ನರೇಗಾ ಯೋಜನೆ ಉದ್ಯೋಗದ ಆಸರೆ: ಪರಂ

115

Get real time updates directly on you device, subscribe now.


ಕೊರಟಗೆರೆ: ಸರಕಾರಿ ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ನರೇಗಾ ಯೋಜನೆ ಉದ್ಯೋಗದ ಆಸರೆ ನೀಡಲಿದೆ, ಕೊರಟಗೆರೆ ಕ್ಷೇತ್ರದ ಗ್ರಾಪಂ ಅಧಿಕಾರಿ ವರ್ಗ ಮತ್ತು ಚುನಾಯಿತ ಸದಸ್ಯರ ತಂಡವು ಸರಕಾರಿ ಶಾಲೆ ಮತ್ತುಅಂಗನವಾಡಿ ಕಟ್ಟಡಗಳ ಅಭಿವೃದ್ಧಿಗೆ ಪ್ರಮುಖ ಆದ್ಯತೆ ನೀಡಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಯ ಗಟ್ಲಗೊಲ್ಲಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ನೂತನ ಕಟ್ಟಡದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕೊರಟಗೆರೆ ಕ್ಷೇತ್ರದ ಜನತೆಯ ಆಶೀರ್ವಾದವೇ ನಾನು ಗೃಹ ಸಚಿವ ಆಗಲು ಪ್ರಮುಖ ಕಾರಣ, ಕರ್ನಾಟಕ ರಾಜ್ಯ ಮತ್ತು ಕೊರಟಗೆರೆ ಕ್ಷೇತ್ರದ ಅಭಿವೃದ್ಧಿಗೆ ಜನರು ಬಹಳಷ್ಟು ನಿರೀಕ್ಷೆಯಿದೆ, 220 ತಾಲೂಕು ಬರಪೀಡಿತ ಎಂದು ಘೋಷಣೆ ಆಗಿದೆ, ಬರಗಾಲ ನಿರ್ವಹಣೆಯ ಜೊತೆಯಲ್ಲೇ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆಯ ನೀರು ಕೊರಟಗೆರೆ ಕ್ಷೇತ್ರದ ರೈತರಿಗೆ ಇನ್ನೇರಡು ವರ್ಷದಲ್ಲಿ ಬಂದೇ ಬರುತ್ತೇ, ಅದಕ್ಕೆ ನಾನೇ ಗ್ಯಾರಂಟಿ, ಎತ್ತಿನಹೊಳೆ ಜೊತೆಯಲ್ಲಿ ಹೇಮಾವತಿ ನೀರಿಗೆ ಆದ್ಯತೆ ನೀಡಲಾಗಿದೆ, ರೈತರಿಗೆ ನೀರು ಕೊಟ್ಟರೇ ಸಾಕು ಅವರ ಜೀವನ ಶೈಲಿಗೆ ಬದಲಾಗುತ್ತೆ, ಅದು ನನಗೆ ಗೋತ್ತು, ನೀರಾವರಿಯೋಜನೆಗೆ ನಾನು ಪ್ರಮುಖ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

ಸಿದ್ದರಬೆಟ್ಟದ ಶ್ರೀಮಠದ ವೀರಭದ್ರ ಶಿವಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪೂರ್ವಜರು ಗ್ರಾಮ ಸೃಷ್ಟಿಯಾಗುವ ಮುಂಚೆಯೇ ಆಂಜನೇಯ ದೇವಾಲಯ ಸ್ಥಾಪನೆ ಮಾಡುತ್ತಿದ್ದರು, ಗ್ರಾಮಗಳ ಆರೋಗ್ಯ ಮತ್ತು ಶಾಂತಿ ಸುರಕ್ಷತೆಗಾಗಿ ಪ್ರತಿ ಗ್ರಾಮದಲ್ಲೂ ಆಂಜನೇಯ ದೇವಾಲಯದ ಪ್ರತಿಷ್ಠಾಪನೆ ಆಗಿವೆ, ನಮ್ಮ ಗುರು- ಹಿರಿಯರ ನಂಬಿಕೆಯೇ ನಮ್ಮ ಬದುಕಿನ ಬಹುದೊಡ್ಡ ಮಾರ್ಗದರ್ಶನ ಎಂದು ತಿಳಿಸಿದರು.

ಎಲೆರಾಂಪುರ ಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, 80 ವರ್ಷದ ಇತಿಹಾಸ ಇರುವ ಶ್ರೀಕ್ಷೇತ್ರ ಗಟ್ಲಗೊಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯ, 2023ರಲ್ಲಿ ಆಂಜನೇಯ ದೇವಾಲಯದ ಕಟ್ಟಕ್ಕೆ ಗುದ್ದಲಿ ಪೂಜೆ ಆಗಿದೆ, 2024ಕ್ಕೆ ನಾವೇ ಮತ್ತೇ ಉದ್ಘಾಟನೆ ಮಾಡೋಣ, ದೇವಾಲಯ ನಿರ್ಮಾಣದಿಂದ ಗ್ರಾಮದಲ್ಲಿ ಶಾಂತಿ ನೆಲೆಸಲು ಸಾಧ್ಯಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಮಾಜಿ ತಾಪಂ ಸದಸ್ಯ ರವಿಕುಮಾರ್, ಮುಖಂಡರಾದ ವಾಲೇಚಂದ್ರಯ್ಯ, ಎಂ ಎನ್ ಜೆ ಮಂಜುನಾಥ, ಗಟ್ಲಹಳ್ಳಿ ಕುಮಾರ್, ಎಡಿ ಬಲರಾಮಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!