಳಲು ಬಯಸಿರುತ್ತಾರೆ, ಅವರಿಗೆ ಉತ್ತಮ ಉಡುಗೊರೆ ನೀಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ನೀಡುವುದರ ಜೊತೆಗೆ ಪೋಕ್ಸೋ ಕಾಯ್ದೆ, ಎನ್ ಡಿ ಪಿ ಎಸ್ ಕಾಯ್ದೆಗಳ ಕುರಿತು ಮಾಹಿತಿ ನೀಡಿ ಯಾವುದೇ ಪರಿಸ್ಥಿತಿಯಲ್ಲೂ ಕಾನೂನಿನ ವಿರುದ್ಧ ನಡೆದು ಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ಹೇಳಿದರು.
ಎಸ್ ಎಸ್ ಐ ಬಿ ಎಂ ನ ಪ್ರಾಂಶುಪಾಲರಾದ ಡಾ.ಮಮತಾ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಮಾರ್ಗದಲ್ಲಿ ಸಾಗಿ, ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಕಾಂ ವಿಭಾಗದ ಮುಖ್ಯಸ್ಥರಾದ ಶಾಲಿಕ, ಬಿಸಿಎ ವಿಭಾಗದ ಮುಖ್ಯಸ್ಥ ಮುತ್ತುರಾಜ್, ಬಿಬಿಎ ವಿಭಾಗದ ಮುಖ್ಯಸ್ಥರಾದ ಹರ್ಷರಾಧ್ಯಾ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!