ತುರುವೇಕೆರೆ: ಪಟ್ಣಣದ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡುವ ಮೂಲಕ ಕಂದಾಯ ಸಚಿವ ಕೃಷ್ಣಭೈರೇಗೌಡರು ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಡಳಿತಾತ್ಮಕವಾಗಿ ಚುರುಕು ಮುಟ್ಟಿಸಿದರು.
ತುರುವೇಕೆರೆ ತಾಲೂಕು ಕಚೇರಿಯ ಆವರಣ ಪ್ರವೇಶಿಸಿದ ಕಂದಾಯ ಸಚಿವರು ಪಡಸಾಲೆಯ ಕಾರ್ಯ ವೈಖರಿ ವೀಕ್ಷಣೆ ಮಾಡಿದರು, ಕಂದಾಯ ಇಲಾಖೆ ಸಿಬ್ಬಂದಿ ದಿಡೀರ್ ಸಚಿವರನ್ನು ಕಂಡು ಕಕ್ಕಾಬಿಕ್ಕಿಯಾದರು, ತಾಲೂಕು ಕಚೇರಿ ಒಳಗೆ ಅರ್ಜಿಗಳೊಂದಿಗೆ ಕುಳಿತಿದ್ದ ಸಾರ್ವಜನಿಕರನ್ನು ಸಚಿವರು ಖುದ್ದು ಮಾತನಾಡಿ ಅವರ ಸಮಸ್ಯೆ ಆಲಿಸಿದರು, ಸಾರ್ವಜನಿಕ ಸಮಸ್ಯೆ ಕುರಿತಾಗಿ ಅಲ್ಲಿನ ಶಿರಸ್ತೇದಾರ್ ನೀಡಿದ ಉತ್ತರಕ್ಕೆ ಸಿಡಿಮಿಡಿಗೊಂಡ ಸಚಿವರು ನೀವು ಆಕಾಶದಲ್ಲಿ ಇದ್ದೀರೋ ಅಥವಾ ಭೂಮಿ ಮೇಲೆ ಇದ್ದಿರಾ, ನೀವು ಯಾರ ಎದುರು ನಿಂತು ಮಾತನಾಡುತ್ತಿರುವಿರಿ ಎಂಬ ಅರಿವಿದೆಯೇ ಎಂದು ಗುಡುಗಿದರು.
ಆನಂತರ ತಾಲೂಕು ಕಚೇರಿ ಆವರಣದ ಪ್ರವೇಶಿಸಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅವರನ್ನು ಎಲ್ಲಿ ಹೋಗಿದ್ದೀರಿ ಎಂದು ಪ್ರಶ್ನಿಸಿದರು, ತಹಶೀಲ್ದಾರ್ ಸಚಿವರಿಗೆ ದಾಖಲೆಗಳ ಪ್ರದರ್ಶಿಸಿ ಉತ್ತರ ನೀಡಿ ಗ್ರಾಮ ಭೇಟಿ ನೀಡಿದ್ದಾಗಿ ವಿವರಿಸಿದರು.
ತಾಲೂಕು ಕಚೇರಿ ಆವರಣದಲ್ಲಿನ ಸಿಬ್ಬಂದಿ ಕೊಠಡಿಗೆ ಭೇಟಿ ಸುಮಾರು 2 ತಿಂಗಳಿಂದ ಕಡತ ವಿಲೇ ಇಟ್ಟಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು, ತುರುವೇಕೆರೆ ಕೆರೆ ಒತ್ತುವರಿ ತೆರವು ಕುರಿತಂತೆ ಕನಿಷ್ಟ ಸ್ಥಳ ಭೇಟಿ ನೀಡದ ತಹಶೀಲ್ದಾರ್ ವಿರುದ್ಧ ಸಚಿವರು ಗರಂ ಆದರು.
ಆನಂತ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ ತಾಲೂಕು ಕಚೇರಿಗಳೀಗೆ ದಿಢೀರ್ ಭೇಟಿ ನೀಡುವುದರಿಂದ ವಸ್ತು ಸ್ಥಿತಿ ಅರ್ಥವಾಗಲಿದೆ, ಈ ಹಿನ್ನಲೆಯಲ್ಲಿ ತುರುವೇಕೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ್ದೇನೆ, ಕಡತಗಳನ್ನು ವಿಲೇ ಇಡದಂತೆ ಸೂಚಿಸಲಾಗಿದೆ, ಅಧಿಕಾರಿಗಳಿಂದಾಗುವ ವಿಳಂಬ ಹಾಗೂ ರೈತರಿಗಾಗುತ್ತಿರುವ ತೊಂದರೆ ಭೇಟಿಯಿಂದ ಮನವರಿಕೆಯಾಗುತ್ತಿದೆ, ಆಡಳಿತ ಬಿಗಿ ಮಾಡುವ ನಿಟ್ಟಿನಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಶಿರಸ್ತೇದಾರ್ ಸುನಿಲ್ ಕುಮಾರ್, ಕಾಂಗ್ರೆಸ್ ಮುಖಂಡ ಟಿ.ಎನ್.ಶಿವರಾಜ್, ರೇವಣ್ಣ, ಜೋಗಿಪಾಳ್ಯ ಶಿವರಾಜ್, ಗವಿಯಪ್ಪ ಇತರರು ಇದ್ದರು.
Comments are closed.