ಅಪಘಾತದಲ್ಲಿ ಬೈಕ್ ಸವಾರ ಸಾವು

105

Get real time updates directly on you device, subscribe now.


ಕುಣಿಗಲ್: ಬೈಕ್ ಸವಾರನಿಗೆ ಟೆಂಪೋ ಟ್ರಾವಲ್ಲರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು ಹಳೇಊರು ಗ್ರಾಪಂ ವಾಟರ್ ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೇಶ್ (44) ಎಂದು ಗುರುತಿಸಲಾಗಿದೆ, ಈತ ಹುಲಿಯೂರು ದುರ್ಗದಿಂದ ಹಳೆಊರು ಕಡೆಗೆ ತೆರಳುವ ಮಾರ್ಗ ಮಧ್ಯೆ ತುಮಕೂರಿನಿಂದ ಶ್ರೀರಂಗಪಟ್ಟಣಕ್ಕೆ ಹೊರಟಿದ್ದ ಟಂಪೋ ಟ್ರಾವಲ್ಲರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾನೆ, ಘಟನೆ ಸಂಬಂಧ ಹು.ದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!