ನಿತ್ಯದ ವ್ಯವಹಾರ ಕನ್ನಡದಲ್ಲೇ ನಡೆಯಲಿ: ಹಿರೇಮಠಶ್ರೀ

65

Get real time updates directly on you device, subscribe now.


ತುಮಕೂರು: ಜಾತಿ, ಮತ, ಆಚಾರ, ವಿಚಾರಗಳನ್ನು ಮನೆಯಲ್ಲಿ ಅನುಸರಿಸಿ, ನಿತ್ಯದ ವ್ಯವಹಾರದಲ್ಲಿ ನಾವೆಲ್ಲರೂ ಕನ್ನಡವನ್ನೇ ಬಳಸಬೇಕು. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರನ್ನೂ ಒಗ್ಗೂಡಿಸುವ ಭಾವೈಕ್ಯತೆಯ ಭಾಷೆ ಕನ್ನಡ ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಮಂಡಿಪೇಟೆ 2ನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಯುವರತ್ನ ತ್ರಿಚಕ್ರ ಮತ್ತು ನಾಲ್ಕು ಚಕ್ರ ಎಲ್ಜಿವಿ ವಾಹನಗಳ ಮಾಲೀಕರ ಸಂಘ ಆಚರಿಸಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾಮೀಜಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ಕಾರಣದಿಂದಾಗಿ ನಾವೆಲ್ಲಾ ಇಲ್ಲಿ ಸೇರುವಂತಾಗಿದೆ, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕನ್ನಡಕ್ಕಿದೆ ಎಂದ ಸ್ವಾಮೀಜಿ ಕನ್ನಡದ ಹಿರಿಮೆ, ನಾಡಿಗೆ ಹಿರಿಯರು ಕೊಟ್ಟ ಕೊಡುಗೆ ಸ್ಮರಿಸಿ ನಾಡುಕಟ್ಟುವ, ಕನ್ನಡ ಬೆಳೆಸುವ ಕಾಯಕದಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಕುವೆಂಪು ಅವರು ಹೇಳಿದಂತೆ ಕನ್ನಡ ನಾಡು ಸರ್ವ ಜನಾಂಗಗಳ ಶಾಂತಿಯ ತೋಟ, ಇಲ್ಲಿ ಎಲ್ಲಾ ಜಾತಿ ಧರ್ಮದವರು ಒಗ್ಗೂಡಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾರೆ, ಅದರೊಂದಿಗೆ ಪರಸ್ಪರ ಭಾವೈಕ್ಯತೆ ಬೆಳೆಯುತ್ತದೆ, ಹಲವು ಮಹನೀಯರು ನಮ್ಮ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ, ಅದರ ಮೌಲ್ಯ ಅರಿತು ನಾವು ಕನ್ನಡತನ ಬೆಳೆಸಿಕೊಂಡುಹೋಗಬೇಕು ಎಂದರು.

ನಗರ ಪಾಲಿಕೆ ಸದಸ್ಯ ಸೈಯದ್ ನಯಾಜ್ ಅಹ್ಮದ್ ಮಾತನಾಡಿ, ಮಕ್ಕಳಲ್ಲಿ ಕನ್ನಡ ಅಭಿಮಾನ ಬೆಳೆಸಿ ಅವರು ಕನ್ನಡ ಭಾಷೆಯನ್ನು ದೈನಂದಿನ ವ್ಯವಹಾರಗಳಲ್ಲಿ ಬಳಸಿದರೆ ಕನ್ನಡದ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ಸುಪ್ರೀಂ ಸ್ಟೀಲ್ ಮಾಲೀಕ ಜಾವೀದ್ ಬೇಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಿ.ಪಾಲನೇತ್ರ, ಸ್ಥಳೀಯ ಮುಖಂಡ ಜಿಯಾಉಲ್ಲಾ, ಸಬ್ ಇನ್ಸ್ಪೆಕ್ಟರ್ ಭಾರತಿ, ಸಂಘದ ಗೌರವಾಧ್ಯಕ್ಷ ಶಫೀಉಲ್ಲಾ, ಅಧ್ಯಕ್ಷ ರಿಯಾಜ್ ಪಾಷಾ, ಜಿಲ್ಲಾಧ್ಯಕ್ಷ ಟಿ.ಸಿ.ಸುರೇಶ್, ಉಪಾಧ್ಯಕ್ಷ ಮೊಹಮದ್ ಅಜ್ಗರ್, ಪ್ರಧಾನ ಕಾರ್ಯದರ್ಶಿ ಕಿರಣ್, ಖಜಾಂಚಿ ಟಿ.ಎನ್.ಭರತ್, ಮುಖಂಡರಾದ ಕರೀಂ ಪಾಷಾ, ಚಾಂದ್, ಶಾಹಬಾದ್, ಸಿದ್ದರಾಜು ಮುದ್ದಗೆರೆ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!