ದರೋಡೆಕೋರರ ಬಂಧನ

87

Get real time updates directly on you device, subscribe now.


ಕುಣಿಗಲ್: ತೋಟದ ಮನೆಯಲ್ಲಿ ಮಲಗಲು ಹೋಗುತ್ತಿದ್ದ ರೈತನನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ತಂಡವನ್ನು ಕೃತ್ಯ ನಡೆದ ನಾಲ್ಕೆ ದಿನದಲ್ಲಿ ಕುಣಿಗಲ್ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬೈಕ್ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಪನಿಪಾಳ್ಯದ ಬೋರೆಗೌಡ ಎಂಬಾತ ತನ್ನ ತೋಟದ ಮನೆಯಲ್ಲಿ ಮಲಗಲು ಹೋಗುತ್ತಿರುವಾಗ ನವೆಂಬರ್ 11ರ ರಾತ್ರಿ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿದ್ದರು, ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ನವೆಂಬರ್ 12 ರಂದು ಪ್ರಕರಣ ದಾಖಲಾಗಿತ್ತು, ಪ್ರಕರಣ ದಾಖಲಿಸಿಕೊಂಡು ಕುಣಿಗಲ್ ಪೊಲೀಸರು ಎಸ್ಪಿ ಅಶೋಕ್, ಎಎಸ್ಪಿ ಮರಿಯಪ್ಪ, ಡಿವೈಎಸ್ಪಿ ಲಕ್ಷ್ಮೀಕಾಂತ ಮಾರ್ಗದರ್ಶನದಲ್ಲಿ ಸಿಪಿಐ ನವೀನ್ಗೌಡ, ಪಿಎಸೈ ಲಕ್ಷ್ಮೀನಾರಾಯಣ, ಕೃಷ್ಣಕುಮಾರ್, ನಂಜೇಗೌಡ, ಸಿಬ್ಬಂದಿ ನಟರಾಜು, ಷಡಕ್ಷರಿ, ರಜನಿಕಾಂತ, ನವೀನ್, ಕುಮಾರ್ ಜಿಲ್ಲಾ ಪೊಲೀಸ್ ಶಾಖೆಯ ಸಹಯೋಗದಲ್ಲಿ ತನಿಖೆ ನಡೆಸಿ ಕೃತ್ಯ ನಡೆಸಿದ್ದ ತುಮಕೂರು ತಾಲೂಕು ಯತ್ತೇನಹಳ್ಳಿಯ ಕುಮಾರ, ತುಮಕೂರಿನ ಹನುಮಂತಪುರ ವಾಸಿ ಹರೀಶ್, ತುಮಕೂರು ತಾಲೂಕು ಉಳ್ಳೇನಹಳ್ಳಿಯ ಮೋಹನ್, ಚನ್ನರಾಯಪಟ್ಟಣ ತಾಲೂಕಿನ ಕಾಮನಘಟ್ಟದ ಮಧು, ಕೊರಟಗೆರೆ ತಾಲೂಕು ಕೋಳಾಲ ಗ್ರಾಮದ ರಂಗ, ಅರುಣ್ ಕುಮಾರ, ಕ್ಯಾತ್ಸಂದ್ರದ ಕೃಷ್ಣಮೂರ್ತಿ, ತುಮಕೂರು ನಗರದ ಗಂಗಸಂದ್ರದ ಕುಮಾರ್ ಅವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಕಪನಿಪಾಳ್ಯ ಗ್ರಾಮದವನಾದ ಗಂಗಾಧರ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಎಂಟು ಮೊಬೈಲ್, ನಾಲ್ಕು ಬೈಕ್, ಒಂದು ಆರೆಕೋಲು, ಒಂದು ಚಾಕು ಹಾಗೂ ದೂರುದಾರನಿಂದ ದರೋಡೆ ಮಾಡಿದ್ದ ಟಚ್ ಸ್ಕ್ರೀನ್ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!