ಕುಣಿಗಲ್: ದೇಶದ ಎಲ್ಲಾ ಪ್ರಜೆಗಳಿಗೂ ಸಮಾನತೆ ಪ್ರತಿಪಾದಿಸಿರುವ ಸಂವಿಧಾನದ ಆಶಯ ಸಾಕಾರಗೊಳಿಸಿದಾಗ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಕುಣಿಗಲ್ ನ ಪ್ರಧಾನ ಸಿವಿಲ್ ನ್ಯಾಯಾಧೀಶ ಲಕ್ಷ್ಮೀನರಸಿಂಹ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಸಾಂಸ್ಕೃತಿಕ ಸಮಿತಿ, ಎನ್ಎಸ್ಎಸ್ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಾಕ್ಷರತಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆ ಬೋಧಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಸದ್ಬಳಕೆ ಮಾಡಿಕೊಂಡು ಸಾಧಕರ ಸಾಧನೆಯ ಮಹತ್ವ ಅರಿತು ಉತ್ತಮ ಪ್ರಜೆಗಳಾಗಿ ರೂಪಗೊಂಡಾಗ ಮಾತ್ರ ತಂದೆ- ತಾಯಿಗಳಿಗೆ ಮತ್ತು ಗುರುಗಳಿಗೆ ಗೌರವ ತಂದು ಕೊಟ್ಟಂತಾಗುತ್ತದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಕಠಿಣ ಶ್ರಮ, ಶಿಸ್ತು, ಪ್ರಾಮಾಣಿಕತೆ, ಆದರ್ಶ ಮೈಗೂಡಿಸಿಕೊಳ್ಳಬೇಕು, ಇದಕ್ಕೆ ಆದರ್ಶವಾಗಿ ನಿಲ್ಲುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಣಿಗಲ್ ಹಿರಿಯ ವಕೀಲ ಬಸವರಾಜ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಾಯಾ ಸಾರಂಗಪಾಣಿ ವಹಿಸಿದ್ದರು, ವಕೀಲ ಸಂಘದ ಅಧ್ಯಕ್ಷ ಶಿವಪ್ರಸಾದ್, ವಕೀಲರಾದ ಶಿವಣ್ಣ, ಧನಲಕ್ಷ್ಮಿ, ಕೃಷ್ಣಪ್ಪ, ಸುಮತಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ.ಜೆ.ಶಿವಕುಮಾರ್, ಹಿರಿಯ ಪ್ರಾಧ್ಯಾಪಕ ಪ್ರೊ.ರಾಮಾಂಜನಪ್ಪ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಎಂ.ಗೋವಿಂದರಾಯ, ಎನ್ಎಸ್ಎಸ್ ಅಧಿಕಾರಿಗಳಾದ ಹನುಮಂತಪ್ಪ, ಹೆಚ್.ಎನ್.ನಾಗಮ್ಮ, ಸುರೇಶ ಬೊಮ್ಮನಹಾಳ್, ಅಧ್ಯಾಪಕರಾದ ನಾರಾಯಣದಾಸ್, ಮೈಲಾರಯ್ಯ.ಪಿ.ಎಲ್, ಡಾ.ಲಕ್ಷ್ಮೀ ನರಸಮ್ಮ, ಡಾ.ಗಿರಿಜಾಂಬ.ಕೆ.ಎನ್, ಮಮತಾ, ಟಿ.ಎನ್.ನರಸಿಂಹ ಮೂರ್ತಿ, ರೇಂಜರ್ ರೋವರ್ ಸಂಚಾಲಕ ಶ್ರೀನಿವಾಸ ಪ್ರಭು, ರುಕ್ಮಿಣಿ.ವಿ. ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಧರಣೇಶ್, ಗಂಗಾಧರ ಇತರರು ಇದ್ದರು.
Comments are closed.