ನಡೆನುಡಿ, ಜೀವನ ಶೈಲಿಯಲ್ಲಿ ಕನ್ನಡತನ ಇರಲಿ

116

Get real time updates directly on you device, subscribe now.


ಹುಳಿಯಾರು: ನಮ್ಮ ನಡೆ ನುಡಿ ಮತ್ತು ಜೀವನ ಶೈಲಿಯಲ್ಲಿ ಕನ್ನಡತನ ಅಳವಡಿಸಿಕೊಂಡು ಕನ್ನಡ ಭಾಷೆ ಉಳಿಸಿ ಬೆಳೆಸುವಂತೆ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕರೆ ನೀಡಿದರು.
ಹುಳಿಯಾರಿನ ವಿದ್ಯಾವಾರಿಧಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಕಟ್ಟಲು ಹಲವಾರು ಮಹನೀಯರ ತ್ಯಾಗ ಬಲಿದಾನವಾಗಿದೆ, ಹೋರಾಟದ ಮೂಲಕ ಕಟ್ಟಿರುವ ನಾಡನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಹೊಣೆ ನಮ್ಮೆಲ್ಲರ ಮೇಲಿದೆ, ತ್ಯಾಗ ಬಲಿದಾನ ಮಾಡಿದ ಮಹನೀಯರನ್ನು ನೆನೆಯುತ್ತಾ ಕರ್ನಾಟಕದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾಗಿದೆ, ಕನ್ನಡ ನಾಡು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ, ಇವುಗಳನ್ನು ನಾವೆಲ್ಲರೂ ಮೊದಲು ಅರ್ಥ ಮಾಡಿಕೊಂಡು ಅವುಗಳ ಪರಿಹಾರಕ್ಕೆ ಮುಂದಾಗಬೇಕು, ಪ್ರತಿಯೊಬ್ಬರಲ್ಲೂ ಕನ್ನಡ ಮೇಲಿನ ಅಭಿಮಾನ ಸ್ವಯಂ ಪ್ರೇರಿತವಾಗಿ ಹುಟ್ಟಬೇಕು, ಮಾತೃನಾಡು, ಮಾತೃ ಭಾಷೆಯ ಉಳಿವಿಗೆ ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕು ಎಂದರು.

ಶಾಲೆಯ ಕಾರ್ಯದರ್ಶಿ ಬಿ.ಕವಿತಾಕಿರಣ್ ಮಾತನಾಡಿ ತಾಯಿ ಭಾಷೆ ಪ್ರೀತಿಸಿ ಅನ್ಯ ಭಾಷೆಗಳನ್ನು ಗೌರವಿಸುವುದರಲ್ಲಿ ಕನ್ನಡಿಗರ ಔದಾರ್ಯ ಅಡಗಿದೆ, ಅದು ದೌರ್ಬಲ್ಯವಾಗದಂತೆ ಕನ್ನಡಿಗರು ಎಚ್ಚರ ವಹಿಸಬೇಕು, ವಿದ್ಯಾರ್ಥಿಗಳು ಕುವೆಂಪು, ಮಾಸ್ತಿ, ಗೋಕಾಕ್, ಅನಂತಮೂರ್ತಿ, ಬೇಂದ್ರೆ, ಕಂಬಾರ ಅವರಂತಹವರ ಪುಸ್ತಕಗಳನ್ನು ಓದುವ ಮೂಲಕ ಬೌದ್ದಿಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರಲ್ಲದೆ ದ.ರಾ.ಬೇಂದ್ರೆ ಯವರ ಜೀವನದ ಸಂಕ್ಷಿಪ್ತ ನೋಟವನ್ನ ವಿದ್ಯಾರ್ಥಿಗಳ ಮುಂದೆ ತೆರೆದಿಟ್ಟು ಬೆಂದ್ರೆಯವರ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು, ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ನೀಡಿದ ಉತ್ತರವು ಎಲ್ಲರ ಗಮನ ಸೆಳೆಯಿತು, ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಕವಿಗಳು, ವ್ಯಾಕರಣ ಮತ್ತು ಕನ್ನಡ ಕ್ಷೇತ್ರದಿಂದ ಸಾಧನೆ ಮಾಡಿರುವ ವಿವಿಧ ವ್ಯಕ್ತಿಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಯಿತು, ಇದರ ಮೂಲಕ ಮಕ್ಕಳ ಸಾಹಿತ್ಯ ಅಭಿರುಚಿ ಮತ್ತು ಕನ್ನಡ ಜ್ಞಾನ ಹೆಚ್ಚಿಸಲಾಯಿತು, ಇದೇ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಅಮಿತ್.ಕೆ, ಪ್ರಾಂಶುಪಾಲ ದಿಲೀಪ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!