ಮಧುಗಿರಿ: ತಾಲ್ಲೂಕಿನ ರಂಟವಳಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಸಹ ಶಿಕ್ಷಕ ಲಕ್ಷ್ಮಿಕಾಂತ್ ಪೋಕ್ಸೋ ಕಾಯ್ದೆ ಅಡಿ ಅಮಾನತಿಗೆ ಒಳಗಾಗಿದ್ದಾರೆ, ದುಷ್ಕೃತ್ಯದ ಬಗ್ಗೆ ದೂರುಗಳಿದ್ದರೂ ಕ್ರಮ ಜರುಗಿಸದೆ ನಿರ್ಲಕ್ಷ ತೋರಿದ್ದ ಶಾಲೆಯ ಮುಖ್ಯ ಶಿಕ್ಷಕ ಕಾಮಣ್ಣ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ, ಸಾರ್ವಜನಿಕರು, ಪೋಷಕರು, ವಿದ್ಯಾರ್ಥಿನಿಯರ ಹೇಳಿಕೆಗಳ ಅನ್ವಯ ಮಧುಗಿರಿ ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ ಮಂಜುನಾಥ್ ಅಮಾನತುಗೊಳಿಸಿದ್ದಾರೆ.
ಮುಖ್ಯ ಶಿಕ್ಷಕ ಕಾಮಣ್ಣ ಪ್ರತಿದಿನ ಮದ್ಯಪಾನ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗುವುದಲ್ಲದೆ ಸಹ ಶಿಕ್ಷಕ ಲಕ್ಷ್ಮಿಕಾಂತ್ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಗಮನಕ್ಕೆ ಬಂದರು ಎಚ್ಚರಿಕೆ ನೀಡದೆ ಮೇಲಾಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯ ನಿರ್ಲಕ್ಷ ವಹಿಸಿದ ಹಿನ್ನೆಲೆಯಲ್ಲಿ ಡಿಡಿಪಿಐ ಮಂಜುನಾಥ್ ವಿಚಾರಣೆ ಹಾಗೂ ಸೂಕ್ತ ಕ್ರಮ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಮುಖ್ಯ ಶಿಕ್ಷಕ ಕಾಮಣ್ಣ ಅವರನ್ನು ಅಮಾನತುಗೊಳಿಸಿದ್ದಾರೆ.
ಮುಖ್ಯ ಶಿಕ್ಷಕ ಅಮಾನತು
Get real time updates directly on you device, subscribe now.
Prev Post
Next Post
Comments are closed.