ಗುಬ್ಬಿ: ತಾಲೂಕಿನ ಹಿಂಡಸ್ಗೆರೆ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವುದು ಈ ಗ್ರಾಮದ ಜನರಿಗೆ ಒಂದಷ್ಟು ಖುಷಿ ನೀಡಿದೆ, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕಸ ವಿಲೇವಾರಿ ಘಟಕ ಮಾಡಲಾಗಿದ್ದರು ಅದರ ಕಾರ್ಯ ಚಟುವಟಿಕೆ ಮಾತ್ರ ಅಷ್ಟಕ್ಕಷ್ಟೇ, ಆದರೆ ಈ ಹಿಂಡಸ್ ಗೆರೆ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಮಹಿಳೆಯರೇ ಟ್ರಾಕ್ಟರ್ ಚಲಾಯಿಸಿ ಅವರದೇ ಆದ ನಾಲ್ಕಾರು ಮಹಿಳೆಯರನ್ನ ಕಟ್ಟಿಕೊಂಡು ಪ್ರತಿ ಹಳ್ಳಿಗಳಲ್ಲಿ ಕಸ ಎತ್ತುತ್ತಿರುವುದು ಬಹಳ ವಿಶೇಷವಾಗಿ ಕಾಣುವ ಮೂಲಕ ಮಹಿಳೆಯರು ನಾವು ಆಡಳಿತ ಮಾಡುವುದಕ್ಕೂ, ಕೆಲಸ ಮಾಡುವುದಕ್ಕೂ ಸೈ ಎನ್ನುವಂತಿತ್ತು.
ಟ್ರಾಕ್ಟರ್ ಚಾಲಕಿ ಅಮೃತ ಮಾತನಾಡಿ ನಾನು ಮೊದಲಿಗೆ ಟ್ರಾಕ್ಟರ್ ಓಡಿಸಲು ಹೋಗುತ್ತೇನೆ ಎಂದಾಗ ನನ್ನ ತಂದೆ, ತಾಯಿ ಕೂಡ ನಿನಗೆ ಯಾಕೆ ಬೇಕು ಎಂದಿದ್ದರು, ಆದರೆ ನಾನು ಕಲಿಯುತ್ತೇನೆ ಎಂದು ತರಬೇತಿ ಪಡೆದು ಈಗ ಟ್ರಾಕ್ಟರ್ ಓಡಿಸುತ್ತಿದ್ದೇನೆ, ನನ್ನ ಜೊತೆ ಬೇರೆ ಮಹಿಳೆಯರು ಸಹ ಆಗಮಿಸುತ್ತಿದ್ದಾರೆ, ಪಂಚಾಯಿತಿ ನೀಡಿರುವಂತಹ ಕೆಲಸವನ್ನ ಶ್ರದ್ಧೆ, ಶಿಸ್ತಿನಿಂದ ಮಾಡುತ್ತಿದ್ದೇವೆ, ಇದು ನಮಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ.
ಅಭಿವೃದ್ಧಿ ಅಧಿಕಾರಿ ಶ್ರೀದೇವಿ ಮಾತನಾಡಿ ಕಸ ವಿಲೇವಾರಿ ಘಟಕ ಸ್ಥಾಪನೆಯಾದ ಮೇಲೆ ಗ್ರಾಮಗಳಲ್ಲಿರುವ ಒಣ ಕಸವನ್ನ ಅಲ್ಲಿಗೆ ಹಾಕಿ ಸಂಗ್ರಹಣೆ ಮಾಡುತ್ತಿದ್ದೇವೆ, ಗ್ರಾಮದಲ್ಲಿ ಆದಷ್ಟು ಸ್ವಚ್ಛತೆ ಕಾಪಾಡುವುದಕ್ಕೆ ನಮ್ಮ ಸಿಬ್ಬಂದಿ ನಿರಂತರ ಕೆಲಸದಲ್ಲಿದ್ದಾರೆ ಹಾಗೂ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಮಹಿಳೆಯರೇ ಟ್ರಾಕ್ಟರ್ ಚಲಾಯಿಸಿ, ಮಹಿಳೆಯರ ತಂಡವೇ ಗ್ರಾಮಗಳಿಗೆ ಹೋಗಿ ಸ್ವಚ್ಛತಾ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಮೆಚ್ಚತಕ್ಕ ವಿಚಾರ.
Comments are closed.