ಸಾರ್ವಜನಿಕ ರಸ್ತೆ ಅತಿಕ್ರಮಣ ತೆರವು

327

Get real time updates directly on you device, subscribe now.

ಕುಣಿಗಲ್: ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್ ನೇತೃತ್ವದಲ್ಲಿ, ಸಿಬ್ಬಂದಿ ಪಟ್ಟಣದ ಗ್ರಾಮದೇವತೆ ವೃತ್ತದಲ್ಲಿ ಸಾರ್ವಜನಿಕ ರಸ್ತೆ ಅತಿಕ್ರಮಣ ಮಾಡಿದ್ದ ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಸಾರ್ವಜನಿಕ ರಸ್ತೆ ಅತಿಕ್ರಮಣ ತೆರವುಗೊಳಿಸಿದರು.
ಪಟ್ಟಣದ ಗ್ರಾಮದೇವತೆ ವೃತ್ತ ಮೈಸೂರು, ತುಮಕೂರು ಬೆಂಗಳೂರು ಮಾರ್ಗವಾಗಿ ವಾಹನಗಳು ಸಂಚರಿಸುವ ಜಂಕ್ಷನ್ ವೃತ್ತವಾಗಿದೆ, ದಿನಾಲೂ ವಾಹನ ಸಂದಣಿ ಹೆಚ್ಚಿದ್ದು, ವೃತ್ತಕ್ಕೆ ಹೊಂದಿಕೊಂಡ ರಸ್ತೆಯಲ್ಲಿರುವ ಹೂವಿನ ಅಂಗಡಿಯವರು ಸಾರ್ವಜನಿಕ ರಸ್ತೆಯನ್ನು 10 ರಿಂದ 15 ಅಡಿ ಅತಿಕ್ರಮಿಸಿ ಅಂಗಡಿ ಇಟ್ಟಿದ್ದು, ಗ್ರಾಹಕರು ಹೂ ಸೇರಿದಂತೆ ಇತರೆ ಖರೀದಿಗೆ ಹೆದ್ದಾರಿಯಲ್ಲೆ ವಾಹನ ನಿಲ್ಲಿಸುವ ಕಾರಣ ಜಂಕ್ಷನ್ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತು. ಇದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆಯಾಗಿ ಸಂಚಾರ ನಿರ್ವಹಣೆಗೆ ಪೊಲೀಸರು ಪರದಾಡುವಂತಾಗಿತ್ತು.
ಪುರಸಭೆ ಪರಿಸರ ಅಭಿಯಂತರ ಚಂದ್ರಶೇಖರ, ಆರೋಗ್ಯ ನಿರೀಕ್ಷಕಿ ಮಮತಾ ಸಿಬ್ಬಂದಿಯೊಂದಿಗೆ ಆಗಮಿಸಿದ ಮುಖ್ಯಾಧಿಕಾರಿ ರಸ್ತೆ ಅತಿಕ್ರಮಿಸಿ ಇಡಲಾಗಿದ್ದ ಹೂವು, ಗ್ರಂಧಿಗೆ ಇತರೆ ಸಾಮಾನು ತೆರವುಗೊಳಿಸಿ, ನಿಗದಿತ ರಸ್ತೆಯ ಅಂಚಿಗೆ ವ್ಯಾಪಾರ ನಿರ್ವಹಣೆಗೆ ತಾಕೀತು ಮಾಡಿದರಲ್ಲದೆ ಪುನಹ ಅತಿಕ್ರಮಿಸಿದಲ್ಲಿ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡಿ, ಜೆಸಿಬಿ ಮೂಲಕ ರಸ್ತೆಗೆ ಹಾಕಲಾಗಿದ್ದ ಮಣ್ಣು ತೆರವುಗೊಳಿಸಿದರು.
ಮುಖ್ಯಾಧಿಕಾರಿಗಳ ಕಾರ್ಯ ಶ್ಲಾಘಿಸಿದ ಪುರಸಭೆ ಹಿರಿಯ ಸದಸ್ಯ ಅರುಣಕುಮಾರ, ದೊಡ್ಡಪೇಟೆ ಮುಖ್ಯ ರಸ್ತೆಯಲ್ಲೂ ಸಾರ್ವಜನಿಕ ರಸ್ತೆ ಒತ್ತುವರಿ ಆಗಿದೆ. ಎರಡೂ ಬದಿಯಲ್ಲೂ ವಾಹನ ನಿಲ್ಲಿಸುವ ಮೂಲಕ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ, ರಸ್ತೆಯ ಇಕ್ಕೆಲದಲ್ಲಿ ಚರಂಡಿ ಇಲ್ಲದೆ ನೀರು ಹರಿಯಲು ಜಾಗವಿಲ್ಲದ ಪರಿಣಾಮ ಪುರಸಭೆ ಲಕ್ಷಾಂತರ ರೂ. ವ್ಯಯಿಸಿ ಮಾಡಲಾದ ರಸ್ತೆ ಹಾಳಾಗುತ್ತಿದೆ, ಆದ್ದರಿಂದ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳುವ ಜೊತೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲ್ಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಮುಖ್ಯಾಧಿಕಾರಿ, ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗೆ ಸದಸ್ಯರು, ಸಾರ್ವಜನಿಕರ ಸಹಕಾರ ಮುಖ್ಯ, ಮುಂದಿನ ದಿನದಲ್ಲಿ ಹಂತ ಹಂತವಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!