ತುಮಕೂರು: ನಗರದ ಅಗಳಕೋಟೆಯ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ 12ನೇ ಘಟಿಕೋತ್ಸವ ಶಿಕ್ಷಣ ಭೀಷ್ಮ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಜರುಗಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೇರಳದ ತಿರುವನಂತಪುರಂನ ಲೋಕಸಭಾ ಸದಸ್ಯ ಡಾ.ಶಶಿ ತರೂರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅಭಿನಂದಿಸಿದರು.
ನಂತರ ಮಾತನಾಡಿದ ಅವರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತಕ್ಕಾಗಿ ಶ್ರಮಿಸಿದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಮುಂತಾದವರನ್ನು ಸ್ಮರಿಸಿದರು, ಆಚಾರ್ಯ ವಿನೋಭಾ ಭಾವೆರವರ ಭೂದಾನ ಚಳವಳಿ ಸಂದರ್ಭದಲ್ಲಿ ಪ್ರೇರಿತರಾದ ಶಿಕ್ಷಣ ಭೀಷ್ಮ ಡಾ.ಹೆಚ್.ಎಂ.ಗಂಗಾಧರಯ್ಯ ಅವರು ಕಟ್ಟಿದ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆ ಅವರ ಮಕ್ಕಳ ಆಸಕ್ತಿಯ ಫಲವಾಗಿ ಇಂದು ಬೃಹದಾಕಾರವಾಗಿ ಬೆಳೆದಿದ್ದು, ಜಾಗತಿಕವಾಗಿ ಗುರುತಿಸಿಕೊಂಡಿದೆ, ರಾಜ್ಯದ ಹಿಂದುಳಿದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹುಟ್ಟಿಕೊಂಡಿದೆ, ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದವರಿಗೂ ಕೈಗೆಟುಕುವ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಹೆಗ್ಗಳಿಕೆ, ಹೆಸರಾಂತ ಆಸ್ಪತ್ರೆಗಳಲ್ಲಿ ಸಾಧ್ಯವಿಲ್ಲವೆಂದು ಘೋಷಿಸಿದ ಶಸ್ತ್ರ ಚಿಕಿತ್ಸೆಯನ್ನೂ ಶ್ರೀಸಿದ್ಧಾರ್ಥ ಆಸ್ಪತ್ರೆಯ ವೈದ್ಯರು ನಿರ್ವಹಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿರುವುದನ್ನು ಇದೇ ಸಂದರ್ಭದಲ್ಲಿ ಶ್ಲಾಸಿದರು.
1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮತ್ತು ರ್ಯಾಂಕ್ ಪಡೆದ 50 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪಿ ಹೆಚ್ ಡಿ ಪದವಿ ಪಡೆದ ಎಲ್ಲಾ ಅಭ್ಯರ್ಥಿ ಅಭಿನಂದಿಸಿದರು, ಕೋವಿಡ್ ನಿಂದ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಇಂದೂ ಸಹ ಈ ಕ್ಷೇತ್ರ ತೆವಳುತ್ತಾ ಸಾಗುತ್ತಿದೆ, ಪರಿಶ್ರಮ, ಬದ್ಧತೆ, ಮತ್ತು ಶಿಸ್ತಿನಿಂದ ಇಂದು ನೀವು ಪದವಿ ಪಡೆದಿದ್ದೀರಿ, ಮುಂದೆ ಇದು ಸಮಾಜದ ಮೇಲೆ ಪ್ರತಿಫಲಗೊಳ್ಳಲಿದೆ ಎಂದರು.
ಯುವ ವೃತ್ತಿಪರರು ದೇಶಕ್ಕೆ ತಮ್ಮ ಶಿಕ್ಷಣದಿಂದ ಕೊಡುಗೆ ನೀಡುತ್ತಿದ್ದಾರೆ, ಶಿಕ್ಷಣ ಶಾಂತಿ ಮತ್ತು ಸಾಮರಸ್ಯ ಕಾಪಾಡುತ್ತದೆ, ಶಿಕ್ಷಣ ಮಾನವನ ಹಕ್ಕು ಕೂಡ, ಸಾಮರಸ್ಯದಿಂದ ಕೂಡಿದ ಶಿಕ್ಷಣ ಸಂಪನ್ಮೂಲ ವಿಸ್ತರಿಸುವ, ಸವಾಲು ಎದುರಿಸುವ ಸಾಮರ್ಥ್ಯ ನೀಡುತ್ತದೆ, ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 25 ವರ್ಷದೊಳಗಿನ ಯುವಜನತೆ ಶೇ.50ರಷ್ಟು ಇದ್ದು, ಯುವ ಭಾರತ ಎನಿಸಿದೆ, ಹೆಚ್ಚು ವಿದ್ಯಾವಂತ ಯುವಕರು ಭಾರತದಂತಹ ದೇಶಕ್ಕೆ ಅವಶ್ಯಕವಿದ್ದು, ಯುವಕರ ಕಲ್ಪನೆಗಳೇ ಸಮಾಜದ ಅಭಿವೃದ್ಧಿಗೆ ಬುನಾದಿ ಎಂದರು.
ಯುವ ಜನತೆಗೆ ಹಲವಾರು ಅವಕಾಶ ಲಭ್ಯವಿದ್ದು, ಪ್ರತಿಭಾವಂತರ ಅವಶ್ಯಕತೆಯೂ ಇದೆ, ಶಿಕ್ಷಣ ಸಂಸ್ಥೆ ಮತ್ತು ಪೋಷಕರಿಂದ ಕಲಿತ ಮೌಲ್ಯಗಳು ಸಮಾಜಕ್ಕೆ ಸೇವೆ ನೀಡುವಲ್ಲಿ ನೆರವಾಗುತ್ತವೆ, ವೈವಿಧ್ಯಮಯ ಜಾತಿ, ಧರ್ಮ, ವೇಷಭೂಷಣಗಳು ಆಚಾರ ಮತ್ತು ಪದ್ಧತಿ ಹೊಂದಿರುವ ನಮ್ಮ ಸಮಾಜದಲ್ಲಿ ಹೊಸ ಹೊಸ ವಿಚಾರ ಸೃಜಿಸಿ, ಸಮಸ್ಯೆ ಪರಿಹರಿಸಲು ಯುವಜನತೆ ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.
ಯುಎಸ್ ಸೈನ್ಯದ ಡಿಜಿಟಲ್ ಫೊರೆನ್ಸಿಕ್ಸ್ ನೈಟ್ ಫೌಂಡೇಶನ್ ಸ್ಕೂಲ್ ಆಫ್ ಕಂಪ್ಯೂಟಿಂಗ್ ಮತ್ತು ಮಾಹಿತಿ ವಿಜ್ಞಾನ, ಫ್ರೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಪಕ ಡಾ.ಸೀತಾರಾಮ ಎಸ್ ಅಯ್ಯಂಗಾರ ಅವರಿಗೆ ಸಾಹೇ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅವರು, ಜಾಗತಿಕವಾಗಿ ಗುರುತಿಸಿಕೊಂಡಿರುವ ಸಾಹೇ ವಿಶ್ವವಿದ್ಯಾಲಯದಿಂದ ಗೌರವ ಲಭಿಸಿರುವುದು ಸಂತಸದ ವಿಷಯ, ಇದಕ್ಕೆ ಸಂಸ್ಥೆಗೆ ಅಭಾರಿಯಾಗಿದ್ದೇನೆ ಎಂದರು.
ಘಟಿಕೋತ್ಸವದಲ್ಲಿ ಗೃಹ ಸಚಿವ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಸವ್ಯಸಾಚಿ ಡಾ.ಜಿ.ಪರಮೇಶ್ವರ ಅವರು ಸಾಹೇ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳ ಒಟ್ಟು 1003 ಮಂದಿಗೆ ಪದವಿ ಪ್ರದಾನ ಮಾಡಿದರು, 27 ಮಂದಿಗೆ ಪಿಎಚ್ಡಿ ಪದವಿ, ವೈದ್ಯಕೀಯದಲ್ಲಿ 2, ದಂತ ವೈದ್ಯಕೀಯದಲ್ಲಿ 3 ಮತ್ತು ಇಂಜಿನಿಯರಿಂಗ್ ನಲ್ಲಿ 7 ಮಂದಿ ಸೇರಿದಂತೆ ಒಟ್ಟು 12 ಮಂದಿಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಿದರು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿ ಮಂಡಿಸಿದರು, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಪರವಾಗಿ ಡಾ. ಶಶಿ ತರೂರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಹೇ ವಿವಿ ಕುಲಸಚಿವ ಡಾ.ಎಂ.ಝಡ್.ಕುರಿಯನ್, ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಡಾ.ಜಿ.ಎಸ್.ಆನಂದ್, ಸಾಹೇ ವಿಶ್ವ ವಿದ್ಯಾಲಯದ ಕುಲಾಧಿಪತಿ ಸಲಹೆಗಾರ ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ.ಟಿ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಪ್ರವೀಣ್ ಕುಡುವ, ಬೇಗೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ದಿವಾಕರ್, ಶ್ರೀಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರವಿಪ್ರಕಾಶ, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್.ಜಿ, ಉಪ ಕುಲಸಚಿವ ಡಾ.ಸುದೀಪ್ ಕುಮಾರ್ ಹಾಜರಿದ್ದರು.
Comments are closed.