ತಹಶೀಲ್ದಾರ್ ರಿಂದ ಮೂಢನಂಬಿಕೆ ಬಗ್ಗೆ ತಿಳುವಳಿಕೆ

88

Get real time updates directly on you device, subscribe now.


ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ವರಾಹಸಂದ್ರ ಗೊಲ್ಲರಟ್ಟಿ ಗ್ರಾಮದಲ್ಲಿ ಬಾಣಂತಿ, ಮಗು ಮತ್ತು ಇಬ್ಬರು ಋತುಮತಿಯರಾದ ಹೆಣ್ಣು ಮಕ್ಕಳನ್ನು ಊರ ಹೊರಗಿಟ್ಟ ವಿಚಾರ ತಿಳಿದ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೂಢನಂಬಿಕೆ ಬಗ್ಗೆ ತಿಳುವಳಿಕೆ ನೀಡಿ, ಹೆಣ್ಣು ಮಕ್ಕಳನ್ನು ಮನೆಯೊಳಗೆ ಸೇರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಹಲವು ತಿಂಗಗಳಿಂದ ತಾಲ್ಲೂಕು ದಂಡಾಧಿಕಾರಿ ವೈ.ಎಂ.ರೇಣುಕುಮಾರ್ ಒಳಗೊಂಡಂತೆ ಹಲವು ಮೇಲಾಧಿಕಾರಿಗಳ ತಂಡ ತಾಲ್ಲೂಕಿನ ಪ್ರತಿಯೊಂದು ಗೊಲ್ಲರಹಟ್ಟಿಗಳಿಗೆ ಭೇಟಿ ಕೊಟ್ಟು ಮೂಢನಂಬಿಕೆಗಳ ವಿರುದ್ಧ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಾ ಬಂದಿದ್ದರು, ಆದರೆ ವರಾಹಸಂದ್ರ ಗೊಲ್ಲರಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಗಳ ವಿರುದ್ಧ ಅಧಿಕಾರಿಗಳು ಮಾಡಿದ ಕಾರ್ಯಕ್ರಮಕ್ಕೂ ಜಗ್ಗದೆ ಗ್ರಾಮದವರು ಹೆಣ್ಣು ಮಕ್ಕಳನ್ನು ಊರಿನಿಂದ ಆಚೆ ಇಡುವ ಪದ್ಧತಿಯನ್ನೇ ಮುಂದುವರಿಸಿದ್ದರು, ಅದರಲ್ಲಿ ಒಬ್ಬ ಬಾಣಂತಿ ಮಹಿಳೆ ಮತ್ತು ಮಗು, ಇನ್ನಿಬ್ಬರು ಋತುಮತಿಯರಾದ ಹೆಣ್ಣು ಮಕ್ಕಳನ್ನು ಊರಿನಿಂದ ಆಚೆ ಇಟ್ಟಿದ್ದರು, ವಿಷಯ ತಿಳಿದು ತಹಶೀಲ್ದಾರ್ ವರಾಹಸಂದ್ರ ಗೊಲ್ಲರಟ್ಟಿ ಗ್ರಾಮಕ್ಕೆ ತಮ್ಮ ಸಿಬ್ಬಂದಿಗಳೊಂದಿಗೆ ಭೇಟಿ ಕೊಟ್ಟು ಗ್ರಾಮದ ಹಿರಿಯರು ಮತ್ತು ಮಹಿಳೆಯರನ್ನು ಒಂದೆಡೆ ಸೇರಿಸಿ ಬಾಣಂತಿಯರು, ಋತುಮತಿಯರಾದ ಮಕ್ಕಳನ್ನ ಸಂಪ್ರದಾಯದ ಅಂದಾನುಕರಣೆಯ ನೆಪದಲ್ಲಿ ಹೊರಗಿಡುವುದು ಕಾನೂನಿನ ರೀತಿ ಅಪರಾಧ, ಅಲ್ಲದೆ ಈಗ ಹುಟ್ಟಿದ ಮಗು ಮತ್ತು ತಾಯಿಯ ಆರೋಗ್ಯ ಬಹಳ ಮುಖ್ಯ, ಇಂತಹ ಮಕ್ಕಳು ಅಪೌಷ್ಟಿಕ ಮಕ್ಕಳಾಗಿ ನಂತರ ರೋಗಿಷ್ಟಿ ಮಕ್ಕಳಾಗುತ್ತವೆ, ಆದ್ದರಿಂದ ಗ್ರಾಮದ ಯಾವೊಬ್ಬ ಮಹಿಳೆಯನ್ನೂ ಊರಿನಾಚೆ ಇಡಬಾರದು ಎಂದು ತಿಳಿ ಹೇಳಿ ಗ್ರಾಮದ ಪೂಜಾರಿ ಕುಟುಂಬದ ಋತುಮತಿಯಾದ ಹೆಣ್ಣು ಮಗಳನ್ನು ಮನೆಗೆ ಸೇರಿಸುವ ಮೂಲಕ ನೀವು ಎಲ್ಲರಿಗೂ ಮಾದರಿಯಾಗಿ ಎಂದು ತಹಶೀಲ್ದಾರ್ ಬುದ್ಧಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ರಂಗಸ್ವಾಮಿ, ಗ್ರಾಮಲೆಕ್ಕಿಗ ಅರುಣ್ ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

Get real time updates directly on you device, subscribe now.

Comments are closed.

error: Content is protected !!