ಜಾತಿ ಜನಗಣತಿ ವರದಿ ಪರಿಶೀಲಿಸಿ: ನಂಜಾವಧೂತ ಶ್ರೀ

156

Get real time updates directly on you device, subscribe now.


ಕೊರಟಗೆರೆ: ರಾಜ್ಯ ಸರ್ಕಾರವು ಜಾತಿ ಜನಗಣತಿ ವರದಿ ಪರಿಶೀಲಿಸಿ ವೈಜ್ಞಾನಿಕ ಹಾಗೂ ಸ್ಪಷ್ಟವಾದ ಎಲ್ಲಾ ಜಾತಿಗೂ ಅನ್ವಯವಾಗುವಂತೆ ಹೊಸ ಜಾತಿಗಣತಿ ಮಾಡಬೇಕು ಎಂದು ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಸರ್ಕಾರದ ಈಗಿನ ಜಾತಿ ಜನಗಣತಿ ವರದಿಯಲ್ಲಿ ರಾಜ್ಯದ ಬಹುದೊಡ್ಡ ಒಕ್ಕಲಿಗ, ವೀರಶೈವ ಜನಾಂಗಗಳ ಆಕ್ಷೇಪಣೆ ಇದೆ, ಸರ್ಕಾರ ಇದನ್ನು ಸರಿಯಾಗಿ ಮನಗೊಂಡು ಈ ವರದಿ ಬಿಡುಗಡೆಗೆ ದುಡುಕಬಾರದು, ರಾಜ್ಯದಲ್ಲಿ ಜಾತಿ ಜನಗಣತಿ ಸರಿಯಾದ ರೀತಿಯಲ್ಲಿ ಆಗಿಲ್ಲ, ಬೆಂಗಳೂರು ಮಹಾನಗರದಲ್ಲೇ ಸುಮಾರು ಒಂದು ಕೋಟಿ ಜನರ ಜನಗಣತಿ ಮಾಡಿಲ್ಲ, ಅದೇ ರೀತಿ ರಾಜ್ಯದಲ್ಲೂ ಆಗಿದೆ, ಈ ಜನಗಣತಿಯಲ್ಲಿ ರಾಜ್ಯದಲ್ಲಿನ ಅತಿ ಸಣ್ಣ ಮತ್ತು ತಳ ಸಮುದಾಯಗಳ ಜಾತಿ ಜನಗಣತಿಯೂ ಸರಿಯಾಗಿ ಆಗಿಲ್ಲ, ರಾಜ್ಯದ ಹಲವರ ಮನವಿ ಮೇರೆಗೆ ಹೊಸ ಜಾತಿಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಸಿದ್ದಾರೆ, ಇದಕ್ಕೆ 130 ಕೋಟಿ ಹಣ ವೆಚ್ಚವಾಗಬಹುದು, ರಾಜ್ಯ ಸರ್ಕಾರವು 3 ಲಕ್ಷ ಕೋಟಿ ಬಜೆಟ್ ಪ್ರತಿವರ್ಷ ಹೊಂದಿದೆ, ಸರ್ಕಾರಕ್ಕೆ ಹೊಸ ಜಾತಿ ಜನಗಣತಿ ಹೊರೆಯಾಗುವುದಿಲ್ಲ ಎಂದರು.

ರಾಜ್ಯದಲ್ಲಿ ಬರಗಾಲ ತೀವ್ರವಾಗಿದೆ ರೈತರು ತೀರ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರವು ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಬೆಳೆ ವಿಮೆ ವಿಳಂಬ ಮಾಡದೆ ನೀಡಿಬೇಕು, ನಮ್ಮ ರಾಜ್ಯದಲ್ಲಿ ಸಾವಿರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹೋಗುತ್ತಿದೆ, ನೀರಾವರಿ ಯೋಜನೆಗಳು ಇಂತಹ ಬರಗಾಲದ ಸಮಯದಲ್ಲಿ ಉಪಯೋಗವಾಗಲಿದೆ, ಈ ಭಾಗದ ಎತ್ತಿನಹೋಳೆ ಯೋಜನೆ ಕಾಮಗಾರಿ ವೇಗವಾಗಿ ನಡೆಯಬೇಕು ಎಂದ ಅವರು ವಿಶ್ವಸಂಸ್ಥೆ ವರದಿಯಂತೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಗುಣಮಟ್ಟದ ಆಹಾರದ ಕೊರತೆ ಹೆಚ್ಚಾಗಿದೆ, ಇದರಿಂದ ಜನರ ಮತ್ತು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಣಮಟ್ಟದ ಆಹಾರ ಉತ್ಪಾದನೆ ಮತ್ತು ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ, ಗ್ರಾಪಂ ಸದಸ್ಯ ಮುರುಡಪ್ಪ, ಪಪಂ ಮಾಜಿ ಸದಸ್ಯ ಕೆ.ಎಲ್.ಆನಂದ್, ಸಿದ್ದರಾಜು, ಸಂತೋಷ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!