ಅಗ್ನಿಬನ್ನಿರಾಯ ಜಯಂತಿಗೆ ನೆರವಾದ ಯಜಮಾನರಿಗೆ ಸನ್ಮಾನ

427

Get real time updates directly on you device, subscribe now.

ತುಮಕೂರು: ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮೂಲ ಪುರುಷ ಅಗ್ನಿ ಬನ್ನಿರಾಯರ ಸ್ವಾಮಿ ಜಯಂತಿಯನ್ನು ಈ ಬಾರಿ ಮಾರ್ಚ್ 28ರಂದು ಹಳ್ಳಿಹಳ್ಳಿಗಳಲ್ಲೂ ತಿಗಳ ಸಮಾಜದವರು ಭಕ್ತಿ ಸಡಗರದಿಂದ ಆಚರಿಸಿದರು.
ಈ ಆಚರಣೆಗೆ ಪ್ರೇರಣೆಯಾಗಿ ನೆರವಾದ ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಯಜಮಾನರು ಹಾಗೂ ಸಹಕರಿಸಿದ ಹಲವು ಮುಖಂಡರನ್ನು ಶುಕ್ರವಾರ ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಕಲ್ಯಾಣಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಎಲ್ಲರನ್ನೂ ಸನ್ಮಾನಿಸಿ ಮಾತನಾಡಿದ ಸಮಾಜದ ಮುಖಂಡ, ನಗರ ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ, ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮೂಲಪುರುಷ ಅಗ್ನಿ ಬನ್ನಿರಾಯರ ಸ್ವಾಮಿ, ಕುಲ ಪುರುಷನ ಸ್ಮರಣೆ ಮಾಡುವ ಮೂಲಕ ನಮ್ಮಲ್ಲಿ ಭಾವೈಕ್ಯತೆ ಬೆಳೆಸಿ, ಸಮಾಜದ ಏಕತೆಗೆಲ್ಲರೂ ಒಗ್ಗೂಡಬೇಕು ಎಂದು ಸಮಾಜದ ಯಜಮಾನರು ತೀರ್ಮಾನ ತೆಗೆದುಕೊಂಡು ಮಾರ್ಗದರ್ಶನ ನೀಡಿದ ಪರಿಣಾಮ ಮಾರ್ಚ್ 28 ರಂದು ಎಲ್ಲೆಡೆ ಅದ್ದೂರಿಯಾಗಿ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆಯಾಯಿತು. ಈ ಮೂಲಕ ಸಮಾಜದ ಸಂಘಟನೆಗೆ ನೆರವಾಗುತ್ತಿರುವ ಯಜಮಾನರು ಹಾಗೂ ಮುಖಂಡರನ್ನು ಗೌರವಿಸಿ, ಕೃತಜ್ಞತೆ ಹೇಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಗ್ನಿಬನ್ನಿರಾಯ ಜಯಂತಿ ಆಚರಣೆಗಾಗಿ ಹಳೆ ಮೈಸೂರು ಭಾಗದ ಒಂದು ಸಾವಿರ ಹಳ್ಳಿಗಳಿಗೆ ಸಮಾಜದಿಂದ ಅಗ್ನಿ ಬನ್ನಿರಾಯರ ಬಾವಚಿತ್ರ ವಿತರಿಸಿ, ಗ್ರಾಮಗಳಲ್ಲಿ ಸಮಾಜದವರು ಸಂಘಟಿತರಾಗಿ ಜಯಂತಿ ಆಚರಿಸಬೇಕು ಎಂದು ಕೋರಲಾಗಿತ್ತು. ಅದರಂತೆ ಎಲ್ಲೆಡೆ ಹಳ್ಳಿಹಳ್ಳಿ, ಮನೆಮನೆಗಳಲ್ಲಿ ಹಬ್ಬದಂತೆ ಜಯಂತಿ ಆಚರಣೆ ಮಾಡಲಾಯಿತು. ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ 28ರಂದು ಅಗ್ನಿಬನ್ನಿರಾಯರ ಜಯಂತಿಯನ್ನು ಭಕ್ತಿ, ಗೌರವದಿಂದ ಆಚರಿಸಿ, ಸಮಾಜದಲ್ಲಿ ಒಗ್ಗಟ್ಟು ಮೂಡಲು ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಪ್ರೆಸ್ ರಾಜಣ್ಣ ಕೋರಿದರು.
ಈ ವೇಳೆ ನಾಲ್ಕು ಕಟ್ಟೆಗಳ ಯಜಮಾನರುಗಳಾದ ಟಿ.ಎಸ್.ಶಿವಕುಮಾರ್, ಕಡಬದ ದಾಸೇಗೌಡರು, ಟಿ.ಜಿ.ಹನುಮಂತರಾಜು, ತುರುವೇಕೆರೆ ಕೃಷ್ಣಪ್ಪ, ಹನುಮಂತರಾಜು, ಕುಣಿಗಲ್ ಮಂಜಣ್ಣ ಅಲ್ಲದೆ, ಗಡಿಯ ಯಜಮಾನರುಗಳಾದ ಗಂಗಹನುಮಯ್ಯ, ಮಾಗಡಿ ನಾರಾಯಣಪ್ಪ, ರಂಗಪ್ಪ, ಕಡಬ ಚಿಕ್ಕತಿಮ್ಮಯ್ಯ, ತುರುವೇಕೆರೆಯ ಆಣೆಕಾರ್ ರಾಜಣ್ಣ, ಕುಣಿಗಲ್ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.
ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜದ ಮುಖಂಡರಾದ ಟಿ.ಎಲ್.ಕುಂಭಯ್ಯ, ಡಿ.ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ವಕೀಲ ನಾರಾಯಣಸ್ವಾಮಿ, ಹನುಮಂತರಾಜು, ಜಿಪಂ ಮಾಜಿ ಉಪಾಧ್ಯಕ್ಷ ಕೃಷ್ಣಮೂರ್ತಿ, ನಿವೃತ್ತ ಪ್ರಾಚಾರ್ಯ ಆಂಜನೇಯ, ಗುಬ್ಬಿ ಮಲ್ಲಪ್ಪ ಹಾಗೂ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೂರ್ಸ್ನ ಮುಖಂಡರನ್ನು ಗೌರವಿಸಲಾಯಿತು.
17 ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ತಿಗಳ ಸಮಾಜದ ನಿವೃತ್ತ ಯೋಧ ಕಳ್ಳಿಪಾಳ್ಯದ ಹೆಚ್.ಬಸವರಾಜು, ಅಗ್ನಿಬನ್ನಿರಾಯರ ಚರಿತ್ರೆ ಸಾರುವ ಹಾಡುಗಳ ದ್ವನಿಮುದ್ರಿಕೆ ಸಿದ್ಧಮಾಡಿಕೊಟ್ಟ ಸಂಗೀತಗಾರರಾದ ಶ್ರೀನಿವಾಸ್, ಡ್ಯಾನಿಯಲ್, ಹೃತಿಕ್ ಅವರನ್ನು ಈ ವೇಳೆ ಪ್ರೆಸ್ ರಾಜಣ್ಣ ಸನ್ಮಾನಿಸಿದರು.

Get real time updates directly on you device, subscribe now.

Comments are closed.

error: Content is protected !!