ಗುಡಿಸಲಲ್ಲಿ ಇದ್ದ ತಾಯಿ ಮಗು ರಕ್ಷಣೆ

131

Get real time updates directly on you device, subscribe now.


ಕುಣಿಗಲ್: ರಾಜ್ಯ ಸರ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಖುದ್ದು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಮೌಢ್ಯಾಚರಣೆ ಕೈ ಬಿಡುವಂತೆ ಮನವಿ ಮಾಡಿದ್ದರೂ ಇನ್ನು ಸಹ ಮೌಢ್ಯಾಚರಣೆ ಜೀವಂತವಾಗಿದ್ದು, ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ತಾಯಿ ಮಗುವನ್ನು ಸುರಕ್ಷಿತವಾಗಿ ಮನೆ ಸೇರಿಸಿರುವ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ನಡೆಮಾವಿಮನ ಪುರ ಗೊಲ್ಲರಹಟ್ಟಿಯ ಪ್ರೀತಿ (ಹೆಸರು ಬದಲಿಸಿದೆ) ಅಕ್ಟೋಬರ್ 27 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು, ಎರಡು ದಿನ ಆಸ್ಪತ್ರೆಯಲ್ಲಿ ಇದ್ದ ನಂತರ ಆಸ್ಪತ್ರೆಯಿಂದ ತಾಯಿ, ಮಗು ಬಿಡುಗಡೆಗೊಂಡು ಗ್ರಾಮಕ್ಕೆ ಆಗಮಿಸಿದ್ದರು.

ಗ್ರಾಮದ ಹಟ್ಟಿಯಲ್ಲಿನ ಆಚರಣೆಯಂತೆ ಹಟ್ಟಿಯ ಸ್ವಲ್ಪ ದೂರದ ಹೊಲದಲ್ಲಿ ಗುಡಿಸಲು ಹಾಕಿ ತಾಯಿ ಮಗುವನ್ನು ಗುಡಿಸಲಲ್ಲಿ ಇಡಲಾಗಿತ್ತು, ಸೋಮವಾರ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಸಿಬ್ಬಂದಿ ಬೊಮ್ಮಣ್ಣ, ನಿಂಗರಾಜು ತೆರಳಿ ತಾಯಿ ಹಾಗೂ ಸಂಬಂಧಿಕರ ಮನ ಒಲಿಸಲು ಯತ್ನಿಸಿದರು, ಕೆಲಕಾಲ ವಾದ ವಿವಾದದ ನಂತರ ಪೊಲೀಸರು ತಾಯಿ, ಮಗು ರಕ್ಷಣೆಗೆ ಇರುವ ಕಾನೂನು ಹಾಗೂ ಕಾನೂನು ಉಲ್ಲಂಸದಲ್ಲಿ ಆಗುವ ಬಗ್ಗೆ ಅರಿವು ಮೂಡಿಸಿ ತಿಳಿ ಹೇಳಿದ ಮೇರೆಗೆ ತಾಯಿ, ಮಗುವನ್ನು ಬೇರೊಂದು ಮನೆಗೆ ಸಾಗಿಸಿದರು, ಪೊಲೀಸರು ವಢ್ಯಾಚರಣೆ ನಿಟ್ಟಿನಲ್ಲಿ ಹಾಕಲಾಗಿದ್ದ ಗುಡಿಸಲನ್ನು ತೆರವುಗೊಳಿಸಿದರು.

ಹಟ್ಟಿಗೆ ಸಂಬಂಧಿಸಿದಂತೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಆಶಾ ಕಾರ್ಯಕರ್ತೆ ಇದ್ದರೂ ಅವರು ಸಾಕಷ್ಟು ಬಾರಿ ಹೇಳಿದ್ದರೂ ಮೌಢ್ಯಾಚರಣೆಗೆ ಕಟ್ಟು ಬಿದ್ದಿದ್ದ ಪ್ರೀತಿಯ ಗಂಡನ ಮನೆವರು ಗುಡಿಸಲು ತೊರೆಯಲು ಸಿದ್ಧವಾಗಿರಲಿಲ್ಲ ಎನ್ನಲಾಗಿದೆ, ಕಳೆದ ಎರಡು ತಿಂಗಳ ಹಿಂದೆ ಇದೆ ಗೊಲ್ಲರಹಟ್ಟಿಯಲ್ಲಿ ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಮೌಢ್ಯಾಚರಣೆ ತೊರೆಯುವಂತೆ ಮನವಿ ಮಾಡಿದ್ದರು.

Get real time updates directly on you device, subscribe now.

Comments are closed.

error: Content is protected !!