ದುರ್ಗಮ್ಮ ದೇವಿ ದೇವಸ್ಥಾನ ಮುಖ್ಯದ್ವಾರದ ಪುನರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

423

Get real time updates directly on you device, subscribe now.

ತುಮಕೂರು: ಸ್ಮಾರ್ಟ್ಸಿಟಿ ವತಿಯಿಂದ ಕೋತಿತೋಪು ಮುಖಾಂತರ ಬೆಳಗುಂಬ ರಸ್ತೆಯವರೆಗೂ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದು, ರಸ್ತೆ ಅಗಲೀಕರಣ ಮಾಡುವ ದೃಷ್ಟಿಯಿಂದ ಎನ್.ಆರ್.ಕಾಲೋನಿಯ ಶ್ರೀದುರ್ಗಮ್ಮ ದೇವಿಯ ಮುಖ್ಯದ್ವಾರ ತೆರೆವುಗೊಳಿಸುವುದರಿಂದ ಸ್ಥಳೀಯ ಜನರು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕರಿಗೆ ಮನವಿ ಸಲ್ಲಿಸಿದ್ದರು.
ಇದರ ಬಗ್ಗೆ ಮಾಹಿತಿ ಪಡೆದ ನಗರ ಶಾಸಕರು ಅತೀ ಶೀಘ್ರದಲ್ಲೇ ಮುಖ್ಯದ್ವಾರ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಎನ್.ಆರ್.ಕಾಲೋನಿಯ ಶ್ರೀ ದುರ್ಗಮ್ಮ ದೇವಿಯ ಮುಖ್ಯದ್ವಾರ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಶ್ರೀಕೋಡಿಬಸವೇಶ್ವರ ದೇವಾಲಯದ ಮುಂದಿರುವ ಶತಮಾನಕ್ಕೂ ಹಿಂದಿನ ಪುರಾತನ ಕಾಲದಿಂದಲೂ ಇಲ್ಲಿ ನೆಲೆಗೊಂಡಿರುವ ಆದಿಶಕ್ತಿ ದುರ್ಗಮ್ಮ ದೇವಿಯ ದೇವಾಲಯ ಸ್ಥಾಪನೆಗೊಂಡಿದ್ದು, ಸ.ನಂ.170 ಜಮೀನಿನ ವಿಸ್ತೀರ್ಣ 2-06 ಗುಂಟೆ ಮತ್ತು ಸ.ನಂ.171 0- 36 ಗುಂಟೆ ಜಮೀನಿನಲ್ಲಿ ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದ ಜಮೀನಿನ ವಿಸ್ತೀರ್ಣ ಗುರಿತಿಸಿ, ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡು ಸ.ನಂ.170 ರ ವಿಸ್ತೀರ್ಣ 2-06 ಗುಂಟೆ ಸ.ನಂ.171 0- 36 ಗುಂಟೆ ಜಮೀನನ್ನು ದುರ್ಗಮ್ಮ ದೇವಾಲಯದ ಜೀರ್ಣೋದ್ಧಾರ, ಮಾದಿಗ ಜನಾಂಗದ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಮೀಸಲು ಇಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಈ ಸಮಸ್ಯೆ ಬಗೆಹರಿಸಲು ಶ್ರಮ ವಹಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಶ್ರೀ ದುರ್ಗಮ್ಮ ದೇವಿಯ ಮುಖ್ಯದ್ವಾರದ ಕಾಮಗಾರಿಯನ್ನು ತುಮಕೂರು ಮಹಾನಗರ ಪಾಲಿಕೆಯ ನಿಧಿಯಿಂದ ಅವಶ್ಯಕವಿರುವ ಮೊತ್ತದಲ್ಲಿ ನಿರ್ಮಿತಿ ಕೇಂದ್ರ ಸಂಸ್ಥೆಯ ಮುಖಾಂತರ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕವನ್ನು ರೂ.12 ಲಕ್ಷ ವೆಚ್ಚದಲ್ಲಿ ಸ್ಥಳೀಯರ ಅನುಕೂಲವಾಗುವ ಸ್ಥಳದಲ್ಲಿ ಶೀಘ್ರದಲ್ಲಿ ನಿರ್ಮಿಸಲಾಗುವುದು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎನ್.ಆರ್.ಕಾಲೋನಿ 1ನೇ ಕ್ರಾಸ್ನಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸುಮಾರು 6 ಲಕ್ಷ ನೀಡಲಾಗಿದೆ ಎಂದರು.
ಎನ್.ಆರ್.ಕಾಲೋನಿಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 4 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಹಾಗೂ ಎನ್.ಆರ್.ಕಾಲೋನಿ, ಅಂಬೇಡ್ಕರ್ ಕಾಲೋನಿ, ನಿರ್ವಾಣಿ ಲೇಔಟ್ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ರೂ.1 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್.ಆರ್.ಕಾಲೋನಿಯ ಸ್ಥಳೀಯರು ಶಾಸಕರಲ್ಲಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ಮಾಡಿ ಅರ್ಹರಿಗೆ ಹಕ್ಕು ಪತ್ರ ನೀಡುವಂತೆ ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ಅವರಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಜಿ ಕೃಷ್ಣಪ್ಪ, ಉಪಮಹಾಪೌರರಾದ ನಾಜೀಮಾ ಬೀ, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ರೂಪ ಶೆಟ್ಟಳ್ಳಯ್ಯ, ಮಾಜಿ ಶಾಸಕ ಗಂಗಹನುಮಯ್ಯ, ಕೆ.ದೊರೈರಾಜು, ಮಾಜಿ ನಗರಸಭಾ ಸದಸ್ಯ ಚಂದ್ರಯ್ಯ, ದುರ್ಗಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ನರಸಿಂಹಮೂರ್ತಿ, ಟಿ.ಕೆ.ನರಸಿಂಹಮೂರ್ತಿ, ಜಯಮೂರ್ತಿ, ಕಿರಣ್, ಎನ್.ರಾಜಣ್ಣ, ನಾರಾಯಣಪ್ಪ, ಗಂಗಾಧರ್, ಜಯಣ್ಣ, ಲೋಕೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!