ಮಕ್ಕಳಿಗೆ ನೈತಿಕ ಮೌಲ್ಯ ಕಲಿಸಿ: ಸಿಪಿಐ ದಿನೇಶ್ ಕುಮಾರ್

67

Get real time updates directly on you device, subscribe now.


ತುಮಕೂರು: ಇನ್ನೊಂದು ವಾರದಲ್ಲಿ ತುಮಕೂರು ಜಿಲ್ಲೆಗೆ ಸಾಮಾನ್ಯ ಸಂಖ್ಯೆಯ ಮಹಿಳಾ ಸಹಾಯವಾಣಿ ಬರಲಿದೆ, ಆರಕ್ಷಕ ಅರಿವು ಮೂಡಿಸುವ ಶಿಕ್ಷಕನಾಗಿ, ಸಮಾಜದ ರಕ್ಷಣೆಗಾಗಿ, ಕಾನೂನು ಕಾಪಾಡುವ ಯೋಧನಾಗಿ ಕಾರ್ಯ ನಿರ್ವಹಿಸುತ್ತಾನೆ ಎಂದು ತುಮಕೂರು ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯ ಕಲಾ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗವು ಲೈಂಗಿಕ ದೌರ್ಜನ್ಯ ಪ್ರತಿ ಬಂಧಕ ಘಟಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐಕ್ಯೂಎಸಿ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನದ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿ ಸ್ನೇಹಿಯಾಗಿ ಆರಕ್ಷಕ ಇಲಾಖೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಅರಿವಿಲ್ಲದೆಯೆ ಅರಳುವ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ, ಅರಿವಿನ ಶಿಕ್ಷಣದ ಅವಶ್ಯಕತೆ ಪಠ್ಯಗಳಲ್ಲಿ ಅಳವಡಿಸಬೇಕು, ಎಷ್ಟೇ ಪದವಿ ಪಡೆದರೂ ಜ್ಞಾನೋದಯವಾಗದೆ ಇದ್ದರೆ ಬದುಕು ಅರಳುವುದಿಲ್ಲ, ವಿಕಾಸವಾಗುವುದಿಲ್ಲ, ನಕಾರಾತ್ಮಕ ವಿಷಯಗಳಲ್ಲಿ ಯುವ ಪೀಳಿಗೆಯ ಆಸಕ್ತಿ ಹೆಚ್ಚಾಗಿದೆ, ಸಕಾರಾತ್ಮಕ ವಿಷಯಗಳನ್ನು ಪರಿಗಣಿಸಿದಾಗ ಮಾತ್ರ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.
ವೈಯಕ್ತಿಕ ಸುರಕ್ಷತೆಯ ಜೊತೆಗೆ ಡಿಜಿಟಲ್ ಸುರಕ್ಷತೆಯೂ ಮುಖ್ಯ, ಎಲ್ಲರಿಗೂ ಅನ್ವಯಿಸುವಂತೆ ಸಂಚಾರಿ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದೆ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುವುದು, ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುದು, ಅತಿ ವೇಗ, ವಾಹನಗಳನ್ನು ಹಿಂದಿಕ್ಕೆ ಮುನ್ನುಗ್ಗುವುದು, ವಾಹನ ಚಲಾಯಿಸುವ ವೇಳೆ ಮೊಬೈಲ್ ಬಳಸಿ ಅಪಘಾತಕ್ಕಿಡಾಗಿ ಅಮೂಲ್ಯ ಬದುಕನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಸಾಮಾನ್ಯ ಜ್ಞಾನದ ಕೊರತೆ ವಿದ್ಯಾರ್ಥಿಗಳಲ್ಲಿದೆ, ಬದುಕು ಬದಲಿಸಬೇಕಾದ ಹುರುಪು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿದೆ, ಡ್ರಗ್ಸ್ ಸೇವಿಸುವವರ ಸಂಖ್ಯೆ ಹೆಚ್ಚಾಗಿದೆ, ತಂದೆ- ತಾಯಿ ಮಕ್ಕಳ ಬಗ್ಗೆ ನಿಗಾ ವಹಿಸಬೇಕು, ಮಕ್ಕಳಲ್ಲಿ ಕಾಣುವ ದಿನನಿತ್ಯದ ಬದಲಾವಣೆಯ ಮೇಲೆ ಗಮನ ಹರಿಸಬೇಕು, ಹಣದ ಅವಶ್ಯಕತೆ ಇದ್ದರೆ ಮಾತ್ರ ಕೊಡಬೇಕು, ಭವಿಷ್ಯ ಉಜ್ವಲವಾಗಿಸುವ ಶಿಸ್ತು, ಸಂಯಮ, ನೈತಿಕ ಮೌಲ್ಯ ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಉಪಕರಣ, ಯಂತ್ರಗಳಿಗಿಂತ ಮಾನವನ ಬದುಕುದೊಡ್ಡದು, ಬದುಕಿನ ಮೇಲೆ ನಿರ್ಲಕ್ಷ್ಯ ಬೇಡ, ಉತ್ತಮ ಗುರಿ ನಮ್ಮ ವ್ಯಕ್ತಿತ್ವದ ಭಾಗ, ಅಪರಾಧಗಳಿಗೆ ಪ್ರಚೋದನೆ ನೀಡುವುದು, ಭಾಗವಹಿಸುವುದು ಬದುಕನ್ನು ಸರ್ವನಾಶ ಮಾಡುತ್ತದೆ, ಗೆಲುವಿಗೆ ಅಡ್ಡದಾರಿಗಳಿಲ್ಲ, ವಾಸ್ತವ ಅರ್ಥ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ ಮಾತನಾಡಿ, ನಮ್ಮ ಕಾಲೇಜು ಪಠ್ಯ ಚಟುವಟಿಕೆಗಳೊಂದಿಗೆ ಜೀವನಕ್ಕೆ ಬೇಕಾಗಿರುವ ಪಾಠವನ್ನೂ ವಿದ್ಯಾರ್ಥಿಗಳಿಗೆ ನೀಡುತ್ತಿದೆ, ನೈತಿಕತೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕಾದ ಪ್ರಮುಖ ಅಂಶ ಎಂದರು.

ವಿವಿ ಲೈಂಗಿಕ ದೌರ್ಜನ್ಯ ಪ್ರತಿಬಂಧಕ ಘಟಕ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಘಟಕದ ಸಂಚಾಲಕಿ ಡಾ.ಸುನೀತಾ ವಿ.ಗಾಣಿಗೇರ್, ಸಮಾಜಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಮಾದಪ್ಪ.ಡಿ, ಗೋವಿಂದರಾಜು, ಡಾ.ವೀರೇಶ್.ಎಂ, ಡಾ.ಅನುಷಾ.ಎಸ್.ಈ. ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!