ಗಾಂಜಾ ಮಾರಾಟಗಾರರ ಬಂಧನ

104

Get real time updates directly on you device, subscribe now.


ಪಟ್ಟನಾಯಕನಹಳ್ಳಿ: ಶಿರಾ- ಅಮರಾಪುರ ರಸ್ತೆಯಲ್ಲಿ ಅಮರಾಪುರ ಕಡೆಯಿಂದ ಮೂವರು ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ಬೈಕ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಟ್ಟನಾಯಕನಹಳ್ಳಿ ಪಿಎಸ್ ಐ ಠಾಣಾ ಸಿಬ್ಬಂದಿಗಳೊಂದಿಗೆ ಪಟ್ಟನಾಯಕನಹಳ್ಳಿ ಕ್ರಾಸಿಂಗ್ ನ ದಾಳಿ ಮಾಡಿ ಆರೋಪಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಹಿಡಿದು ತಪಾಸಣೆ ಮಾಡಿದಾಗ ಸುಮಾರು 65,000 ರೂ. ಬೆಲೆಯ 1 ಕೆಜಿ 144 ಗ್ರಾಂ ಕಡ್ಡಿ, ಬೀಜ ಮಿಶ್ರಿತ ಗಾಂಜಾ ಸೊಪ್ಪು ಮತ್ತು ಸುಮಾರು 30,000 ರೂ. ಬೆಲೆ ಬಾಳುವ 01 ಕೆಜಿ 600 ಗ್ರಾಂ ಹಸಿ ಗಾಂಜಾ ಗಿಡ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಆಂಧ್ರದ ಹಂಜಾರಪ್ಪ(50), ಕರಿಯಪ್ಪ(54), ಚಂದ್ರಶೇಖರ್ (27) ಅವರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!