ತುಮಕೂರು: ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಅರೋಟಿಕ್ ಡಿಸ್ಸೇಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದ ಶ್ರೀಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ವೈದ್ಯರ ತಂಡ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.
ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಹಾಗೂ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಮಾತನಾಡಿ, ಈಗಾಗಲೇ 1000 ಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರ ಚಿಕಿತ್ಸೆ ನಡೆಸಿ ದಾಪುಗಾಲು ಇಟ್ಟಿರುವ ಶ್ರೀಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಈ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಮತ್ತೊಂದು ಗರಿಯನ್ನು ತನ್ನ ಮೂಡಿಗೆರಿಸಿಕೊಂಡಿದೆ, ಇಂತಹ ಸಂಕೀರ್ಣ ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆ ನಡೆಸಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿ ಸಾಟಿ ಆಗಬಲ್ಲ ನುರಿತ ತಜ್ಞ ಡಾ.ತಮಿಮ್ ಅಹ್ಮದ್ ಮತ್ತು ವೈದ್ಯ ಸಮೂಹಕ್ಕೆ ಮತ್ತು ತಾಂತ್ರಿಕ ತಜ್ಞರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ ಡಾ.ಜಿ.ಪರಮೇಶ್ವರ ತಂಡದವರನ್ನು ಪ್ರಶಂಸಿದರು.
ಭಾರತದಿಂದ ಬೇರೆ ದೇಶಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳು ತೆರಳುವುದು ಸಹಜ, ಆದರೆ ವೆಸ್ಟ್ ಆಫ್ರಿಕಾದ ಅರೋಟಿಕ್ ಡಿಸ್ಸೇಕ್ಷನ್ ಶಸ್ತ್ರಚಿಕಿತ್ಸೆಗೆ ಬಂದಂತಹ 65 ವರ್ಷದ ಸಿಯೆರಾ ಲಿಯೋನ್ನ ಸತತ 20 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಇದೀಗ ಗುಣಮುಖರಾಗಿದ್ದು, ಎಲ್ಲರಂತೆ ಸಹಜ ಸ್ಥಿತಿಗೆ ತಲುಪಿದ್ದಾರೆ ಎಂದರು.
ವಿದೇಶದ ರೋಗಿಗಳು ತುಮಕೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಬಹುದು ಎಂಬುದನ್ನು ಆಸ್ಪತ್ರೆಯ ವೈದ್ಯರ ತಂಡ ಸಾಬೀತು ಪಡಿಸಿದೆ, ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ, ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಂತಾರಾಷ್ಟ್ರೀಯ ಗುಣಮಟ್ಟದ ಹೃದಯ ತಜ್ಞರ ತಂಡ ಮಾಡಿಕೊಂಡು, ವಿಶೇಷ ಮಾರ್ಗಸೂಚಿ ಅಳವಡಿಸಿಕೊಂಡು ಸಂಕೀರ್ಣ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುತ್ತಾರೆ ಎಂಬುದನ್ನು ಘೋಷಿಸಲು ನಮಗೆ ತುಂಬಾ ಸಂತಸ ತಂದಿದೆ ಎಂದರು.
ಕಾರ್ಡಿಯಾಕ್ ಫ್ರಾಂಟಿಡಾ ಮುಖ್ಯಸ್ಥ ಡಾ.ತಮಿಮ್ ಅಹ್ಮದ್ ಮಾತನಾಡಿ, ಸೂಕ್ಷ್ಮವಾದ ಹೃದಯ ಶಸ್ತ್ರ ಚಿಕಿತ್ಸೆಯನ್ನು ತುಮಕೂರಿನಂತಹ ಶ್ರೇಣಿಯ ನಗರದಲ್ಲಿ ಮಾಡಿರುವುದು ದೊಡ್ಡ ಸಾಧನೆಯಾಗಿದೆ, ಇದು ಭವಿಷ್ಯದ ಪಥಕ್ಕೆ ಮುನ್ನುಡಿಯಾಗಲಿದೆ, ಸಂಕೀರ್ಣ ಮತ್ತು ಮಾರಣಾಂತಿಕ ಸಮಸ್ಯೆ ಕಂಡು ಹಿಡಿದು ಅದನ್ನು ಗುಣಪಡಿಸಿ ರೋಗಿಗಳ ಮುಖದಲ್ಲಿ ನಗು ಅರಳಿಸಿದರೆ ಅದೇ ಸಂತೃಪ್ತಿ ಎಂದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ವೈದ್ಯರ ತಂಡ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.