ತುಮಕೂರು: ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ಹಾಗೂ ತುಮಕೂರು ವಿವಿ ಸಹಯೋಗ ದೊಂದಿಗೆ ಯೋಗ ವಿಸ್ಮಯ ಖ್ಯಾತಿಯ ಅನಂತ್ ಜೀ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ನಗರದಲ್ಲಿ 8 ದಿನಗಳ ಉಚಿತ ಬೃಹತ್ ಯೋಗ ಶಿಬಿರ ಆಯೋಜನೆ ಗೊಂಡಿದೆ ಎಂದು ಅನಂತ್ಜೀ ಅವರ ಆಪ್ತ ಸಹಾಯಕ ಪ್ರೀತೇಶ್ ತಿಳಿಸಿದರು.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಬಿ.ಹೆಚ್.ರಸ್ತೆಯ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಡಿ.10 ರಿಂದ 17 ರ ವರೆಗೆ ಬೆಳಗ್ಗೆ 5.30 ರಿಂದ 7.30ರ ವರೆಗೆ ಯೋಗ ಶಿಬಿರ ನಡೆಯಲಿದ್ದು, ಶಿಬಿರಾರ್ಥಿಗಳು ಬರುವಾಗ ತಮ್ಮ ಜೊತೆ ಜಮಕಾನ, ನೀರಿನ ಬಾಟಲ್, ನೋಟ್ ಪುಸ್ತಕ, ಪೆನ್ ಮರೆಯದೆ ತರಬೇಕು, ಕೇವಲ 2 ಸಾವಿರ ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮೊ. 7624888882ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.
ಮಾನವ ದೇಹದ ಬಹುತೇಕ ಕಾಯಿಲೆಗಳಿಗೆ ಯೋಗಾಸನ ಮತ್ತು ಪ್ರಾಣಾಯಾಮ ಸಹಕಾರಿಯಾಗಿದ್ದು, ಮನೆಯಲ್ಲಿಯೇ ಇವುಗಳ ಅಭ್ಯಾಸದ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದರು.
ಡಿ.10 ರಂದು ಬೆಳಗ್ಗೆ 10.30 ಗಂಟೆಗೆ ಎಸ್ಐಟಿ ಕಾಲೇಜಿನ ಬಿರ್ಲಾ ಆಡಿಟೋರಿಯಂನಲ್ಲಿ ಅನಂತ್ ಜೀ ಸಾರಥ್ಯದಲ್ಲಿ ನಮ್ಮ ಕೈಯಲ್ಲಿ ನಮ್ಮ ಆರೋಗ್ಯ ಮತ್ತು ಮಧುಮೇಹ ಮುಕ್ತ ಜೀವನ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲೂ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿಕೊಂಡರು. ಆರ್.ಎಲ್.ರಮೇಶ್ಬಾಬು, ದಕ್ಷಿಣಮೂರ್ತಿ, ಶಿವರಾಮ್ ಇತರರು ಇದ್ದರು.
Comments are closed.