ವಿದ್ಯಾರ್ಥಿಗಳಲ್ಲಿನ ಮಾನಸಿಕ ಗೊಂದಲ ಶಮನಗೊಳಿಸಿ

ಶೇಷಾದ್ರಿಪುರಂ ಕಾಲೇಜಿನ ಸಮಾಲೋಚನಾ ಸಭೆಯಲ್ಲಿ ಸಿಸಿ ಪಾವಟೆ ಸಲಹೆ

153

Get real time updates directly on you device, subscribe now.

ತುಮಕೂರು:ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಅಧ್ಯಾಪಕರಿಗೆ ‘ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ’ ಎಂಬ ವಿಶೇಷ ಪುನಃಶ್ಚೇತನ ಕಾರ್ಯಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ನಗರದ ಆಪ್ತ ಸಮಾಲೋಚಕ ಸಿ.ಸಿ.ಪಾವಟೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ಮುಖ್ಯ. ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲಾಗದೆ ಮಾನಸಿಕ ಗೊಂದಲದಲ್ಲಿರುತ್ತಾರೆ. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಹೇಳುವಂತೆ ಹದಿಹರೆಯದವರಲ್ಲಿ ಮಾನಸಿಕ ಗೊಂದಲಗಳಿರುತ್ತವೆ ಅವುಗಳನ್ನು ಸರಿಪಡಿಸಿದರೆ ಮಾತ್ರ ಅವರ ಉನ್ನತಿ. ಅವನ ಮಾತಿನಂತೆ ಅಧ್ಯಾಪಕರು ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆಪ್ತ ಸಮಾಲೋಚನೆ ನಡೆಸಬೇಕು. ಅವರಲ್ಲಿ ಸಮಸ್ಯೆಗಳನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು. ಅಧ್ಯಾಪಕರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಲು ಆಗುವುದಿಲ್ಲ ಎಂದಾದರೆ ಮನೋವಿಜ್ಞಾನಿಗಳನ್ನು ಭೇಟಿ ಮಾಡುವಂತೆ ಅವರ ಪೋಷಕರಿಗೆ ಕರೆದು ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಜಿ.ಟಿ., ಕಾರ್ಯಕ್ರಮದ ಸಂಚಾಲಕ ಪ್ರೊ.ಮಾನಸ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಮಹಂತೇಶ್, ಪ್ರೊ.ನಂದನ್, ಗಣಕವ ವಿಭಾಗದ ಪ್ರೊ.ಅನುರಾಧ, ಕನ್ನಡ ವಿಭಾಗದ ಪ್ರೊ.ಶ್ರೀನಿವಾಸ್, ಪ್ರೊ.ದುಗ್ಗೇನಹಳ್ಳಿ ಸಿದ್ದೇಶ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಪ್ರೊ.ಪುಷ್ಪಾಂಜಲಿ, ಪ್ರೊ.ನಿವೇದಿತ ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!