ಕುಣಿಗಲ್: ದಾಖಲೆಗಳಲ್ಲಿ ಸ್ಮಶಾನಕ್ಕೆಂದು ಜಾಗ ಮೀಸಲಾಗಿದ್ದರೂ ಜಮೀನು ಖಾಸಗಿಯವರಿಗೆ ಸೇರಿದೆ ಎಂದು ವ್ಯಕ್ತಿಯೊಬ್ಬರು ಆಕ್ಷೇಪಿಸಿದ ಪರಿಣಾಮ ಶವ ಸಂಸ್ಕಾರಕ್ಕೆ ಆಸ್ಪದವಾಗದೆ ಕಾಡಂಚಿನ ಜಾಗದಲ್ಲಿ ಶವ ಸಂಸ್ಕಾರ ಮಾಡಿದ ಘಟನೆ ವರದಿಯಾಗಿದೆ.
ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ನೀಲಸಂದ್ರ ಗ್ರಾಮದ ಸರ್ವೇ ನಂ.30 ರಲ್ಲಿ ಸ್ಮಶಾನಕ್ಕೆಂದು 16 ಗುಂಟೆ ಜಾಗ ಮೀಸಲು ಇಟ್ಟು ದಾಖಲೆ ನಿರ್ವಹಿಸಲಾಗಿದೆ, ನೀಲಸಂದ್ರ ಕಾಲೋನಿಯ ಪರಿಶಿಷ್ಟ ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಸಾರ್ವಜನಿಕ ಸ್ಮಶಾನಕ್ಕೆಂದು ಮೀಸಲಿಟ್ಟಿದ್ದ ಜಾಗದಲ್ಲಿ ಸಂಸ್ಕಾರಕ್ಕೆ ತೆಗೆದುಕೊಂಡು ಹೋದಾಗ ಸದರಿ ಜಾಗವು ತಮಗೆ ಸೇರಿದ್ದೆಂದು, 50 ವರ್ಷದಿಂದ ಭೂ ಮಂಜೂರಾತಿಗೆ ಅರ್ಜಿ ಹಾಕಿ ಜಮೀನು ಉಳುಮೆ ಮಾಡುತ್ತಿದ್ದು ಇದೀಗ ನಮ್ಮ ಜಮೀನಿನಲ್ಲಿ ಸಂಸ್ಕಾರ ಮಾಡಲಾಗದು ಎಂದು ಆಕ್ಷೇಪಿಸಿದರು, ಇದರಿಂದ ಮೃತನ ಸಂಬಂಧಿಕರು ಪರದಾಡುವಂತಾಯಿತು. ಕೊನೆಗೆ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಶವ ಸಂಸ್ಕಾರಕ್ಕೆ ಕಾಡಂಚಿನ ಖಾಸಗಿ ಜಮೀನಿನಲ್ಲಿ ವ್ಯವಸ್ಥೆ ಮಾಡಿದರು, ಗ್ರಾಮಸ್ಥರು ಕಂದಾಯ ಇಲಾಖಾಧಿಕಾರಿಗಳ ಕಾರ್ಯ ವೈಖರಿಗೆ ಆಕ್ಷೇಪಿಸಿ ತರಾಟೆಗೆ ತೆಗೆದುಕೊಂಡರು, ಈ ವೇಳೆ ಕಂದಾಯಾಧಿಕಾರಿಗಳು ಜಮೀನು ಗುರುತಿಸುವ ಹಂತದಲ್ಲಿ ಆಗಿರುವ ಸರ್ವೇ ಲೋಪದಿಂದ ಈರೀತಿ ಆಗಿದ್ದು ಇನ್ನೊಂದು ವಾರದಲ್ಲಿ ನಿಖರವಾಗಿ ಜಮೀನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ, ಆದರೆ ಗ್ರಾಮಸ್ಥರು ಕೋರ್ಟ್ ಹೇಳಿದೆ ಎಂದು ಕಾಟಾಚಾರಕ್ಕೆ ಜಾಗ ಇದೆ ಎಂದು ಬರಿ ದಾಖಲೆಯಲ್ಲಿ ಕೊಟ್ಟರೆ ಆಗದು, ಅದರ ಬಳಕೆ ಗ್ರಾಮಸ್ಥರಿಗೆ ಸಿಗಬೇಕು, ಇನ್ನೊಂದು ವಾರದೊಳಗೆ ಸಮರ್ಪಕ ಕ್ರಮವಾಗದೆ ಇದ್ದಲ್ಲಿ ಸಂಸ್ಕಾರ ಕಾರ್ಯವನ್ನು ರಸ್ತೆಯಲ್ಲೆ ಅಥವಾ ನಾಡ ಕಚೇರಿ ಮುಂದೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.