ಸಮುದಾಯದ ಏಳಿಗೆಗೆ ಶಿಕ್ಷಣ ಮುಖ್ಯ: ಶಬ್ಬೀರ್

413

Get real time updates directly on you device, subscribe now.

ತುಮಕೂರು: ಸಮುದಾಯದ ಉನ್ನತಿಕರಣ ಹಾಗೂ ಸಮುದಾಯದ ಏಳಿಗೆಗೆ ಇಂದು ಶಿಕ್ಷಣ ಬಹುಮುಖ್ಯವಾದದ್ದು ಹಾಗಾಗಿ ಎಲ್ಲರೂ ಕೂಡ ಶಿಕ್ಷಣದಿಂದ ತಮ್ಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ, ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಪಡೆಯಬೇಕಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಶಬ್ಬೀರ್ ಅಹಮ್ಮದ್ ತಿಳಿಸಿದರು.
ಫುರ್ಖನ್ ಮದರಸದ ವತಿಯಿಂದ ಹಮ್ಮಿಕೊಂಡಿದ್ದ ಉತ್ತಮ ವಿದ್ಯಾಭ್ಯಾಸ ಮಾಡಿ ವೃತ್ತಿಪರ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಾಲೆಬಿಟ್ಟ ಮಕ್ಕಳನ್ನು ಹಾಗೂ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿ ವೃತ್ತಿಪರ ತರಬೇತಿ ಹಾಗೂ ವೃತ್ತಿಪರ ಶಿಕ್ಷಣ ನೀಡಲು ಅನೇಕ ಕಾರ್ಯಕ್ರಮ ರೂಪಿಸಿ ಹಲವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿದ್ದು ಹಾಗೂ ಶಾಲೆಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತಂದಿರುವ ಹೆಗ್ಗಳಿಗೆ ಅಲ್ ಫುರ್ಖನ್ ಮದರಸಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಲ್ ಫುರ್ಖನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್, ವಕ್ಫ್ ಬೋರ್ಡ್ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಮೌಲಾನಾ ಶೇಕ್ ಮೊಹಮ್ಮದ್ ಕಾಝಿ, ಕಾರ್ಪೊರೇಟರ್ ನೂರುನ್ನಿಸ, ಮಾಜಿ ಕಾರ್ಪೊರೇಟರ್ ನದೀಮ್, ಸಮಾಜ ಸೇವಕ ಮೊಹಮ್ಮದ್ ಉಬೇದುಲ್ಲಾ, ಶೇಕ್ ಗೌಸ್ ಪಾಶಾ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!