ತುಮಕೂರು: ಸಿದ್ಧಗಂಗಾ ಆಸ್ಪತ್ರೆಗೆ ಲಯ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಹಾಗೂ ಟೀಂ ಸಾಯಿ ವತಿಯಿಂದ ಮೂರು ಡಯಾಲಿಸಿಸ್ ಯಂತ್ರ ನೀಡಲಾಯಿತು.
ಇದೇ ವೇಳೆ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಮೆಡಿಕಲ್ ಗ್ರೇಡ್ ಆರ್ ಓ ಸಿಸ್ಟಂಗೆ ಕೂಡ ಚಾಲನೆ ನೀಡಲಾಯಿತು. ಎಸ್ಎಂಸಿಆರ್ಐ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಲಯ್ಸ್ ಕ್ಲಬ್ ಸಹಕಾರದಲ್ಲಿ ಸಾರ್ವಜನಿಕರಿಗೆ ಕೈಗೆಟುಕವ ದರದ ಡಯಾಲಿಸಿಸ್ ಸೇವೆ ನೀಡಲು ಅನುಕೂಲ ಮಾಡಿಕೊಟ್ಟಿದ್ದು, ದಿನೇ ದಿನೇ ಹೆಚ್ಚುತ್ತಿರುವ ಡಯಾಲಿಸಿಸ್ ರೋಗಿಗಳಿಗೆ ವರದಾನವಾಗಲಿದೆ ಎಂದರು.
ಲಯ್ಸ್ ಕ್ಲಬ್ ಮುಖ್ಯಸ್ಥ ನಟರಾಜು ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಉನ್ನತ ದರ್ಜೆಯ ಚಿಕಿತ್ಸಾ ಸೌಲಭ್ಯಗಳಿಂದ ಸದಾ ಕಾಲ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು, ಸಿದ್ಧಗಂಗಾ ಮೆಡಿಕಲ್ ಕಾಲೇಜು ಮೂಲಕ ಉಚಿತ ಆರೋಗ್ಯ ಚಿಕಿತ್ಸೆ ಕೂಡ ನೀಡುತ್ತಿದೆ, ಡಯಾಲಿಸಿಸ್ ಕೇಂದ್ರಗಳು ಜಿಲ್ಲೆಯಲ್ಲಿ ಕೊರತೆಯಿರುವುದರಿಂದ ಬೆಂಗಳೂರನ್ನು ಅವಲಂಬಿಸಿ ಪ್ರಯಾಸ ಪಡುವ ರೋಗಿಗಳ ಹಿತ ದೃಷ್ಟಿಯಿಂದ ನಮ್ಮ ಲಯ್ಸ್ ತಂಡ ಡಯಾಲಿಸಿಸ್ ಯಂತ್ರ ಒದಗಿಸಿದ್ದು ನಮ್ಮ ಕೊಡುಗೆ ಸಾರ್ವಜನಿಕರಿಗೆ ತಲುಪುವ ವಿಶ್ವಾಸವಿದೆ ಎಂದರು.
ನೂತನ ಮೆಡಿಕಲ್ ಗ್ರೇಡ್ ಆರ್ ಓ ಸಿಸ್ಟಮ್ ಕುರಿತು ಮಾತನಾಡಿದ ನೆಫ್ರಾಲ್ಟ್ ಡಾ.ಕುಶಾಲ್, ನೂತನ ಮೆಡಿಕಲ್ ಆರ್ ಓ ಸಿಸ್ಟಮ್ ನಿಂದ ದೊರೆಯುವ ಸಂಸ್ಕರಿಸಿದ ನೀರು ರೋಗಿಗಳಿಗೆ ನೀರಿನಿಂದ ಉಂಟಾಗುವ ಎಲ್ಲಾ ಸೂಕ್ಷ್ಮ, ಅತಿಸೂಕ್ಷ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ, ಉನ್ನತ ದರ್ಜೆಯ ಆರ್ಓ ಸಿಸ್ಟಂ ಅಳವಡಿಸಿಕೊಂಡ ಏಕೈಕ ಆಸ್ಪತ್ರೆ ನಮ್ಮದಾಗಿದ್ದು ಸುರಕ್ಷತೆಯಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಲಿದೆ ಎಂದರು.
ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್, ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಸುರೇಶ್ ರಾಮು, ಲಯ್ಸ್ ಫ್ಟ್ ಡಿಸ್ಟ್ರಿಕ್ಟ್ ಗವರ್ನರ್ ಮೋಹನ್ ಕುಮಾರ್, ಸೆಕೆಂಡ್ ಡಿಸ್ಟ್ರಿಕ್ಟ್ ಗವರ್ನರ್ ಡಾ.ಜಿ.ಮೋಹನ್, ಡಿಸ್ಟ್ರಿಕ್ಟ್ ಅಂಬಾಸಿಡರ್ ಎಂ.ವೇಣುಗೋಪಾಲ ಶೆಟ್ಟಿ ಇತರರು ಇದ್ದರು.
Comments are closed.