ಪಿಯು ಹಂತ ಪ್ರೌಢಶಾಲೆಗಳಿಗೆ ವಿಲೀನ ಖಂಡನೀಯ

66

Get real time updates directly on you device, subscribe now.


ತುಮಕೂರು: ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಕೆಲವೊಂದು ನಿಯಮಗಳಿಂದ ಇಲಾಖೆಯ ಅಸ್ಮಿತೆ ಉಳಿಸಿಕೊಂಡು ಯಥಾಸ್ಥಿತಿ ಕಾಪಾಡುವಂತೆ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದ ನೌಕರರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೊಠಾರಿ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಪಿಯುಸಿ ಹಂತವನ್ನು 1971 ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದ ಪದವಿ ಪೂರ್ವ ಶಿಕ್ಷಣ ಮಂಡಳಿ ರಚನೆ ಮಾಡಲಾಯಿತು, ಅದರಂತೆ 1992 ರಲ್ಲಿ ಸ್ವತಂತ್ರ ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪುಗೊಂಡು ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ಇಲಾಖೆಯ ನಿಯಮಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವುದು ವಿಶೇಷ.

ಪ.ಪೂ. ಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮಂಡಳಿ ಎಂದು ಹೆಸರು ಬದಲಾಯಿಸಿದ್ದು ಅಲ್ಲದೆ ಪಿಯು ಹಂತವನ್ನು ಪ್ರೌಢಶಾಲೆಗಳಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿರುವುದು ಖಂಡನೀಯ, ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ವಿಲೀನ ಮಾಡಿದ್ದು, ಇದರಿಂದ ಕಾಲೇಜಿನ ಸಿಬ್ಬಂದಿ ಹಾಗೂ ಮಕ್ಕಳ ಮೇಲೆ ಪರಿಣಾಮಕಾರಿ ಒತ್ತಡ ಬೀಳುವುದು ಸಹಜ, ಇದರಿಂದ ಪರೀಕ್ಷಾ ವಿಭಾಗಗಳಲ್ಲಿ ಹಳಿ ತಪ್ಪಿರುವ ಇಲಾಖೆ ಸಮನ್ವಯ ಸ್ಥಾಪಿಸಬೇಕು, ಜಿಲ್ಲಾ ಹಂತಗಳಲ್ಲಿ ಪ.ಪೂ. ಶಿಕ್ಷಣ ಇಲಾಖೆಯನ್ನು ಜಿಲ್ಲಾ ಪಂಚಾಯತ್ ಮತ್ತು ಅಪರ ಆಯುಕ್ತರು ಇವರಿಗೆ ವಹಿಸಲು ಮುಂದಾಗಿದ್ದು, ಇದರಿಂದ ಸಂಭವಿಸುವ ಸಮಸ್ಯೆಗಳ ಬಗ್ಗೆ ಮನವಿ ಮಾಡಲಾಯಿತು, ಇದರೊಂದಿಗೆ ವರ್ಷವಿಡಿ 3 ಪರೀಕ್ಷೆ ಮಾಡಲು ಹೊರಟಿರುವುದು ಅವೈಜ್ಞಾನಿಕ ಮತ್ತು ಅತಾರ್ಕಿಕ ನಿರ್ಧಾರವಾಗಿದೆ, ಇದರಿಂದ ಉಪನ್ಯಾಸಕರ ಪಾಠ ಪ್ರವಚನ ಸರಿಯಾದ ಸಮಯಕ್ಕೆ ನಡೆಯದೇ ಹೋಗಬಹುದು, ಅಲ್ಲದೆ ಮಕ್ಕಳ ಮೇಲೆ ಪರಿಣಾಮಕಾರಿ ಒತ್ತಡ ಬೀರಬಹುದು ಎಂದು ಉಪನ್ಯಾಸಕರಲ್ಲಿ ಆತಂಕ ಕಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಮನವಿ ಮಾಡಿದರು.

ಸರ್ಕಾರ ಸಕಾಲದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೇ ಹೋದಲ್ಲಿ ಕರ್ನಾಟಕ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ, ಅನುದಾನಿತ ಕಾಲೇಜುಗಳ ನೌಕರರ ಸಂಘಗಳ ಒಕ್ಕೂಟವು ಮುಂದಿನ ಡಿಸೆಂಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಅನುದಾನಿತ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರಾಂಶುಪಾಲ ಕೃಷ್ಣಮೂರ್ತಿ, ನೇರಂ ನಾಗರಾಜು, ರಾಜ್ ಕುಮಾರ್, ಅಶ್ವತ್ಥ್ ನಾರಾಯಣ, ಫತೆ ಅಹಮದ್, ಜಯರಾಂ, ಸತೀಶ್.ಸಿ.ಜಿ, ಗೋವಿಂದರಾಜು, ಮಲ್ಲಯ್ಯ, ಚಂದ್ರಶೇಕರ ಆರಾಧ್ಯ, ಬೋಧಕೇತರ ಸಂಘದ ಅಧ್ಯಕ್ಷ ಎಸ್.ಎಲ್ ವರಾಹ ವೆಂಕಟಗಿರಿ, ಅಕ್ಕಮ್ಮ, ಸಂಧ್ಯಾ, ಜಗದೀಶ್ ಪ್ರಸಾದ್, ವಿಜಿಯಮ್ಮ, ಹರೀಶ್ ರೆಡ್ಡಿ, ಗೋವಿಂದಪ್ಪ, ಗಂಗಹನುಮಯ್ಯ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ನೌಕರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!