ಗುಳ್ಳೆನರಿ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ

133

Get real time updates directly on you device, subscribe now.


ತುಮಕೂರು: ಟಿ ಆರ್ ಪಿ ಕ್ರಿಯೇಷನ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ನಿಗೂಢ, ಹಾಸ್ಯ ಕಥಾವಸ್ತು ಒಳಗೊಂಡ ಗುಳ್ಳೆನರಿ ಸಿನಿಮಾದ ಚಿತ್ರೀಕರಣ ತುಮಕೂರಿನಲ್ಲಿ ಆರಂಭವಾಗಿದ್ದು, ಹಿರೇಮಠದ ಡಾ.ಶಿವಾನಂದ ಶಿವಚಾರ್ಯ ಸ್ವಾಮೀಜಿ ಆಲದಮರದ ಪಾರ್ಕ್ನ ಪ್ರೆಸ್ ಕ್ಲಬ್ ನಲ್ಲಿ ಚಿತ್ರೀಕರಣಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಚಲನಚಿತ್ರ ಒಂದು ಒಳ್ಳೆಯ ಮಾಧ್ಯಮ, ಅದನ್ನು ಸಮರ್ಥವಾಗಿ ಬಳಸಿಕೊಂಡು ಜನರಿಗೆ ಒಳ್ಳೆಯ ಸಂದೇಶ ನೀಡಬಹುದು ಎಂಬುದಕ್ಕೆ ನಮ್ಮ ಮುಂದೆ ಅನೇಕ ಉದಾಹರಣೆಗಳಿವೆ, ಅದೇ ರೀತಿ ಹಾಸ್ಯ ಕಲಾವಿದರಿಗೆ ತುಮಕೂರು ಜಿಲ್ಲೆಯಲ್ಲಿ ಕೊರತೆಯಿಲ್ಲ, ನರಸಿಂಹರಾಜು, ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣ್ಣಯ್ಯ ಸೇರಿದಂತೆ ಹಲವಾರು ಜನರು ಈ ಸಾಲಿನಲ್ಲಿ ನಿಲ್ಲುತ್ತಾರೆ, ಗುಳ್ಳೆನರಿ ಸಿನಿಮಾದ ನಾಯಕನಾಗಿರುವ ರಘು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದು, ಆತನನ್ನೇ ನಾಯಕನಾಗಿ ಮಾಡುತ್ತಿರುವ ಈ ಚಿತ್ರ ಯಶಸ್ಸು ಕಾಣಲಿ, ಹಾಕಿದ ಬಂಡವಾಳ ಬರಲಿ ಎಂದು ಶುಭ ಹಾರೈಸಿದರು.

ಗುಳ್ಳೆನರಿ ಚಲನಚಿತ್ರದ ನಿರ್ದೇಶಕ ಶ್ರೀರಂಜನ್ ಮಾತನಾಡಿ, ಇದು ನನ್ನ ಎರಡನೇ ಚಿತ್ರ, ನವಭಾರತ ಎಂಬ ಮೊದಲ ಚಿತ್ರವನ್ನು ನಾನೇ ನಿರ್ದೇಶಿಸಿದ್ದು, ಒಳ್ಳೆಯ ಪ್ರದರ್ಶನ ಕಂಡಿದೆ, ಒಂದು ಗ್ರಾಮ ಪಂಚಾಯಿತಿ ಚುನಾವಣೆಯ ಸುತ್ತ ನಡೆಯುವ ಘಟನೆಗಳನ್ನೇ ಕಥಾ ವಸ್ತುವಾಗಿಟ್ಟುಕೊಂಡು ಗುಳ್ಳೆನರಿ ಸಿನಿಮಾದ ಚಿತ್ರಕಥೆ ಸಿದ್ಧಪಡಿಸ ಲಾಗಿದೆ, ಇದರಲ್ಲಿ ಸಸ್ಪೇನ್, ಥ್ರಿಲ್ಲರ್, ಹಾಸ್ಯ ಒಳಗೊಂಡಿದ್ದು, ರಘು ನಾಯಕ ನಟನಾಗಿ, ಇತರೆ ಸಹ ಕಲಾವಿದರ ಆಯ್ಕೆ ನಡೆದಿದೆ, ನಾಯಕಿಯ ಆಯ್ಕೆ ಕೊನೆಯ ಹಂತದಲ್ಲಿದೆ, ತುಮಕೂರು, ಶಿವಮೊಗ್ಗ, ಮಂಡ್ಯ ಮತ್ತಿತರ ಕಡೆ ಚಿತ್ರೀಕರಣ ನಡೆಯಲಿದೆ, ಸ್ಥಳೀಯ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಚಿತ್ರಕಥೆ, ಸಂಭಾಷಣೆ, ಹಾಡುಗಾರಿಕೆ ಮಾಡಿದ್ದೇನೆ, ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ ಎಂದರು.

ಚಿತ್ರದ ನಿರ್ಮಾಪಕ ಮಹಾಂತೇಶ ಮಾತನಾಡಿ, ಸ್ಥಳೀಯ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಉತ್ತಮ ಸಂದೇಶವನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಇದಾಗಿದೆ, ಹಾಗಾಗಿ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದು, ಚಿತ್ರಕ್ಕೆ ಕನ್ನಡಪರ ಸಂಘಟನೆಗಳ ಬೆಂಬಲವೂ ಇದೆ ಎಂದರು.
ಗುಳ್ಳೆನರಿ ಚಲನಚಿತ್ರದ ಕಲಾವಿದರಾದ ಡಾ.ಪ್ರಹ್ಲಾದ್, ಶಿವಕುಮಾರ್, ಮಲ್ಲೇಶ್, ನಾರಾಯಣಪ್ಪ, ಶ್ರೀನಿವಾಸ್ ಬಾಬು, ಸಿದ್ದರಾಜು, ವಿನಮ್ ಕುಮಾರ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!