ಕಳಪೆ ಕಡಲೆ ಬೇಳೆ ಮಾರಾಟಕ್ಕೆ ಆಕ್ರೋಶ

51

Get real time updates directly on you device, subscribe now.


ಕುಣಿಗಲ್: ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವ ಬ್ಯಾನರ್ ಹಾಕಿಕೊಂಡು ಕಳಪೆ ಗುಣಮಟ್ಟದ ಭಾರತ್ ಬ್ರಾಂಡ್ ನ ಕಡಲೆ ಬೇಳೆ ಮಾರಾಟ ಮಾಡುತ್ತಿದ್ದ ವಾಹನದ ಬಳಿ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಮಾರಾಟ ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಪಟ್ಟಣದಲ್ಲಿ ನಡೆಯಿತು.

ಪಟ್ಟಣದ ಬಿಎಂ ರಸ್ತೆಯಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿಯಲ್ಲಿ ಎನ್ಸಿಸಿಎಫ್ ಸಹಯೋಗದಲ್ಲಿ ದಿನ ಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಎಂದು ಪ್ರಧಾನಿ ಮೋದಿ ಭಾವಚಿತ್ರ ಹಾಕಿ ಸರಕು ಸಾಗಣೆ ವಾಹನದಲ್ಲಿ ವ್ಯಕ್ತಿಯೊಬ್ಬ ಆಟ ಗೋದಿ ಹಿಟ್ಟು ಕೆಜಿಗೆ 27.50, ಈರುಳ್ಳಿ ಕೆಜಿಗೆ 25 ಹಾಗೂ ಕಡಲೆ ಬೇಳೆ ಕೆಜಿಗೆ 60 ರೂ ಎಂದು ಮಾರಾಟ ಮಾಡುತ್ತಿದ್ದ, ಆಟ, ಈರುಳ್ಳಿ ಕೇಳಿದರೆ ಇಲ್ಲ ಎಂದು ಭಾರತ್ ಬ್ರಾಂಡ್ ನ ಕಡಲೆ ಬೇಳೆ ಕೆಜಿ ಪ್ಯಾಕೇಟ್ ಮಾರಾಟ ಮಾಡುತ್ತಿದ್ದು, ಬೇಳೆ ಖರೀದಿ ಮಾಡಿ ಮನೆಗೆ ಕೊಂಡೊಯ್ದ ಜನ, ಕಡಲೆ ಬೇಳೆ ಹುಳುಕಿನಿಂದ ಕೂಡಿದ್ದು ಕಂಡು ಬಂತು, ಕೂಡಲೆ ವಾಹನದ ಬಳಿ ಬಂದ ನಾಗರಿಕರು ಮೋದಿ ಚಿತ್ರ ಹಾಕಿಕೊಂಡು ಕಳಪೆ ಬೇಳೆ ಏಕೆ ಮಾರಾಟ ಮಾಡುತ್ತಿದ್ದೀಯಾ, ಸರ್ಕಾರಿದಂದ ನಿಮಗೆ ಯಾವ ಆದೇಶ ಇದೆ ನೀಡಿ ಎಂದಾಗ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೂಕ್ತ ಉತ್ತರ ನೀಡಲು ತಡಬಡಾಯಿಸಿದ, ಘಟನೆಯನ್ನು ತೀವ್ರವಾಗಿ ಖಂಡಿಸಿದ ನಾಗರಿಕರು ಬಿಜೆಪಿ ಮುಖಂಡರ ಗಮನಕ್ಕೆ ತಂದರಲ್ಲದ ಮೋದಿ ಭಾವಚಿತ್ರ ಇದ್ದ ಬ್ಯಾನರ್ ತೆರವುಗೊಳಿಸಲು ಹೇಳಿದರು.

ತಾಲೂಕು ಬಿಜೆಪಿ ಕಾರ್ಯದರ್ಶಿ ದೇವರಾಜು, ಪುರಸಭೆ ಸದಸ್ಯ ಕೃಷ್ಣ ಸ್ಥಳಕ್ಕಾಗಮಿಸಿ ಮಾರಾಟ ಮಾಡುತ್ತಿದ್ದವರನ್ನು ವಿಚಾರಿಸಿ ತರಾಟೆಗೆ ತೆಗೆದುಕೊಂಡರು, ಮಾರಾಟ ಮಾಡುತ್ತಿದ್ದ ವ್ಯಕ್ತಿ ನಮಗೆ ಬೆಂಗಳೂರಿನಿಂದ ನೀಡಿದ್ದು ಇನ್ನೊಮ್ಮೆ ಇಲ್ಲಿಗೆ ಬರುವುದಿಲ್ಲ ಎಂದು ಹೊರಡಲು ಮುಂದಾದರು, ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರು ಆಗಮಿಸುವುದು ವಿಳಂಬವಾದ ಕಾರಣ ಜನದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾರಾಟಗಾರನಿಗೆ ಎಚ್ಚರಿಕೆ ನೀಡಿ ಕಳಿಸಿದರು, ಘಟನೆ ಬಗ್ಗೆ ಮಾತನಾಡಿದ ದೇವರಾಜು, ಲೋಕಸಭೆ ಚುನಾವಣೆ ಸಮಯದಲ್ಲಿ ಪ್ರಧಾನಿಗೆ ಕೆಟ್ಟ ಹೆಸರು ತರಲು ಈ ರೀತಿ ಹುನ್ನಾರ ನಡೆಯುತ್ತಿದೆ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು, ಇಂತಹ ಕಳಪೆ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದರು.

ಪುರಸಭೆ ಸದಸ್ಯ ಕೃಷ್ಣ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ನ್ಯಾಷನಲ್ ಕೋ ಆಪರೇಟೀವ್ ಕನ್ಸೂಮರ್ ಫೆಡರೇಶನ್ ಆಫ್ ಇಂಡಿಯಾದ ಬೆಂಗಳೂರು ಶಾಖೆಯ ಜನರಲ್ ಮೇನೇಜರ್ ಅವರ ಗಮನಕ್ಕೆ ವಿಷಯ ಮುಟ್ಟಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಕಳಪೆ ಬೇಳೆ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ ಎಂದರು.

Get real time updates directly on you device, subscribe now.

Comments are closed.

error: Content is protected !!