ತುಮಕೂರು ವಿವಿಗೆ ಹೆಚ್ ಎಂ ಜಿ ಹೆಸರಿಡಲು ಮನವಿ

111

Get real time updates directly on you device, subscribe now.


ತುಮಕೂರು: ಛಲವಾದಿ ಮಹಾಸಭಾ ಮುಖಂಡ ಟಿ.ಆರ್.ನಾಗೇಶ್ ಅವರು ತುಮಕೂರು ವಿಶ್ವ ವಿದ್ಯಾಲಯಕ್ಕೆ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ಅವರ ಹೆಸರು ಇಡುವಂತೆ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಮಾತನಾಡಿದ ನಾಗೇಶ್, ತುಮಕೂರು ಕಲ್ಪತರು ನಾಡು, ಶೈಕ್ಷಣಿಕ ನಗರ, ನಮ್ಮ ಜಿಲ್ಲೆಗೆ ತನ್ನದೇ ಆದ ವೈವಿಧ್ಯತೆ ಇದೆ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶಿವಕುಮಾರ ಮಹಾ ಸ್ವಾಮೀಜಿಯವರಿಂದ ಸ್ಥಾಪಿಸಲ್ಪಟ್ಟ ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆ ಇಡೀ ವಿಶ್ವದಲ್ಲೇ ಮಾದರಿಯಾದ ವಿದ್ಯಾಸಂಸ್ಥೆಯಾಗಿದೆ, ಅದೇ ರೀತಿ ಬಡ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ವಸತಿ ಹಾಗೂ ಊಟ ನೀಡಿ ಇಡೀ ದೇಶಕ್ಕೆ ಮಾದರಿಯಾದ ಶಿಕ್ಷಣ ಸಂಸ್ಥೆಯೆಂದರೆ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯನವರ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯಾಗಿದೆ ಎಂದು ಹೇಳಿದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಗೆ ಹೆಸರು ತಂದಿರುತ್ತಾರೆ, ಅದರಂತೆ 2004 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಉನ್ನತ ಶಿಕ್ಷಣ ಸಚಿವರಾಗಿ ಈ ನಾಡುಕಂಡ ಹಿರಿಯ ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವ ಅವರು ತುಮಕೂರು ವಿಶ್ವ ವಿದ್ಯಾಲಯ ಸ್ಥಾಪನೆಗೆ ಕಾರಣರಾಗಿದ್ದಾರೆ, ಈ ವಿಶ್ವ ವಿದ್ಯಾಲಯಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಸರ್ಕಾರದಿಂದ ಒದಗಿಸುವಲ್ಲಿ ಕಾರಣಕರ್ತರಾಗಿದ್ದಾರೆ, ಡಾ.ಜಿ.ಪರಮೇಶ್ವರ್ ಅವರ ಕಠಿಣ ಪರಿಶ್ರಮದಿಂದ ಹಾಗೂ ಮುಂದಾಲೋಚನೆಯಿಂದ ತುಮಕೂರು ವಿಶ್ವ ವಿದ್ಯಾಲಯ ಇಡೀ ದೇಶದಾದ್ಯಂತ ಅತ್ಯಂತ ಮಾದರಿ ಉತ್ತಮ ವಿಶ್ವ ವಿದ್ಯಾಲಯವಾಗಿ ಗುರ್ತಿಸಲ್ಪಡುತ್ತಿದೆ ಎಂದರು.

ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಬಿದರಕಟ್ಟೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ತುಮಕೂರು ವಿಶ್ವ ವಿದ್ಯಾಲಯಕ್ಕೆ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ವಿಶ್ವ ವಿದ್ಯಾಲಯವೆಂದು ನಾಮಕರಣ ಮಾಡುವಂತೆ ಮನವಿ ಪತ್ರವನ್ನು ತುಮಕೂರು ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಸಲ್ಲಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಮುಖಂಡರಾದ ಟಿ.ಆರ್.ನಾಗೇಶ್, ಗೋವಿಂದರಾಜು, ಗಿರೀಶ್, ಸಿದ್ಧಲಿಂಗಯ್ಯ, ಶೇಖರ್, ಪ್ರಕಾಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!