ಗುಬ್ಬಿ : ತಾಲೂಕಿನ ನಿಟ್ಟೂರು ಕೆರೆಯಲ್ಲಿ ತಾಯಿ ಹಾಗೂ ತನ್ನ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ.
ತಾಯಿ ವಿಜಯ ಲಕ್ಷ್ಮಿ,(25) ಯಶವಂತ್ ನಾಯಕ (5), ಜಸ್ವಂತ್ ನಾಯಕ (1).
ಕಳೆದ ಮೂರು ತಿಂಗಳ ಹಿಂದೆ ತನ್ನ ಗಂಡ ತೀವ್ರ ಅನಾರೋಗ್ಯದ ಹಿನ್ನೆಲೆ ಮರಣ ಹೊಂದಿದ್ದರ ಕಾರಣ ತೀವ್ರ ಮನನೊಂದು, ಜಿಗುಪ್ಸೆಗೊಂಡು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಾಯಿ ಹಾಗೂ ಒಂದು ವಷರ್ದ ಮಗುವಿನ ಶವ ದೊರಕಿದ್ದು ಇನ್ನೊಬ್ಬನ ಮಗ ಶವ ಇನ್ನೂ ದೊರೆತಿಲ್ಲ ಹಾಗಾಗಿ ಅಗ್ನಿಶಾಮಕ ದಳ ತೀವ್ರಹುಡುಕಾಟ ನಡೆಸುತ್ತಿದ್ದು ಸ್ಥಳದಲ್ಲೇ ಅಗ್ನಿಶಾಮಕ ದಳದ ಅಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದಾರೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get real time updates directly on you device, subscribe now.
Prev Post
Next Post
Comments are closed.