ಹಣ ದುರ್ಬಳಕೆ- ಗ್ರಾಪಂ ಅಧ್ಯಕ್ಷನ ಸದಸ್ಯತ್ವ ರದ್ದು

101

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಗಾಂಧಿ ಪುರಸ್ಕಾರಕ್ಕೆ ಪಾತ್ರವಾಗಿದ್ದ ಚಿಕ್ಕನಾಯಕನ ಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೋರಗೆರೆ ಗ್ರಾಪಂನ 14ನೇ ಹಣಕಾಸು ಯೋಜನೆಯಲ್ಲಿ ಹಣ ದುರ್ಬಳಕೆ ಹಿನ್ನೆಲೆ ಹಾಲಿ ಅಧ್ಯಕ್ಷ ಬಿ.ಎಸ್.ದಿನೇಶ್ ಅವರ ಸದಸ್ಯತ್ವ ರದ್ದುಗೊಳಿಸಿ ತುಮಕೂರು ಜಿಪಂ ಕುಂದು ಕೊರತೆ ನಿವಾರಣಾ ಪ್ರಾಧಿಕಾರ ತೀರ್ಪು ನೀಡಿದೆ.

ಗ್ರಾಪಂ ಸದಸ್ಯರಾಗಿದ್ದ ಬಿ.ಎಸ್.ದಿನೇಶ್ ನಕಲಿ ಬಿಲ್ಲುಗಳನ್ನು ಸೃಷ್ಟಿಸಿ 14ನೇ ಹಣಕಾಸು ಯೋಜನೆಯ ನಿಯಮ ಉಲ್ಲಂಸಿ 32 ಸಾವಿರ ರೂ. ಗ್ರಾಪಂ ಖಾತೆಯಿಂದ ಪಡೆದಿದ್ದಾರೆ ಎಂದು ಲಂಚ ಮುಕ್ತ ಕಾರ್ನಾಟಕ ನಿರ್ಮಾಣ ವೇದಿಕೆಯ ಎನ್.ಎಲ್.ಮಣಿಕಂಠ ಎಂಬುವವರು ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಕಾರ್ಯಾಲಯಕ್ಕೆ 2022 ಜೂನ್ 24 ರಂದು ದೂರು ಸಲ್ಲಿಸಿದ್ದರು, ಪ್ರಕರಣ ಬಗ್ಗೆ ಸುಧೀರ್ಘ ವಿಚಾರಣೆ ನಡೆಸಿದ್ದ ಪ್ರಾಧಿಕಾರ 2023 ನವೆಂಬರ್ 29 ರಂದು ಆದೇಶ ಹೊರಡಿಸಿದ್ದು ಆರೋಪಿತ ಹಾಲಿ ಕೋರಗೆರೆ ಗ್ರಾಪಂ ಅಧ್ಯಕ್ಷ ಬಿ.ಎಸ್.ದಿನೇಶ್ ಸದಸ್ಯತ್ವ ರದ್ದುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಪಂ ಸಿಇಒಗೆ ಆದೇಶದಲ್ಲಿ ಶಿಫಾರಸ್ಸು ಮಾಡಿದೆ ಹಾಗೂ ಅಂದಿನ ಪ್ರಭಾರಿ ಪಿಡಿಒ, ನಿವೃತ್ತ ಗ್ರಾಪಂ ಕಾರ್ಯದರ್ಶಿ ಟಿ.ಕೆಂಚಯ್ಯ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದು ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲು ಜಿಪಂ ಸಿಇಒಗೆ ಪ್ರಾಧಿಕಾರ ಶಿಫಾರಸ್ಸು ಮಾಡಿದೆ ಹಾಗೂ ಈ ಅಕ್ರಮಗಳ ಬಗ್ಗೆ ಪ್ರಾಧಿಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಆರೋಪದ ಮೇಲೆ ಹಾಲಿ ಪಿಡಿಒ ಎನ್.ನವೀನ್ ಕುಮಾರ್ ಗೆ 5 ಸಾವಿರ ರೂ. ದಂಡ ವಿಧಿಸಲಾಗಿದ್ದು, ಪಾವತಿಸಲು 30 ದಿನಗಳ ಗಡುವು ನೀಡದೆ.

Get real time updates directly on you device, subscribe now.

Comments are closed.

error: Content is protected !!