ಹೊಸ ಆವಿಷ್ಕಾರಗಳಿಂದ ಜ್ಞಾನ ಹೆಚ್ಚಲಿದೆ

ಶೇಷಾದ್ರಿಪುರಂ ಕಾಲೇಜಿನಲ್ಲಿ ಒಪನ್‌ ಎಐ ಡೇ 2023 ಕಾರ್ಯಕ್ರಮ ಯಶಸ್ವಿ

312

Get real time updates directly on you device, subscribe now.


ತುಮಕೂರು:ಜೀವನದಲ್ಲಿ ಉತ್ತಮ ಕೌಶಲ್ಯ, ಅಧ್ಯಯನ ಮತ್ತು ಶಿಸ್ತಿನ ಬದುಕು ರೂಪಿಸಿಕೊಳ್ಳಿ ಎಂದು ಸಪ್ತಗಿರಿ ಪದವಿ ಪೂರ್ವ ಕಾಲೇಜೀನ ಸಿಇಓ ಮೃಣಾಲ್ ಕುಮಾರ್ ಹೇಳಿದರು.

ನಗರದ ಪ್ರತಿಷ್ಠಿತ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ʼಸಂಸ್ಥಿತಾʼ ಕ್ಲಬ್‌ ನ ವತಿಯಿಂದ ಆಯೋಜಿಸಲಾಗಿದ್ದ “ಒಪನ್‌ ಎಐ ಡೇ 2023 ಕೃತಕ ಬುದ್ಧಿಮತ್ತೆಯ ಆನಾವರಣ” ಎಂಬ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಿಗೆ ಕೃತಕ ಬುಧ್ದಿಮತ್ತೆ (ಎಐ) ಹೇಗೆಲ್ಲಾ ನಮ್ಮ ಜೀವನದ ದೈನಂದಿನ ಕೆಲಸಗಳಲ್ಲಿ ಸಹಾಯಮಾಡಲಿದೆ ಮತ್ತು ಅದರ ಪ್ರಾಮುಖ್ಯತೆ ಎಷ್ಟೆಲ್ಲಾ ಇರಲಿದೆ ಎಂದು ತಿಳಿಸಿದರು.

ಪ್ರಪಂಚ ಆರ್ಥಿಕ ಫೋರಂ 4.0 ನ ಪ್ರಕಾರ ನಮ್ಮ ಜ್ಞಾನದ ಜೊತೆ, ಕಲಿಯುತಿರುವ ವಿದ್ಯೆಯನ್ನು ಸಮಯೋಚಿತವಾಗಿ ಉಪಯೋಗಿಸುವ ಅದ್ಭುತ ಕೌಶಲ್ಯ ಮತ್ತು ಜೀವನದ ಮೌಲ್ಯಗಳನ್ನು ಸಹ ಕಲಿಯಬೇಕೇಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಜಿ.ಟಿ. ಮಾತಾನಾಡಿ, ಈಗಿನ ಯುವ ಸಮೂಹ ಕೃತಕ ಬುದ್ದಿಮತ್ತೆಯ ಉಪಯೋಗವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು, ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾಲೇಜಿನಲ್ಲಿ ತರಗತಿ ನಂತರದ ಅವಧಿಯಲ್ಲಿ ಆಸಕ್ತ ವಿಧ್ಯಾರ್ಥಿಗಳು ಸೇರಿ ವಿವಿಧ ವಿಷಯಗಳ ಚರ್ಚಿಸಿ, ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಅಧಿಕ ಪ್ರಯೋಗಗಳು ನಡೆದರೆ ಕಲಿಕಾ ಆಸಕ್ತಿ ಹೆಚ್ಚಲಿದೆ ಎಂದರು.

ಕಾರ್ಯಕ್ರಮ ಆಯೋಜನೆ ಯಶಸ್ವಿಗೊಳಿಸಿದ್ದಕ್ಕೆ
ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ʼಸಂಸ್ಥಿತಾʼ ಕ್ಲಬ್ ನ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ನಗರದ ವಿವಿಧ ಶಾಲಾ-ಕಾಲೇಜುಗಳಿಂದ ಸುಮಾರು 650 ಕ್ಕೊ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ, ಕೃತಕ ಬುದ್ಧಿಮತ್ತೆಯ ವಿವಿಧ ಪ್ರಕಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮುಖ್ಯಸ್ಥೆ ಪ್ರೊ.ಅನುರಾಧ ಕೆ.ಎನ್‌, ʼಸಂಸ್ಥಿತಾʼ ಕ್ಲಬ್ ನ ಸಂಯೋಜಕ ಪ್ರೊ.ಮಂಜುನಾಥ.ಜಿ.ಎಲ್‌, ಪ್ರೊ ಲಕ್ಷ್ಮೀನಾರಾಯಣ್‌ ಎನ್‌. ಮತ್ತು ಕಂಪ್ಯೂಟರ್‌ ಸ್ಯೆನ್ಸ್‌ ವಿಭಾಗದ ಅಧ್ಯಾಪಕರೆಲ್ಲರೂ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!