ತುಮಕೂರು: 2023 ಮುಂಗಾರು ಹಂಗಾಮಿನಲ್ಲಿ ಆದ ಮಳೆಯ ಕೊರತೆಯಿಂದ ಶೇ.50 ಕ್ಕಿಂತ ಹೆಚ್ಚು ಬೆಳೆಯ ಇಳುವರಿ ನಷ್ಟವಾಗಿದ್ದರಿಂದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮುಂಗಾರು 2023ರಡಿಯಲ್ಲಿ ಮಧ್ಯ ಋತುವಿನ ಪ್ರತಿಕೂಲ ಹವಾಮಾನ ನೇರ ಪಾವತಿಯಡಿ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಬೆಳೆಯ ಇಳುವರಿ ಮಾಹಿತಿ ಲಭ್ಯವಾದ ನಂತರ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಈಗಾಗಲೇ ಪಾವತಿಯಾದ ಮೊತ್ತವನ್ನು ಹೊಂದಾಣಿಕೆ ಮಾಡಿ ಉಳಿಕೆ ಮೊತ್ತವನ್ನು ರೈತರಿಗೆ ಪಾವತಿ ಮಾಡಲಾಗುವುದು.
ಪ್ರಸಕ್ತ ಸಾಲಿನಲ್ಲಿ 2023 ಮುಂಗಾರು ಹಂಗಾಮಿನಲ್ಲಿ ಪ್ರಸ್ತುತ ಸ್ವೀಕೃತವಾದ 38982 ಅರ್ಜಿಗಳಿಗೆ ರೂ.1295.24 ಲಕ್ಷ ಪರಿಹಾರವನ್ನು ವಿಮೆಗೆ ನೋಂದಾಯಿಸಿದ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದ್ದು, ತಾಲ್ಲೂಕುವಾರು ವಿವರ ಈ ಕೆಳಕಂಡಂತಿರುತ್ತದೆ.
ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆ ವಿಮೆಗೆ 6364 ರೈತರು ಅರ್ಜಿ ಸಲ್ಲಿಸಿದ್ದು, 240.26 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ಗುಬ್ಬಿ ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆ ವಿಮೆಗೆ 2674 ರೈತರು ನೋಂದಾಯಿಸಿದ್ದು, 85.65ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ಕುಣಿಗಲ್ ತಾಲ್ಲೂಕಿನಲ್ಲಿ ರಾಗಿ ಬೆಳೆಗೆ 1162 ರೈತರು ನೋಂದಾಯಿಸಿದ್ದು, 20.09ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ತಿಪಟೂರು ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆ ವಿಮೆಗೆ 6596 ರೈತರು ಅರ್ಜಿ ಸಲ್ಲಿಸಿದ್ದು, 160.54 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ತುಮಕೂರು ತಾಲ್ಲೂಕಿನಲ್ಲಿ ರಾಗಿ, ತೊಗರಿ ಬೆಳೆ ವಿಮೆಗೆ 1191 ರೈತರು ಅರ್ಜಿ ಸಲ್ಲಿಸಿದ್ದು, 32.78 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು,
ತುರುವೇಕೆರೆ ತಾಲ್ಲೂಕಿನಲ್ಲಿ ರಾಗಿ ಬೆಳೆ ವಿಮೆಗೆ 2519 ರೈತರು ಅರ್ಜಿ ಸಲ್ಲಿಸಿದ್ದು, 54.14 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ಕೊರಟಗೆರೆ ತಾಲ್ಲೂಕಿನಲ್ಲಿ ರಾಗಿ, ಮುಸುಕಿನ ಜೋಳ ಬೆಳೆ ವಿಮೆಗೆ 6983 ರೈತರು ಅರ್ಜಿ ಸಲ್ಲಿಸಿದ್ದು, 262.21 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ಮಧುಗಿರಿ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆ ವಿಮೆಗೆ 6240 ರೈತರು ಅರ್ಜಿ ಸಲ್ಲಿಸಿದ್ದು, 225.90 ಲಕ್ಷ ರೂ. ಪರಿಹಾರ ರೈತರ ಖಾತೆಗೆ ಜಮೆ ಮಾಡಲಾಗುವುದು, ಪಾವಗಡ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆ ವಿಮೆಗೆ 698 ರೈತರು ಅರ್ಜಿ ಸಲ್ಲಿಸಿದ್ದು, 56.93 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು, ಶಿರಾ ತಾಲ್ಲೂಕಿನಲ್ಲಿ ರಾಗಿ, ತೊಗರಿ, ಮುಸುಕಿನ ಜೋಳ ಬೆಳೆ ವಿಮೆಗೆ 4555 ರೈತರು ಅರ್ಜಿ ಸಲ್ಲಿಸಿದ್ದು, 156.74 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Comments are closed.