ನ.26ಕ್ಕೆ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್

71

Get real time updates directly on you device, subscribe now.


ತುಮಕೂರು: ನಗರದ ಲಯನ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ನವೆಂಬರ್ 26 ರಂದು ತುಮಕೂರು ವಿವಿಯ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಕೆಎನ್ ಆರ್ ಕಪ್ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಫ್ ಆಯೋಜಿಸಿದ್ದು,ದೇಶದ 12ಕ್ಕೂ ಹೆಚ್ಚು ರಾಜ್ಯಗಳ 1700ರಿಂದ 2000 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್ ತಿಳಿಸಿದ್ದಾರೆ.
ನಗರದ ಟೌನ್ ಕ್ಲಬ್ ನಲ್ಲಿ ಆಯೋಜಿಸಿದ್ದ ಕರಾಟೆ ಚಾಂಪಿಯನ್ ಶಿಪ್ ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಹೆಸರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದ್ದು, ನೆರೆಯ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಛತ್ತೀಸ್ ಗಡ, ಗುಜರಾತ್ ಸೇರಿದಂತೆ 12 ಜಿಲ್ಲೆಗಳ ಕರಾಟೆ ಪಟುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ತಮ್ಮ ಚಾಕಚಕ್ಯತೆ ಪ್ರದರ್ಶಿಸಲಿದ್ದಾರೆ ಎಂದರು.

ನವೆಂಬರ್ 26ರ ಭಾನುವಾರ ಬೆಳಗ್ಗೆ 9 ಗಂಟೆಗೆ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಆರಂಭವಾಗಲಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ, ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಕರಾಟೆ ಚಾಂಪಿಯನ್ ಶಿಪ್ ಗೆ ಚಾಲನೆ ನೀಡುವರು, ವಿಧಾನ ಪರಿಷತ್ ಸದಸ್ಯರಾದ ಆರ್.ರಾಜೇಂದ್ರ, ಉದ್ಯಮಿಗಳಾದ ಎನ್.ಎಸ್.ಜಯಕುಮಾರ್, ಎಸ್.ಪಿ.ಚಿದಾನಂದ್, ಚಂದ್ರಮೌಳಿ, ನೇತಾಜಿ ಶ್ರೀಧರ್, ವಿದ್ಯಾವಾಹಿನಿಯ ಕೆ.ಬಿ.ಜಯಣ್ಣ, ಧನಿಯಕುಮಾರ್, ಮೇಯರ್ ಪ್ರಭಾವತಿ ಸುಧೀಶ್ವರ್, ಪಾಲಿಕೆ ಸದಸ್ಯರಾದ ರೂಪ ಶೆಟ್ಟಾಳಯ್ಯ, ಲಲಿತಾ ರವೀಶ್, ಕ್ರೀಡಾಪಟುಗಳಾದ ಟಿ.ಕೆ.ಆನಂದ್, ಅನಿಲ್, ಲಯನ್ ಮಾರ್ಷಲ್ ಆರ್ಟ್ಸ್ ನ ಕಲ್ಪನಾ ಪ್ರಕಾಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು, ಕ್ರೀಡಾ ಪೋತ್ಸಾಹಕರು ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.
ಹೊರ ರಾಜ್ಯದಿಂದ ಬರುವ ಕ್ರೀಡಾಪುಟುಗಳಿಗೆ ಸಿದ್ದಗಂಗಾ ಮಠದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ, ತೀರ್ಪುಗಾರರಿಗೆ ನಗರದ ವಿವಿಧ ವಸತಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ, ಕರಾಟೆ ಎಂಬುದು ಒಂದು ಸ್ವಯಂ ರಕ್ಷಣಾ ಕಲೆಯಾಗಿದ್ದು, ಸರಕಾರ ಎಲ್ಲಾ ಶಾಲೆಗಳಲ್ಲಿಯೂ ಇದನ್ನು ಕಡ್ಡಾಯಗೊಳಿಸಬೇಕು, ಹಾಗೆಯೇ ಶಾಲಾ ಪಠ್ಯಪುಸ್ತಕ ಗಳಲ್ಲಿಯೂ ಇದರ ಬಗ್ಗೆ ಮಾಹಿತಿ ನೀಡಬೇಕು, ಅಲ್ಲದೆ ಸರಕಾರಿ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ಶೇ.2 ಕ್ಕಿಂತಲೂ ಹೆಚ್ಚಿನ ಮೀಸಲಾತಿಯನ್ನು ಕ್ರೀಡಾ ವಲಯಕ್ಕೆ ನೀಡಬೇಕು, ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ, ಶೂಟಿಂಗ್ ಸೇರಿದಂತೆ ಎಲ್ಲಾ ಒಳಾಂಗಣ ಆಟಗಳ ಅಭ್ಯಾಸಕ್ಕೆ ಜಾಗ ನೀಡುವಂತೆ ಧನಿಯಕುಮಾರ್ ಒತ್ತಾಯಿಸಿದರು.

ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ, ಇತ್ತೀಚಿನ ಕುಲುಷಿತ ವಾತಾವರಣದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಎಂಬುದೇ ಇಲ್ಲವಾಗಿದೆ, ಹಾಗಾಗಿ ಕರಾಟೆ ಮಹಿಳೆಯರ ಪ್ರಮುಖ ರಕ್ಷಣಾ ಕಲೆಯಾಗಿ ಎಲ್ಲೆಡೆ ಪರಿಚಯವಾಗಬೇಕಿದೆ, ಈ ನಿಟ್ಟಿನಲ್ಲಿ ಲಯನ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಮ್ಮಿಕೊಂಡಿರುವ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಅನಿಲ್ ಮಾತನಾಡಿ, ಸರಕಾರ ಇತ್ತೀಚೆಗೆ ಒನಕೆ ಓಬವ್ವನ ಹೆಸರಿನಲ್ಲಿ ಕರಾಟೆಯನ್ನು ಎಲ್ಲಾ ಸರಕಾರಿ ಶಾಲೆಗಳಲ್ಲಿ ಕಲಿಸಲು ಮುಂದಾಗಿರುವುದು ಸ್ವಾಗತಾರ್ಹ, ಕರಾಟೆ ಸಹ 2024ರ ಒಲಂಪಿಕ್ ನಲ್ಲಿ ಒಂದು ಕ್ರೀಡೆಯಾಗಿ ಸೇರ್ಪಡೆಯಾಗಿದೆ, ಇದಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಬೇಕೆಂಬ ಆಶಯ ವ್ಯಕ್ತಪಡಿಸಿದರು.

ಲಯನ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಪ್ರಕಾಶ್ ಮಾತನಾಡಿ, ಕರಾಟೆ ಪಟಗಳ ವಯಸ್ಸು ಮತ್ತು ದೇಹದ ತೂಕದ ಆಧಾರದ ಮೇಲೆ ಕಥೆ ಮತ್ತು ಕವಿತೆ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ, ಎಲ್ಲಾ ವಿಭಾಗಗಳಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಶಂಶನಾ ಪತ್ರ ನೀಡಲಾಗುವುದು, ತಾಲೂಕು ಮಟ್ಟದಿಂದಲೂ ಇದೇ ರೀತಿಯ ಸ್ಪರ್ಧೆ ನಡೆಸಿ, ಅಲ್ಲಿ ವಿಜೇತರಾದವರನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಅವಕಾಶ ಕಲ್ಪಿಸಲಾಗಿದೆ, ನಮ್ಮ ಸಂಸ್ಥೆಯಿಂದ ನಡೆಯುತ್ತಿರುವ ಏಳನೇ ರಾಷ್ಟ್ರೀಯ ಚಾಂಪಿಯನ್ ಶಿಪ್ ಇದಾಗಿದೆ, ಜನರು ಸಹಕಾರ ನೀಡಬೇಕೆಂದರು.

ಈ ವೇಳೆ ಲಯನ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ರವಿತೇಜ್, ಸುಮುಖ, ದರ್ಶನ್, ಕಾರ್ತಿಕ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!